ನಾನು ಎಲ್ಲ ಯೋಜನೆಗಳನ್ನೂ ಕೊಟ್ಟೆ, ತನ್ನ ಮನೆಯಿಂದ ಕೊಟ್ರಾ ಅಂತ ಕೆಲವರು ಹೊಟ್ಟೆಕಿಚ್ಚಿಗೆ ಕೇಳ್ತಾರೆ ; ಸಿದ್ಧರಾಮಯ್ಯ

ಸಿದ್ದರಾಮಯ್ಯ ಕುರುಬರ ಪರ ಅಂತ ಕೆಲವರು ಹೇಳಿದ್ರು. ಆದರೆ ಅಕ್ಕಿ ಕುರುಬರು ಮಾತ್ರ ತೆಗೆದುಕೊಳ್ತಾರಾ? ನಾನು ಎಲ್ಲಾ ಬಡವರ ಪರವಾಗಿ ಕೆಲಸ ಮಾಡಿದ್ದೇನೆ. ತಳವಾರವನ್ನು ಎಸ್ಟಿಗೆ ಸೇರಿಸಲು ನಾನು ಎರಡು ಬಾರಿ ಶಿಫಾರಸ್ಸು ಮಾಡಿದ್ದೆ

G Hareeshkumar | news18-kannada
Updated:November 9, 2019, 4:57 PM IST
ನಾನು ಎಲ್ಲ ಯೋಜನೆಗಳನ್ನೂ ಕೊಟ್ಟೆ, ತನ್ನ ಮನೆಯಿಂದ ಕೊಟ್ರಾ ಅಂತ ಕೆಲವರು ಹೊಟ್ಟೆಕಿಚ್ಚಿಗೆ ಕೇಳ್ತಾರೆ ; ಸಿದ್ಧರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಮೈಸೂರು (ನ.09): ನಾನು ಮನಸ್ವಿನಿ, ವಿದ್ಯಾಸಿರಿ, ಅನ್ನಭಾಗ್ಯ ಎಲ್ಲಾವನ್ನು‌ ಕೊಟ್ಟು ಎಲ್ಲಾ ಜಾತಿಯ ಬಡವರಿಗೆ ಕೆಲಸ ಮಾಡಿದೆ. ಆದರೆ ನನ್ನನ್ನೆ ಸೋಲಿಸಿದ್ರು. ಕೆಲವರು ಹೊಟ್ಟೆ ಕಿಚ್ಚಿಗೆ ಸಿದ್ದರಾಮಯ್ಯ ಮನೆಯಿಂದ ಕೊಟ್ಟಿದ್ರಾ ಅಂತ ಕೇಳ್ತಾರೆ. ಅವರಿಗೂ ಅಧಿಕಾರ ಇತ್ತಲ್ಲ ಅವರು ಯಾಕೆ ಕೊಡಲಿಲ್ಲ‌ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹುಣಸೂರಿನ ಧರ್ಮಾಪುರದಲ್ಲಿ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯ ಕುರುಬರ ಪರ ಅಂತ ಕೆಲವರು ಹೇಳಿದ್ರು. ಆದರೆ ಅನ್ನಭಾಗ್ಯ ಯೋಜನೆಯಲ್ಲಿ  ಅಕ್ಕಿಯನ್ನು ಕುರುಬರು ಮಾತ್ರ ತೆಗೆದುಕೊಳ್ತಾರಾ? ನಾನು ಎಲ್ಲಾ ಬಡವರ ಪರವಾಗಿ ಕೆಲಸ ಮಾಡಿದ್ದೇನೆ. ತಳವಾರವನ್ನು ಎಸ್ಟಿಗೆ ಸೇರಿಸಲು ನಾನು ಎರಡು ಬಾರಿ ಶಿಫಾರಸ್ಸು ಮಾಡಿದ್ದೆ. ಆದರೆ ಈಗ ಯಾವನೋ ಬಂದು ನಾನು‌ ಮಾಡಿದ್ದೇ ಅಂತ ಹೇಳ್ತಾನೆ. ನನ್ನ ಕೈಯಲ್ಲಿದ್ರೆ ನಾನೇ ಮಾಡಿ ಬಿಸಾಕಿ ಬಿಡುತ್ತಿದ್ದೆ. ನಾನು ಐದು ವರ್ಷ ಪೂರ್ಣ ಮಾಡಿದೆ ಅಂತ ಕೆಲವರಿಗೆ ಹೊಟ್ಟೆಯುರಿ. ಮತ್ತೆ ಸಿಎಂ ಆಗುತ್ತೇನೆ ಅಂತ ಹೊಟ್ಟೆಯುರಿ ಪಟ್ಟಿಕೊಳ್ಳುತ್ತಾರೆ ಎಂದರು.

ನನಗೆ ಮಾತ್ರ ಒಳ್ಳೆಯದು ಮಾಡು ಅಂದ್ರೆ ದೇವರು ಒಳ್ಳೆಯದು ಮಾಡಲ್ಲ. ಬೇರೆಯವರಿಗೂ ಒಳ್ಳೆಯದು ಮಾಡು ಅಂತ ಕೇಳಿದ್ರೆ ದೇವರು ಒಳ್ಳೆಯದು ಮಾಡುತ್ತಾನೆ. ನಾವು ನಂಬಿಕೆ ಇಟ್ಟಿಕೊಳ್ಳಬೇಕು. ಅಪನಂಬಿಕೆ ಇಟ್ಟಿಕೊಳ್ಳಬಾರದು. ನಮ್ಮ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳುವುದೆ ದೇವರು. ಜನ ಸೇವೆ ಮಾಡುವುದೆ ದೇವರು ಎಂದು ತಿಳಿದುಕೊಳ್ಳಬೇಕು. ದೇವಾಲಯ ಮಾಡಿ ಅನಾಚಾರ ಮಾಡಬಾರದು.

ಎಲ್ಲರು ಎಲ್ಲಾ‌ ಧರ್ಮವನ್ನು ಫಾಲನೆ ಮಾಡುತ್ತಾರೆ. ಎಲ್ಲಾ ಧರ್ಮಗಳು ಮನಷ್ಯನನ್ನು ಪ್ರೀತಿಸು ಅಂತನೇ ಹೇಳುತ್ತೆ. ಅದನ್ನು ಹೊರತಾಗಿ ಹೇಳಲ್ಲಎಂದು ಹೇಳಿದರು.

ಇದನ್ನೂ ಓದಿ : ಉಪ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ; ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ನನ್ನ ಕ್ಷೇತ್ರಕ್ಕಿಂತ ಹೆಚ್ಚಾಗಿ ಹುಣಸೂರಿಗೆ ಅನುದಾನ ಕೊಟ್ಟಿದ್ದೇನೆ. ಇದಿಗ ಉಪಚುನಾವಣೆ ಬಂದಿದೆ. ಕೆಲಸ ಮಾಡುವವರಿಗೆ ಕೂಲಿ ಕೊಡಿ. ಬುದ್ದಿವಂತಿಕೆಯಿಂದ ಮಾತನಾಡಿದ್ರು ಮತಕೊಡಬೇಡಿ. ಹುಣಸೂರಿನ ಧರ್ಮಾಪುರದಲ್ಲಿ ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಾಮದರ್ಶನನನಗೆ ನೀವೆಲ್ಲ ನಾಮಹಾಕಿದ್ರಿ ಅಂತ ಕಾರ್ಯಕರ್ತರೋಬ್ಬರಿಗೆ ಸನ್ನೆ ಮಾಡಿ ತೋರಿಸಿದ  ಘಟನೆ ಇದೇ ಸಂದರ್ಭದಲ್ಲಿ ನಡೆಯಿತು. ವೇದಿಕೆ ಮೇಲಿದ್ದ ಸಿದ್ದರಾಮಯ್ಯರನ್ನ ಮಾತನಾಡಿಸಲು ಆಗಮಿಸಿದ್ದ ಕಾರ್ಯಕರ್ತನೊಬ್ಬ ಮಾತುಕತೆ ವೇಳೆ ತನ್ನ ಚಾಮುಂಡೇಶ್ವರಿ ಸೋಲನ್ನ ನೆನಪಿಸಿಕೊಂಡರು. ನಿಮ್ಮನ್ನ ನಂಬಿದ್ದಕ್ಕೆ ನಾಮ ಹಾಕಿದ್ರಲ್ಲ ಎಂದು ಹೇಳಿದ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ಹೆಚ್‌.ಪಿ.ಮಂಜುನಾಥ್ ಅವರನ್ನು ಗೆಲ್ಲಿಸಿ ಎಂದು ಸನ್ನೆ ಮಾಡಿ ಸೂಚನೆ ನೀಡಿದರು. 
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading