• Home
  • »
  • News
  • »
  • state
  • »
  • Pratap Simha: ಉದ್ದೇಶಪೂರ್ವಕವಾಗಿ ಟಿಪ್ಪು ಹೆಸರನ್ನು ತೆಗೆಸಿದ್ದೇನೆ- ಸಂಸದ ಪ್ರತಾಪ್ ಸಿಂಹ

Pratap Simha: ಉದ್ದೇಶಪೂರ್ವಕವಾಗಿ ಟಿಪ್ಪು ಹೆಸರನ್ನು ತೆಗೆಸಿದ್ದೇನೆ- ಸಂಸದ ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

ಮೈಸೂರಿನ ಮಹಾರಾಜರು ಕೊಟ್ಟಿರುವ 100 ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪುವನ್ನು ಬೆಂಬಲಿಸುವವರು ಟಿಪ್ಪು ಕೊಟ್ಟಿರುವ 3 ಸಾಧನೆಗಳನ್ನು ಹೇಳಿ ಸಾಕು. ಇದೇ ಕಾರಣಕ್ಕಾಗಿ ಸಾಕಷ್ಟು ಪ್ರಯತ್ನಪಟ್ಟು ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದ್ದೇನೆ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ. 

ಮುಂದೆ ಓದಿ ...
  • Share this:

ಮೈಸೂರು (ಅ.12): ನಾನು ಉದ್ದೇಶ ಪೂರ್ವಕವಾಗಿ ಟಿಪ್ಪು ಸುಲ್ತಾನ್​ ಅವರ ಹೆಸರನ್ನು ತೆಗೆಸುತ್ತಿದ್ದೇನೆ ಎಂದು ಸಂಸದ ಪ್ರತಾಪ್​ ಸಿಂಹ (MP Pratap Simha) ಹೇಳಿದ್ದಾರೆ. ರೈಲಿನ ಹೆಸರು ಬದಲಾವಣೆಯಾದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್​ ಸಿಂಹ,  ಟಿಪ್ಪು ಎಕ್ಸ್ ಪ್ರೆಸ್ (Tippu Express) ರೈಲಿನ ಹೆಸರನ್ನು, ಒಡೆಯರ್ ಎಕ್ಸ್ ಪ್ರೆಸ್ (Wodeyar Express) ಎಂದು ಬದಲಾಯಿಸಿದ್ದೇನೆ. ಇದಕ್ಕೆ ಮನವಿ ಕೊಟ್ಟಿದ್ದು ನಾನೇ, ಟಿಪ್ಪುವಿನ ಕೊಡುಗೆ ಏನು ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ (Mysuru) ಪ್ರಶ್ನಿಸಿದ್ದಾರೆ. 


ಟಿಪ್ಪುವಿಗೂ ಮೈಸೂರಿಗೂ ಏನು ಸಂಬಂಧ?


ಟಿಪ್ಪು ಸುಲ್ತಾನ ಶ್ರೀರಂಗಪಟ್ಟಣದವನು. ಮೈಸೂರಿಗೆ ಇಲ್ಲಿನ ಅಭಿವೃದ್ಧಿಗೆ ರಾಜರ ಕೊಡುಗೆಯಿದೆ. ಮೈಸೂರಿನ ಮಹಾರಾಜರು ಕೊಟ್ಟಿರುವ 100 ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪುವನ್ನು ಬೆಂಬಲಿಸುವವರು ಟಿಪ್ಪು ಕೊಟ್ಟಿರುವ 3 ಸಾಧನೆಗಳನ್ನು ಹೇಳಿ ಸಾಕು. ಇದೇ ಕಾರಣಕ್ಕಾಗಿ ನಾನು ಉದ್ದೇಶ ಪೂರ್ವಕವಾಗಿಯೇ ಸಾಕಷ್ಟು ಪ್ರಯತ್ನಪಟ್ಟು ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದ್ದೇನೆ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.


ಟಿಪ್ಪು ಸುಲ್ತಾನ ಕನ್ನಡ ವಿರೋಧಿ


ಇನ್ನು ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರು ಬದಲಾವಣೆ ಸಂಬಂಧ ಕೆಲವೊಂದು ಅಪಸ್ವರಗಳು ಕೇಳಿ ಬಂದಿತ್ತು. ಟಿಪ್ಪು ಹೆಸರನ್ನು ರೈಲಿನಿಂದ ತೆಗೆದ ಮಾತ್ರಕ್ಕೆ ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಒಬ್ಬ ಕನ್ನಡ ವಿರೋಧಿ. ಪರ್ಷಿಯನ್ ಭಾಷೆಯನ್ನು ಕನ್ನಡದ ಮೇಲೆ ಹೇರಿದ್ದಾನೆ. ಕಂದಾಯ ಇಲಾಖೆಯಲ್ಲಿನ ಪ್ರತಿಯೊಂದು ಪದಗಳು ಪರ್ಷಿಯನ್ ಕಡೆಯಿಂದ ಬಂದಿದ್ದು, ಅದನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರಿಂದ ನಾವು ಪಾಠ ಕಲಿಯಬೇಕಿಲ್ಲ


ಸಿದ್ದರಾಮಯ್ಯ ಬಗ್ಗೆ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್​ ಸಿಂಹ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾಲಯ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದು, ಆದರೂ ಅವರ ಬಗ್ಗೆ ಸಿದ್ದರಾಮಯ್ಯ ಉಡಾಫೆಯಿಂದ ಮಾತನಾಡುತ್ತಾರೆ ಎಂದ್ರು. ಈ ಹಿಂದೆ ದೇವರಾಜ ಮಾರುಕಟ್ಟೆ ಸಂಬಂಧ ರಾಜರನ್ನು ಏಕ ವಚನದಲ್ಲಿ ಮಹಾರಾಜ ಏನು ಅವನ ಸ್ವಂತ ದುಡ್ಡಿನಿಂದ ಅಭಿವೃದ್ಧಿ ಮಾಡಿದ್ದಾನಾ ಎಂದಿದ್ದರು, ರಾಜ ಕೊಡುಗೆ ಬಗ್ಗೆ ಹರಿವಿಲ್ಲದ ಸಿದ್ದರಾಮಯ್ಯ ಟಿಪ್ಪು ಪರ ಮಾತನಾಡುತ್ತಾರೆ. ಮೈಸೂರಿನ ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಪ್ರತಾಪ್​ ಸಿಂಹ ಟೀಕಿಸಿದ್ದಾರೆ.


ಇದನ್ನೂ ಓದಿ:  Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ‌ ವಿರುದ್ಧ ಲೋಕಾಯುಕ್ತಕ್ಕೆ ದೂರು; RSS ವಿರುದ್ಧ ಅವಾಚ್ಯ ಪದ ಬಳಸಿ ಕೂಗು


ದಸರಾ ಬಗ್ಗೆ ಮಾತಾಡಿದ ಹೆಚ್ ವಿಶ್ವನಾಥ್​ಗೆ ತಿರುಗೇಟು


ಈ ಬಾರಿಯ ಅದ್ಧೂರಿ ದಸರಾ, ಅದ್ವಾನದ ದಸರಾ ಎಂಬ ಎಂಎಲ್​​ಸಿ ಹೆಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮನೆಯಲ್ಲಿ ಮದುವೆಯೊಂದು ನಡೆದರು ಸಹ ಒಂದಷ್ಟು ತಪ್ಪುಗಳಾಗುತ್ತವೆ. ಇದು ಲಕ್ಷಾಂತರ ಜನ ಸಮೂಹ ಸೇರಿ ನಡೆಸಿದ ಕಾರ್ಯಕ್ರಮ, ಒಂದೆರಡು ತಪ್ಪು ಆಗುತ್ತದೆ. ಸುಮಾರು 40 ಲಕ್ಷ ಜನ ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆದಾಗ ಸಮಸ್ಯೆಗಳಾಗೋದು ಸಹಜ. ಅದನ್ನೇ ದೊಡ್ಡದು ಮಾಡಿಕೊಂಡು ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ಏನು ಹೇಳುವುದಿಲ್ಲ ಎಂದು ತಿರುಗೇಟು ನೀಡಿದರು.


ಇದನ್ನೂ ಓದಿ: KSRTC Revenue: ಚೇತರಿಕೆಯತ್ತ ಕೆಎಸ್​ಆರ್​ಟಿಸಿ ಆರ್ಥಿಕ ಸ್ಥಿತಿ; ದಸರಾ ನೀಡ್ತು ಕೋಟಿ ಕೋಟಿ ಆದಾಯ


ಕ್ರಿಕೆಟ್ ಮೈದಾನಕ್ಕೆ ಜಾಗ


ಮೈಸೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯವಾಗಿರುವ 19 ಎಕರೆ ಜಾಗದ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಅನುಮೋದನೆ‌‌ ಕೋರಲಾಗಿದೆ. ಸಾತಗಳ್ಳಿ ಬಳಿ ಕೋರಿರುವ ಜಾಗಕ್ಕೆ ಸಂಬಂಧಿಸಿದ ಕಡತವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸೂಚಿಸಿದ್ದಾರೆ. ಅನುಮೋದನೆ ಸಿಗುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಜಾಗವನ್ನು ಹಸ್ತಾಂತರಿಸಲಾಗುವುದು. ತ್ವರಿತವಾಗಿ ನಿರ್ಮಿಸಲಾಗುವುದು ಪ್ರತಾಪ್​ ಸಿಂಹ ತಿಳಿಸಿದರು.

Published by:ಪಾವನ ಎಚ್ ಎಸ್
First published: