ನಾನು ಭಾವುಕ ಜೀವಿ, ಪ್ರತಿದಿನ ಕಣ್ಣೀರು ಹಾಕುತ್ತೇನೆ: ಸಿಎಂ ಕುಮಾರಸ್ವಾಮಿ

ದೇಶದಲ್ಲಿ ಸೂಕ್ಷ್ಮ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಂದಿದೆ. ಮತದಾರರು ಯೋಚನೆ ಮಾಡಿ ಮತದಾನ ಮಾಡಿ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ಸಂವಿಧಾನ ಬದಲಾಯಿಸುವ ಸಂಭವವಿದೆ. ದೇಶದ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

news18
Updated:April 17, 2019, 4:34 PM IST
ನಾನು ಭಾವುಕ ಜೀವಿ, ಪ್ರತಿದಿನ ಕಣ್ಣೀರು ಹಾಕುತ್ತೇನೆ: ಸಿಎಂ ಕುಮಾರಸ್ವಾಮಿ
ಸಿಎಂ ಕುಮಾರಸ್ವಾಮಿ
news18
Updated: April 17, 2019, 4:34 PM IST
ಶಿವಮೊಗ್ಗ (ಏ.17) : ದೇವೇಗೌಡರ ಕುಟುಂಬದವರು ಚುನಾವಣೆ ವೇಳೆ ಕಣ್ಣೀರು ಹಾಕುವ ನಾಟಕ ಆಡುತ್ತಾರೆ ಎಂಬ ಆರೋಪಗಳಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದ ಆನವಟ್ಟಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿರುವ ಕುಮಾರಸ್ವಾಮಿ, ಹೃದಯದಲ್ಲಿ ಭಾವುಕತೆ ಇದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು ಎಂಬ ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ಭಾವುಕ ಜೀವಿ. ಪ್ರತಿದಿನ ಕಣ್ಣೀರು ಹಾಕುತ್ತೇನೆ. ಕಣ್ಣಲ್ಲಿ ನೀರು ಸುಮ್ಮಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ಅವರಿಂದ ಅಳುವುದನ್ನ ಕಲಿಯಬೇಕು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ತಾನು ಭಾವನಾತ್ಮಕ ಜೀವಿಯಾಗಿದ್ದು, ಮೊದಲಿನಿಂದಲೂ ರೈತರ ಕಷ್ಟ ಸುಖಕ್ಕೆ ಸ್ಪಂದಿಸಿಕೊಂಡು ಬೆಳೆದ ವ್ಯಕ್ತಿ. ಅದನ್ನ ನೀವು ಕಲಿಯಬೇಕು ಎಂದು ಎಸ್.ಎಂ. ಕೃಷ್ಣ ಅವರಿಗೆಯೇ ತಿಳಿಹೇಳಿದ್ದಾರೆ.

ಯೋಚನೆ ಮಾಡಿ ಮತದಾನ ಮಾಡಿ

ದೇಶದಲ್ಲಿ ಸೂಕ್ಷ್ಮ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಂದಿದೆ. ಮತದಾರರು ಯೋಚನೆ ಮಾಡಿ ಮತದಾನ ಮಾಡಿ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ಸಂವಿಧಾನ ಬದಲಾಯಿಸುವ ಸಂಭವವಿದೆ. ದೇಶದ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ  ಮೋದಿ ಅವರು ಕೇವಲ ದೇಶದ ಭದ್ರತಾ ದೃಷ್ಟಿಯಿಂದ ನನಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಹಿಂದಿನ ಪ್ರಧಾನಿಗಳು ದೇಶದ ಭದ್ರತೆ ಬಗ್ಗೆ ಯೋಚನೆ ಮಾಡಿರಲಿಲ್ಲವಾ? ಪಾಕಿಸ್ತಾನವನ್ನ ಬಗ್ಗುಬಡಿದಿದ್ದೇವೆ ಎಂದು ಮೋದಿ ಹೇಳುತ್ತಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಅವರು ಯುದ್ದದಲ್ಲಿ ಗೆದ್ದಿರಲಿಲ್ಲವೆ? ದೇಶಕ್ಕೆ ಯಾವ ನಾಯಕರು ಅಭದ್ರತೆ ಕೊಟ್ಡಿಲ್ಲ ಎಂಬುದನ್ನು ಮೋದಿ ಮನವರಿಕೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ.

ಸಾಲ ಮನ್ನಾ ಎಲ್ಲಾ ರೈತರಿಗೆ ಇನ್ನೂ ಯಾಕೆ ತಲುಪಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಚುನಾವಣೆ ಮುಗಿದ ಬಳಿಕ ಉಳಿದ ರೈತರಿಗೆ ಸಾಲ ಮನ್ನಾ ಹಣ ತಲುಪಲಿದೆ. ಶಿವಮೊಗ್ಗದಲ್ಲಿ 1,400 ಕೋಟಿ ರೂ.ನಷ್ಟು ರೈತರ ಸಾಲ ಮನ್ನಾ ಆಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Loading...

