ಹೆಂಡತಿ ಜೊತೆಗೇ ಕೋಪಿಸಿಕೊಳ್ಳದವನು ಸಿಎಂ ಮೇಲೆ ಮುನಿಸಿಕೊಳ್ತೀನಾ?; ಶಾಸಕ ಉಮೇಶ್ ಕತ್ತಿ

ನನ್ನ ಯೋಗ್ಯತೆಗೆ ಸಿಎಂ ಸ್ಥಾನ ಸಿಗಲೇಬೇಕು. ಆ ದಿಸೆಯಲ್ಲಿ ನಾನು ಪ್ರಯತ್ನ ನಡೆಸುತ್ತಿದ್ದೇನೆ. ದೇವರು ಆಶೀರ್ವಾದ ಮಾಡಿದರೆ ಮುಂದೊಂದು ದಿನ ಸಿಎಂ ಆಗುತ್ತೇನೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Sushma Chakre | news18-kannada
Updated:February 10, 2020, 3:10 PM IST
ಹೆಂಡತಿ ಜೊತೆಗೇ ಕೋಪಿಸಿಕೊಳ್ಳದವನು ಸಿಎಂ ಮೇಲೆ ಮುನಿಸಿಕೊಳ್ತೀನಾ?; ಶಾಸಕ ಉಮೇಶ್ ಕತ್ತಿ
ಉಮೇಶ್​ ಕತ್ತಿ
  • Share this:
ಚಿಕ್ಕೋಡಿ (ಫೆ. 10): ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನು ನನ್ನ ಹೆಂಡತಿ ಜೊತೆಯೇ ಮುನಿಸಿಕೊಳ್ಳುವುದಿಲ್ಲ, ಇನ್ನು ಸಿಎಂ ಮೇಲೆ ಕೋಪ ಮಾಡಿಕೊಳ್ಳುತ್ತೇನಾ? ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಮೂಲ ಬಿಜೆಪಿಗರಲ್ಲಿ ಕೆಲವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಬಾರಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎನ್ನಲಾಗಿತ್ತು. ಆದರೆ, 10 ವಲಸಿಗ ಶಾಸಕರು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವೇನೂ ಇಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಬಿ.ಎಸ್. ಯಡಿಯೂರಪ್ಪ ಒಳ್ಳೆಯ ಅಧಿಕಾರ ನೀಡುತ್ತಿದ್ದಾರೆ. ನಾನು ಈಗಾಗಲೇ 13 ವರ್ಷ ಮಂತ್ರಿಯಾಗಿದ್ದೇನೆ. ಹೀಗಾಗಿ, ಹೊಸಬರಿಗೆ ಸಚಿವ ಕೊಟ್ಟಿರುವುದರಲ್ಲಿ ತಪ್ಪೇನಿದೆ? ನಾನು ಮಂತ್ರಿಗಿರಿ ಇಲ್ಲದಿದ್ದರೂ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ, ಬಿಎಸ್​ವೈಗೆ ಟೆನ್ಷನ್​; ಬಂಡಾಯದ ಬಾವುಟ ಹಾರಿಸ್ತಾರಾ ಬಿಜೆಪಿ ಹಿರಿಯ ನಾಯಕ?

ಸಂಪುಟದಲ್ಲಿ ಸಚಿವ ಸ್ಥಾನ ಕೊಡದಿರುವುದಕ್ಕೆ ನನಗೆ ಬೇಸರವಾಗಲಿ, ಕೋಪವಾಗಲಿ ಇಲ್ಲ. ನಾನು ನನ್ನ ಹೆಂಡತಿ ಜೊತೆಗೇ ಮುನಿಸಿಕೊಳ್ಳೋದಿಲ್ಲ. ಅಂಥದ್ದರಲ್ಲಿ ಯಡಿಯೂರಪ್ಪನವರ ಮೇಲೆ ಮುನಿಸಿಕೊಳ್ಳುತ್ತೇನಾ? ನನ್ನ ಯೋಗ್ಯತೆಗೆ ಸಿಎಂ ಸ್ಥಾನ ಸಿಗಲೇಬೇಕು. ಆ ದಿಸೆಯಲ್ಲಿ ನಾನು ಪ್ರಯತ್ನ ನಡೆಸುತ್ತಿದ್ದೇನೆ. ದೇವರು ಆಶೀರ್ವಾದ ಮಾಡಿದರೆ ಮುಂದೊಂದು ದಿನ ಸಿಎಂ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಸುಗೂಸಿನ ಹೃದಯದಲ್ಲಿ ರಂಧ್ರ; ಜೀರೋ ಟ್ರಾಫಿಕ್​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ 7 ದಿನದ ಮಗು ರವಾನೆ

ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಟ್ಟ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿರುವ ಉಮೇಶ್ ಕತ್ತಿ, ನನಗೆ ಅನುಭವ ಕಡಿಮೆ, ಅವರಿಗೆ ಅನುಭವ ಹೆಚ್ಚಿದೆ. ಹಾಗಾಗಿ, ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಮುಂದೆ ಮಂತ್ರಿ ಸ್ಥಾನ ಸಿಕ್ಕರೆ ನೋಡೋಣ. ಜಿಲ್ಲಾ ಮಂತ್ರಿ ಯಾರೇ ಬಂದರೂ ಸ್ವಾಗತಿಸೋಣ ಎಂದು ಹುಕ್ಕೇರಿಯಲ್ಲಿ ಶಾಸಕ ಉಮೇಶ್ ಕತ್ತಿ ತಿಳಿಸಿದ್ದಾರೆ.(ವರದಿ: ಲೋಹಿತ್ ಶಿರೋಳ)
First published: February 10, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading