‘ನಾನು ಯಾವ ಜಾತಿ ಪರ-ವಿರೊಧವೂ ಅಲ್ಲ, ನನಗೆ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ‘- ಸಿದ್ದರಾಮಯ್ಯ

ಸಿದ್ದರಾಮಯ್ಯ ಭಾಷಣದ ಮಧ್ಯೆ ಎದ್ದು ಮಾತಾಡಿದ ಆರ್​.ವಿ ದೇಶಂಪಾಡೆ ಎಲ್ಲರನ್ನು ಜತೆಗೆ ತೆಗೆದುಕೊಂಡು ಹೋಗುವ ಶಕ್ತಿ ಬ್ರಾಹ್ಮಣರಿಗೆ ಇತ್ತು. ಬಹಳ ಕಾಲದವರೆಗೂ ಅಸ್ಪೃಶ್ಯರು ಮನೆಗೆ ಕರೆದರೂ ಬರುತ್ತಿರಲಿಲ್ಲ. ಯಾರು ಯಾವುದೇ ಜಾತಿಯಲ್ಲಿ ಹುಟ್ಟಿರಲಿ, ಬೆಳೆಯುತ್ತಾ ಮಾನವರಾಗಬೇಕು ಎಂದು ಹೇಳಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು(ಮಾ.16): "ಮನುಷ್ಯತ್ವಕ್ಕೆ ಜಾತಿ ಇಲ್ಲ. ನಾನು ಯಾವುದೇ ಜಾತಿ ಪರವೂ ಅಲ್ಲ, ವಿರುದ್ಧವೂ ಇಲ್ಲ. ನನಗೇ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂದು ಸೋಮವಾರ ವಿಧಾನಸೌಧದಲ್ಲಿ ನಡೆದ ಕಲಾಪದ ವೇಳೆ ಮಾತಾಡಿದ ಸಿದ್ದರಾಮಯ್ಯ, ಹಿಂದೂ ಧರ್ಮ, ಜೈನ ಧರ್ಮ, ಬೌದ್ದ ಧರ್ಮ, ಲಿಂಗಾಯಿತ ಧರ್ಮ ಹುಟ್ಟಲು ಪ್ರಮುಖ ಕಾರಣವೇ ಮಾನವ ಧರ್ಮ ಹುಟ್ಟಬೇಕು ಎಂಬುದು ಎಂದರು.

  ಇನ್ನು, ಗಾಂಧೀಜಿ ಕೂಡ ಅಂಬೇಡ್ಕರ್​​ರನ್ನು ಬ್ರಾಹ್ಮಣರು ಎಂದು ತಿಳಿದುಕೊಂಡಿದ್ದರು. ನಂತರ ಅಂಬೇಡ್ಕರ್​​​​ ದಲಿತರು ಎಂದು ಗೊತ್ತಾಯ್ತು. ನಮಗೆ ಬ್ರಾಹ್ಮಣರ ಬುದ್ದಿ ಇರಬೇಕೇ ಹೊರತು ಬ್ರಾಹ್ಮಣ್ಯವಲ್ಲ. ಮಾಜಿ ಸ್ಪೀಕರ್​​ ರಮೇಶ್​ ಕುಮಾರ್​​ಗೂ ಸಹ ಬ್ರಾಹ್ಮಣ್ಯವಿಲ್ಲ. ಹಾಗೆಯೇ ಆರ್​.ವಿ ದೇಶಪಾಂಡಯೂ ಎಂದೂ ಜಾತೀಯತೆ ಮಾಡುವವರಲ್ಲ ಎಂದರು ಸಿದ್ದರಾಮಯ್ಯ.

  ಸಿದ್ದರಾಮಯ್ಯ ಭಾಷಣದ ಮಧ್ಯೆ ಎದ್ದು ಮಾತಾಡಿದ ಆರ್​.ವಿ ದೇಶಂಪಾಡೆ ಎಲ್ಲರನ್ನು ಜತೆಗೆ ತೆಗೆದುಕೊಂಡು ಹೋಗುವ ಶಕ್ತಿ ಬ್ರಾಹ್ಮಣರಿಗೆ ಇತ್ತು. ಬಹಳ ಕಾಲದವರೆಗೂ ಅಸ್ಪೃಶ್ಯರು ಮನೆಗೆ ಕರೆದರೂ ಬರುತ್ತಿರಲಿಲ್ಲ. ಯಾರು ಯಾವುದೇ ಜಾತಿಯಲ್ಲಿ ಹುಟ್ಟಿರಲಿ, ಬೆಳೆಯುತ್ತಾ ಮಾನವರಾಗಬೇಕು ಎಂದು ಹೇಳಿದರು.

  ಇದನ್ನೂ ಓದಿ: ಕೊರೋನಾ ತಡೆಗೆ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಿಎಸ್​ವೈ ವಿಡಿಯೋ ಕಾನ್ಫರೆನ್ಸ್; ಡಿಸಿಗಳಿಗೆ ಹಲವು ಕಟ್ಟುನಿಟ್ಟಿನ ಸೂಚನೆ

  ಹೀಗೆ ಮಾತು ಮುಂದುವರಿಸಿದ ಅವರು, ದೇಶದಲ್ಲಿ ಜಾತಿ ವ್ಯವಸ್ಥೆ ಹೋಗಬೇಕು. ಆದರೆ, ಎಲ್ಲದಕ್ಕೂ ಇಂದು ಜಾತಿ ಬೇಕಾಗಿದೆ. ಚುನಾವಣೆ ಬಂದರೆ ಸಾಕು ಜಾತಿ ನೋಡುತ್ತಾರೆ. ಯಾರನ್ನಾದರು ಮಿನಿಸ್ಟರ್​​ ಮಾಡಬೇಕಂದ್ರು ಜಾತಿ ನೋಡುತ್ತಾರೆ. ಇದುವರೆಗೂ ಬ್ರಾಹ್ಮಣರಿಗೆ ಯಾವುದೇ ಕಾಯ್ದೆ ಕಾನೂನು ಮಾಡಿಲ್ಲ. ಇತ್ತೀಚೆಗೇನೋ ಬ್ರಾಹ್ಮಣರ ಅಭಿವೃದ್ದಿ ಮಂಡಳಿ ಮಾಡಿಸಿದ್ವಿ, ಅದಕ್ಕಿನ್ನೂ ದುಡ್ಡೇ ಕೊಟ್ಟಿಲ್ಲ ಎಂದರು.

  ಇದಾದ ನಂತರ ಮತ್ತೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇತ್ತೀಚೆಗೆ ಕೆಲವರು ದೆಹಲಿಯ ಜಂತರ್​​ ಮಂತರ್​​ನಲ್ಲಿ ಸಂವಿಧಾನದ ಪ್ರತಿ ಸುಟ್ಟರು. ಸಂವಿಧಾನ ಸಮಸಮಾಜ ನಿರ್ಮಾಣ ಮಾಡಲಿದೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಸುಟ್ಟಿರಬಹುದು. ಒಬ್ಬ ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಅನ್ನುತ್ತಾರೆ. ಆದರೆ, ಭಾರತ ಸಂವಿಧಾನ ಅಮೇರಿಕಾ ಸಂವಿಧಾನದಂತೆ ರಿಜಿಡ್​​ ಅಲ್ಲ. ನಮ್ಮದು ತುಂಬಾ ಉತ್ತಮವಾದ ಸಂವಿಧಾನ. ಸುಪ್ರೀಂಕೋರ್ಟ್​ ತೀರ್ಪು ನೀಡಿದಂತೆಯೇ ಸಂವಿಧಾನವನ್ನು ಯಾರು ಬದಲಾಯಿಸಲು ಸಾಧ್ಯವೇ ಇಲ್ಲ. ಈ ವಿಚಾರ ಸಂವಿಧಾನ ಬದಲಾಯಿಸುತ್ತೇನೆ ಎಂದ ಮಂತ್ರಿಗೆ ಗೊತ್ತಿಲ್ಲ ಅನಿಸುತ್ತದೆ ಎಂದು ಮಾಹಿತಿ ನೀಡಿದರು.
  First published: