ಹೆಣ್ಣು ಮಕ್ಕಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ, ರಾಜೀನಾಮೆಯ ಪ್ರಶ್ನೆಯೇ ಇಲ್ಲ; ಮಾಧುಸ್ವಾಮಿ ಸ್ಪಷ್ಟನೆ

ಬುಧವಾರ ಸಚಿವ ಮಾಧುಸ್ವಾಮಿ ಕೋಲಾರದಲ್ಲಿ ರೈತ ಮಹಿಳೆಯನ್ನು ರಾಸ್ಕಲ್ ಎಂದು ನಿಂದಿಸುವ ಮೂಲಕ ಇದೀಗ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರ ವರ್ತನೆಯನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕರು ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ.

news18-kannada
Updated:May 21, 2020, 4:49 PM IST
ಹೆಣ್ಣು ಮಕ್ಕಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ, ರಾಜೀನಾಮೆಯ ಪ್ರಶ್ನೆಯೇ ಇಲ್ಲ; ಮಾಧುಸ್ವಾಮಿ ಸ್ಪಷ್ಟನೆ
ಜೆಸಿ ಮಾಧುಸ್ವಾಮಿ
  • Share this:
ಬೆಂಗಳೂರು (ಮೇ 21); ನಿನ್ನೆ ನಾನು ಕೋಲಾರದಲ್ಲಿ ಮಹಿಳೆಯನ್ನು ನಿಂದಿಸಿದ್ದು ತಪ್ಪು. ನಾನು ಹಾಗೆ ಮಾತನಾಡುವಂತೆ ಪ್ರೇರೇಪಿಸಲಾಗಿದೆ. ನನ್ನ ಈ ಮಾತಿನಿಂದ ಹೆಣ್ಣು ಮಕ್ಕಳ ಭಾವನೆಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ, ರಾಜೀನಾಮೆ ನೀಡುವ ಪ್ರಶ್ನೆ ಮಾತ್ರ ಉದ್ಭವಿಸಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಬುಧವಾರ ಸಚಿವ ಮಾಧುಸ್ವಾಮಿ ಕೋಲಾರದಲ್ಲಿ ರೈತ ಮಹಿಳೆಯನ್ನು “ರಾಸ್ಕಲ್” ಎಂದು ನಿಂದಿಸುವ ಮೂಲಕ ಇದೀಗ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರ ವರ್ತನೆಯನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕರು ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ.

ಪ್ರಕರಣದ ಕುರಿತು ಇಂದು ಸ್ಪಷ್ಟೀಕರಣ ನೀಡಿರುವ ಮಾಧುಸ್ವಾಮಿ, “ನಿನ್ನೆ ಕೆರೆಗಳ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಓರ್ವ ಸಚಿವನನ್ನು ಕತ್ತೆ ಕಾಯ್ತಿದ್ದಾ ಅಂತ ಹೇಳಿದ್ರು, ಒಬ್ಬ ಸಚಿವ ಇದನ್ನು ಕೇಳಿ ಸುಮ್ಮನೆ ಬರೋಕೆ ಆಗುತ್ತಾ? ಅವರು ಕೇಳಿದ್ದಕ್ಕೆ ಸಮಜಾಯಿಷಿ ಕೊಟ್ಟಿದ್ದೇನೆ. ಆದರೂ, ಅವರು ನನ್ನನ್ನು ಟೆಮ್ಟ್ ಮಾಡಿದರೆ ನಾನು ಏನು ಮಾಡಲಿ?

ಅವರ ಮಾತಿನಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಹೀಗಾಗಿ ನಾನು ಆ ಪದವನ್ನು ಬಳಸಬೇಕಾಗಿ ಬಂತು. ನಾನೇನು ಅವರನ್ನು ಬಯ್ಯೋಕೆ ಪ್ರಿಪೇರ್ ಆಗಿ ಹೋಗಿರಲಿಲ್ಲ. ಯಾರನ್ನೂ ಅವಹೇಳನ ಮಾಡಲಿಲ್ಲ. ಆದರೂ, ಹೆಣ್ಣು ಮಕ್ಕಳಿಗೆ ಇದರಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತು ಕೆಂಡ ಕಾರಿರುವ ಮಾಧುಸ್ವಾಮಿ, “ಒಬ್ಬ ಮಹಿಳೆಯನ್ನು ಬೈದ್ದಿದ್ದೇನೆ, ಅದು ತಪ್ಪು. ನಾನು ಮಹಿಳೆ ಅಂತ ಅಲ್ಲಿ ಮಾತನಾಡಿಲ್ಲ, ಒಬ್ಬ ವ್ಯಕ್ತಿ ಅಂತ ಮಾತನಾಡಿದ್ದೇನೆ. ಸರ್ಕಾರ ಮುಜುಗರ ತರುವ ಕೆಲಸವನ್ನು ನಾನು ಮಾಡಿಲ್ಲ. ನನ್ನನ್ನು ಯಾರೂ ತಬ್ಬಿಕೊಂಡು ಮುತ್ತು ನೀಡಿಲ್ಲ. ಹೀಗಾಗಿ ಸಿದ್ದರಾಮಯ್ಯ ನನ್ನ ರಾಜೀನಾಮೆ ಕೇಳುವಂತದ್ದೇನು ಆಗಿಲ್ಲ” ಎಂದಿದ್ದಾರೆ.

ಇದನ್ನೂ ಓದಿ : ರೈತ ಮಹಿಳೆಯರನ್ನು ಸಾರ್ವಜನಿಕವಾಗಿ ನಿಂದಿಸಿದ ಸಚಿವ ಮಾಧುಸ್ವಾಮಿ; ಕ್ಷಮೆ-ತಲೆದಂಡಕ್ಕೆ ಸಿದ್ದರಾಮಯ್ಯ ಆಗ್ರಹ
First published: May 21, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading