news18-kannada Updated:November 25, 2020, 2:07 PM IST
ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು; ಸಚಿವೆ ಶಶಿಕಲಾ ಜೊಲ್ಲೆ ನನ್ನ ಸೋದರಿ. ಅವರು ನಮ್ಮ ಮನೆಗೆ ಬರುವುದರಲ್ಲಿ ಏನು ವಿಶೇಷತೆ ಇಲ್ಲ. ಹೈಕಮಾಂಡ್ ಯಾರನ್ನು ಕೈ ಬಿಡ್ತಾರೋ, ಯಾರನ್ನು ಸೇರಿಸಿಕೊಳ್ಳುತ್ತಾರೋ ಆ ನಿರ್ಧಾರಕ್ಕೆ ನಾನು ಬದ್ದನಾಗಿ ಇರುತ್ತೇನೆ. ಅದರ ಬಗ್ಗೆ ನಾನು ಏನು ತಲೆ ಕೆಡೆಸಿಕೊಂಡಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ರಾಜಕಾರಣದಲ್ಲಿ ಆಶಾಭಾವನೆ ಇರಬೇಕು ಎಂದು ಪ್ರತಿಕ್ರಿಯಿಸಿದರು. ದೆಹಲಿಯಲ್ಲಿ ಸಿಟಿ ರವಿ ಅವರ ಕಚೇರಿಯ ಪೂಜೆ ಇದೆ. ಹೀಗಾಗಿ ನಾನು ಈಗ ದೆಹಲಿಗೆ ಹೊರಟಿದ್ದೇನೆ. ನಾನು ಅಲ್ಲಿಗೆ ಹೊರಡುವ ಮುನ್ನವೇ ನಿಮಗೆ ಈ ಮಾತು ಹೇಳ್ತಿದ್ದೇನೆ. ಸಿಟಿ ರವಿ ನನಗೆ ನಾನು ಕಾಂಗ್ರೆಸ್ ಇದ್ದಾಗಲಿಂದಲೂ ಪರಿಚಯ. ಈಗ ಅವನು ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ಸಾನೆ. ಹೀಗಾಗಿ ಅವನ ಕಚೇರಿ ಪೂಜೆಗಾಗಿ ದೆಹಲಿಗೆ ಹೊರಟಿದ್ದೇನೆ ಎಂದು ತಿಳಿಸಿದರು.
ಇದನ್ನು ಓದಿ: ಇಂದು ಸಂಜೆ ಸಿಬಿಐ ವಿಚಾರಣೆಗೆ ಹಾಜರಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಈಗಾಗಲೇ ಸಿಪಿ ಯೋಗೇಶ್ವರ್ ವಿರೋಧಿಸುವ ಶಾಸಕರಿಗೂ ಹೇಳಿದ್ದೇನೆ. ನೀವು ನಿಮ್ಮ ಪರವಾಗಿ ಇರೀ, ನಾನಂತೂ ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡ್ತೇನೆ. ಹೀಗಾಗಿ ಯಾರು ಕೂಡ ನನ್ನ ಮೇಲೆ ಬೇಸರ ಮಾಡಿಕೊಳ್ಳದಂತೆ ಹೇಳಿದ್ದೇನೆ ಎಂದು ಸೂಚ್ಯವಾಗಿ ಹೇಳಿದರು.
17 ಜನ ಶಾಸಕರು ಹೇಗೆ ಸರ್ಕಾರ ರಚನೆಗೆ ಕಾರಣವೋ, ಹಾಗೇ ಬಿಜೆಪಿಯ 104 ಶಾಸಕರು ಕೂಡ ಸರ್ಕಾರ ರಚನೆಗೆ ಕಾರಣ ಎಂಬ ಬಿಜೆಪಿ ನಾಯಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ನಿಜ. ಹೌದು, ಅವರ ಮಾತು ಸತ್ಯ ಎಂದಷ್ಟೇ ಹೇಳಿ ಹೊರಟರು.
Published by:
HR Ramesh
First published:
November 25, 2020, 2:07 PM IST