ವೈಯಕ್ತಿಕ ಟೀಕೆಗೆ ಇಳಿಯಬೇಡಿ ಎಂದು ಸಹೋದರರಲ್ಲಿ ಮನವಿ ಮಾಡುತ್ತೇನೆ ; ಶಾಸಕ ಬಾಲಚಂದ್ರ ಜಾರಕಿಹೊಳಿ

ರಮೇಶ್ ಹಾಗೂ ಲಖನ್ ಮಧ್ಯೆ ಮೂರನೇಯವನಿಗೆ ಲಾಭ ಆಗುತ್ತೆ ಅಂತಾ ಕೆಲವರು ಹೇಳುತ್ತಿದ್ದಾರೆ. ಹಾಗೇನೂ ಆಗಲ್ಲ ರಮೇಶ್ ಜಾರಕಿಹೊಳಿ‌ ಗೆದ್ದೇ ಗೆಲ್ತಾರೆ. ಈ ಬಾರಿ ಗೋಕಾಕ್ ಕ್ಷೇತ್ರದಲ್ಲಿ ಕಮಲ ಅರಳುತ್ತೆ ಎಂದರು

G Hareeshkumar | news18-kannada
Updated:November 20, 2019, 1:39 PM IST
ವೈಯಕ್ತಿಕ ಟೀಕೆಗೆ ಇಳಿಯಬೇಡಿ ಎಂದು ಸಹೋದರರಲ್ಲಿ ಮನವಿ ಮಾಡುತ್ತೇನೆ ; ಶಾಸಕ ಬಾಲಚಂದ್ರ ಜಾರಕಿಹೊಳಿ
ಶಾಸಕ ಬಾಲಚಂದ್ರ ಜಾರಕಿಹೊಳಿ
  • Share this:
ಬೆಳಗಾವಿ(ನ.20): ರಾಜಕೀಯ ಏನೇ ಇರಲಿ ಸಹೋದರರು ಒಂದೇ ಇರಬೇಕೆಂದು ನಾನೇ ಬಯಸಿದ್ದೆ. ನಾನು ಮುಂಚೆಯಿಂದ ಇದನ್ನೇ ಹೇಳಿದ್ದೆ, ಆದರೆ ಏಕೋ ಒಡೆದು ಹೋಯಿತು. ವೈಯಕ್ತಿಕ ಟೀಕೆಗೆ ಇಳಿಯಬೇಡಿ ಎಂದು ಸಹೋದರರಲ್ಲಿ ಮನವಿ ಮಾಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬಿಜೆಪಿ ಸಾಧನೆ ಮುಂದಿಟ್ಟುಕೊಂಡು ಜನರ ಮುಂದೆ ಹೋಗ್ತೇವೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಜನರಿಗೆ ಒಳ್ಳೆಯ ಅವಕಾಶ. ಶಾಸಕರನ್ನಷ್ಟೇ ಅಲ್ಲ, ಸಚಿವರನ್ನೂ ಸಹ ಜನ ಆಯ್ಕೆ ಮಾಡಿದ್ದಾರೆ. ನೂರಕ್ಕೆ 80ರಷ್ಟು ಹಳೆಯ ಬಿಜೆಪಿ ನಮ್ಮ ಜೊತೆಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಳೆಯ ಟೀಮ್ ಸಹ ನಮ್ಮ ಜೊತೆಗಿರುತ್ತೆ. ರಮೇಶ್ ಜಾರಕಿಹೊಳಿ‌ ಮಾಡಿದ್ದ ಅಭಿವೃದ್ಧಿ ಕೆಲಸ ಜನರ ಮುಂದಿದೆ. ಯಾವ್ಯಾವ ಕೆಲಸ ಮಾಡಿದ್ದಾರೆ ಪಟ್ಟಿ ತಗೆದುಕೊಂಡು ಜನರ ಬಳಿ ಹೋಗ್ತೇವೆ ಎಂದು ಹೇಳಿದರು.

ರಮೇಶ್ ಹಾಗೂ ಲಖನ್ ಮಧ್ಯೆ ಮೂರನೇಯವನಿಗೆ ಲಾಭ ಆಗುತ್ತೆ ಅಂತಾ ಕೆಲವರು ಹೇಳುತ್ತಿದ್ದಾರೆ. ಹಾಗೇನೂ ಆಗಲ್ಲ ರಮೇಶ್ ಜಾರಕಿಹೊಳಿ‌ ಗೆದ್ದೇ ಗೆಲ್ತಾರೆ. ಈ ಬಾರಿ ಗೋಕಾಕ್ ಕ್ಷೇತ್ರದಲ್ಲಿ ಕಮಲ ಅರಳುತ್ತೆ ಎಂದರು

ಕುಮಾರಸ್ವಾಮಿ ಸರ್ಕಾರ ಬೀಳಲು ಇವರೇ ಕಾರಣ ಎಂದಾಗ ಸಿಟ್ಟು ಸ್ವಾಭಾವಿಕ. ಶಾಸಕ ಸ್ಥಾನ ಕಳೆದುಕೊಂಡಾಗ ಎಷ್ಟೋ ಸಿಟ್ಟಿರುತ್ತೆ. ಸಿಎಂ ಸ್ಥಾನ ಕಳೆದುಕೊಂಡಾಗ ಸಿಟ್ಟು ಸ್ವಾಭಾವಿಕ. ಅವರ ಅಭ್ಯರ್ಥಿ ಗೆಲುವಿಗೆ ಅವರು ಪ್ರಯತ್ನ ಮಾಡುತ್ತಾರೆ. ಆದರೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಗೆಲ್ಲುವ ವಿಶ್ವಾಸವಿದೆ. ಅಶೋಕ್ ಪೂಜಾರಿ ಜೊತೆ ಮಾತುಕತೆ ನಡೆಸಿ ಮನವಿ ಮಾಡಿದ್ದೇವು. ತಮ್ಮಿಂದ ಬಿಎಸ್‌ವೈಗೆ ಸಂಕಷ್ಟ ಆಗೋದು ಬೇಡ ಅಂತಾ ಮನವಿ ಮಾಡಿದ್ದೇವು. ಮುಂದಿನ ದಿನಗಳಲ್ಲಿ ಬಿಎಸ್‌ವೈ ಗೋಕಾಕ್​​​​​ನಲ್ಲಿ ಪ್ರಚಾರ ಮಾಡ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ :  ಕಾಂಗ್ರೆಸ್ ಪಕ್ಷ ಯಾರನ್ನು ಯಾವತ್ತು ಏಕಾಂಗಿ ಮಾಡಲ್ಲ ಸಿಎಂ ಬಿಎಸ್​​ವೈಗೆ ಸಿದ್ದರಾಮಯ್ಯ ತಿರುಗೇಟು

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ನಲ್ಲಿ ಪ್ರಚಾರ ಮಾಡಿದ್ರೆ ಲಿಂಗಾಯತ ಮತಗಳ ವಿಭಜನೆ ವಿಚಾರವಾಗಿ ಮಾತನಾಡಿದ ಅವರು, ಲಿಂಗಾಯತ ಮತಗಳು ವಿಭಜನೆ ಆಗುವುದಿಲ್ಲ. ರಮೇಶ್ ಸೇರಿದಂತೆ ಎಲ್ಲರೂ ಸೇರಿ‌ ಲಿಂಗಾಯತ ಮುಖ್ಯಮಂತ್ರಿ ಮಾಡಿದ್ದಾರೆ‌. ಖುದ್ದು ಯಡಿಯೂರಪ್ಪ ಬಂದು ಲಿಂಗಾಯತ ಮುಖಂಡರೊಂದಿಗೆ ಮಾತುಕತೆ ಮಾಡಿ ಮನವರಿಕೆ ಮಾಡಲಿದ್ದಾರೆ ಎಂದು ಹೇಳಿದರು.

(ವರದಿ : ಚಂದ್ರಕಾಂತ್ ಸುಗಂಧಿ)

 
First published:November 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