ಕೂಲಿ ಕೆಲಸ, ಜಮೀನು ಇಲ್ಲದ ಕುಟುಂಬಗಳಿಗೆ ಉತ್ತಮ ಯೋಜನೆ ತರಲು ನಿರ್ಧರಿಸಿದ್ದೇನೆ. ಅಡಿಕೆ ತೆಂಗು ರೈತರಿಗೆ ಮುಂದಿನ ದಿನಗಳಲ್ಲಿ ಇಸ್ರೇಲ್ ಮಾದರಿಯಲ್ಲಿ ವ್ಯವಸ್ಥೆ ತರಲಿದ್ದೆವೆ. ಸಾಲಮನ್ನಾ ಯೋಜನೆ ಮುಗಿದ ನಂತರ ಮುಂದಿನ ಯೋಜನೆ ತೋಟಗಾರಿಕೆ ಬೆಳೆಗಳಿಗೆ ಅನೇಕ ಯೋಜನೆ ತರುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರು ಇಂದು ಕನಕಪುರದಲ್ಲಿ ಪ್ರಚಾರ ಮಾಡುತ್ತಿರುವ ಕಾರಣ ಶಿವಮೊಗ್ಗಕ್ಕೆ ಬಂದಿಲ್ಲ. ಶುಕ್ರವಾರದಿಂದ 3 ದಿನಗಳ ಕಾಲ ಡಿಕೆಶಿ ಅವರು ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ನಿಖಿಲ್​ನನ್ನು ಅಂತಾರಾಷ್ಡ್ರೀಯ ಮಟ್ಟದ ನಾಯಕನ್ನಗಿ ಮಾಡಲಾಗಿದೆ

ಅಂತಾರಾಷ್ಟ್ರೀಯ ಮಟ್ಟದ ನಾಯಕರನ್ನೂ ಮೀರಿಸಿ ನಿಖಿಲ್​ಗೆ ಮೀಡಿಯಾದಲ್ಲಿ ಪ್ರಚಾರ ಸಿಕ್ಕು ಅಂತಾರಾಷ್ಡ್ರೀಯ ಮಟ್ಟದ ನಾಯಕನ್ನಾಗಿ ಮಾಡಲಾಗಿದೆ. ಅದಕ್ಕೆ ಮೀಡಿಯಾದವರಿಗೆ ಧನ್ಯವಾದಗಳು ಎಂದು ಹೆಚ್​ಡಿಕೆ ವ್ಯಂಗ್ಯ ಮಾಡಿದ್ದಾರೆ.

ಜಾತಿ ವಿಚಾರಗಳನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಲಿಂಗಾಯತ ಸಮುದಾಯದವರಿಗೆ ಯಡಿಯೂರಪ್ಪ ಏನೂ ಮಾಡಿಲ್ಲ ಎಂಬುದನ್ನು ಒಮ್ಮೆ ಯೋಚನೆ ಮಾಡಿ. ಜಾತಿ ವಿಚಾರದಲ್ಲಿ ಅಭಿವೃದ್ಧಿಗೆ ಮೋಸ ಮಾಡಿಕೊಳ್ಳಬೇಡಿ ಎಂದವರು ತಿಳಿಹೇಳಿದ್ಧಾರೆ.

ನನಗೆ ಮಂಡ್ಯ ಕ್ಷೇತ್ರ ಮಾತ್ರ ಮುಖ್ಯವಲ್ಲ. ಮೊದಲ ಹಂತದ 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಮಂಡ್ಯ ಜಿಲ್ಲೆಯ ಜನ ನನ್ನನ್ನ ಸೊರಗಲು ಬಿಡುವುದಿಲ್ಲ. ಮಂಡ್ಯದ ರೈತರು ನಮ್ಮ ಕೈ ಬಿಡಲ್ಲ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದ್ದಾರೆ.

ಮಧು ಬಂಗಾರಪ್ಪ ಚುನಾವಣೆಯಲ್ಲಿ ಗೆಲ್ಲಿಸಿ

ನಮ್ಮ ತಂದೆ ಕಾಲದಲ್ಲಿ ಬಂಗಾರಪ್ಪ ಸಿಎಂ ಆಗಿದ್ದಾಗ ತಂದಿದ್ದ ಅನೇಕ ಯೋಜನೆ ಜಾರಿಯಲ್ಲಿದೆ. ಮಧು ಹೇಳಿರುವ ಕೆಲ ವಿಚಾರಗಳನ್ನು ಪರಿಶೀಲಿಸಿ, ಶಿವಮೊಗ್ಗ ಕ್ಷೇತ್ರದಲ್ಲಿ ನೀರಾವರಿ ಯೋಜನೆ ತರಲಿದ್ದೇವೆ. ಮಧು ಬಂಗಾರಪ್ಪ ಅವರನ್ನು ನಿಮ್ಮ ಕೈಲಿರಿಸಿದ್ದೇವೆ. ನೀವು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಇದನ್ನೂ ಓದಿ : ದೇಶವನ್ನು ಬಿಜೆಪಿ ಮುಕ್ತ ಮಾಡಲು ಜನರ ತೀರ್ಮಾನ ; ಮಧು ಬಂಗಾರಪ್ಪ

ಕೃಷಿಗೆ ಸಂಬಂಧಿಸಿ 46 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೆವೆ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೆನೆ ನಿಮ್ಮ ಹಣ ದುರುಪಯೋಗ ಮಾಡಲ್ಲ. ಅರಣ್ಯ ಭೂಮಿ ಹಕ್ಕು ಪತ್ರಗಳನ್ನ ಇನ್ನೂ ಕೊಟ್ಟಿಲ್ಲ. ಇದಕ್ಕೆ ಅರಣ್ಯ ಕಾಯ್ದೆಯೇ ಕಾರಣವಾಗಿದೆ. ಕೇಂದ್ರ ಸರ್ಕಾರದಿಂದ ಅರಣ್ಯ ಕಾಯ್ದೆಗೆ ಬದಲಾವಣೆಯಾಗಬೇಕಿದೆ. ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆದ್ದರೆ ಲೋಕಸಭೆಯಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲು ಅನೂಕುಲವಾಗಲಿದೆ.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626