H D Kumaraswamy: ಅದು ಹೇಗಾದ್ರೂ ಸರಿ ಮುಂದಿನ ಬಾರಿ ನಾನೇ ಸಿಎಂ; ಭಾಷಣದುದ್ದಕ್ಕೂ ಮುಖ್ಯಮಂತ್ರಿ ಕುರ್ಚಿ ಜಪ

ತುಮಕೂರಿನಲ್ಲಿ ನಡೆದ ಕುಂಚಿಟಿಗ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಕುಮಾರಸ್ವಾಮಿ, ಪರಮ ಪೂಜ್ಯರು ಹೇಳಿದಂತೆ 2023 ರಲ್ಲಿ ನಾನೇ ಮುಖ್ಯಮಂತ್ರಿ ಆಗ್ತಿನಿ ಎಂಬ ನಂಬಿಕೆ ಇದೆ. ಅದು ಹೇಗ್ ಬೇಕಾದರೂ ಆಗಬಹುದು ಎಂದ್ರು.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ತುಮಕೂರು (ಜೂ 25): ಮುಂದಿನ ವರ್ಷ ವಿಧಾನಸಭೆ ಚುನಾವಣೆ (Assembly Elections) ಈಗಾಗಲೇ ಎಲ್ಲಾ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆಗಳು (Political Activities) ಜೋರಾಗಿಯೇ ನಡೀತಿದೆ. ​​ಇದರ ಜೊತೆ ಪಕ್ಷದಿಂದ ಪಕ್ಷಕ್ಕೆ ಪಲಾಯನ ಮಾಡುವವರ ಪರ್ವ ಕೂಡ ಜೊತೆ ಜೊತೆಯಾಗಿಯೇ ಸಾಗುತ್ತಿದೆ. ಈಗಾಗಲೇ ಅನೇಕರು ಸಿಎಂ ಕನಸು ಕಾಣ್ತಿದ್ದಾರೆ. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ನಾನಾ ಕರಸತ್ತು ಮಾಡ್ತಿದ್ದಾರೆ. ಈತ ಮುಂದಿನ ನಾನೇ ಸಿಎಂ ಎಂದು ಅಚ್ಚರಿಯ ಹೇಳಿಕೆ ನೀಡಿದ್ಧಾರೆ. ತುಮಕೂರಿನ (Tumkuru) ಗಾಜಿನ ಮನೆಯಲ್ಲಿ ನಡೆದ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಮಾತಾಡಿದ ಕುಮಾರಸ್ವಾಮಿ ಸ್ವಾಮೀಜಿಗಳ ಆಸೆ ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.

ಅದು ಹೇಗ್ ಬೇಕಾದರೂ ನಾನು ಸಿಎಂ ಆಗಬಹುದು

ತುಮಕೂರಿನಲ್ಲಿ ನಡೆದ ಕುಂಚಿಟಿಗ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಕುಮಾರಸ್ವಾಮಿ, ಪರಮ ಪೂಜ್ಯರು ಹೇಳಿದಂತೆ 2023 ರಲ್ಲಿ ನಾನೇ ಮುಖ್ಯಮಂತ್ರಿ ಆಗ್ತಿನಿ ಎಂಬ ನಂಬಿಕೆ ಇದೆ. ಅದು ಹೇಗ್ ಬೇಕಾದರೂ ಆಗಬಹುದು ಎಂದ್ರು. ಇನ್ನು ಅನೇಕರು ಜೆಡಿಎಸ್ ಮುಗಿದೆ ಹೊಯ್ತು ಎನ್ನುತ್ತಿದ್ದಾರೆ. ಮಾತಾಡೋರು ಮಾತಾಡಲಿ, ಜನರ ಆಶೀರ್ವಾದದಿಂದ ನಾನು ಮತ್ತೆ ಸಿಎಂ ಆಗ್ತಿನಿ ಎನ್ನುವ ವಿಶ್ವಾಸ ಇದೆ ಎಂದ್ರು.

ಇದನ್ನೂ ಓದಿ: Bengaluru: ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮೇಲುಸ್ತುವಾರಿ ಡಿಸಿಪಿಗಳ ಹೆಗಲಿಗೆ: ಸಿಎಂ ಸೂಚನೆ

ಭಾಷಣದ್ದುದ್ದಕ್ಕೂ ಸಿಎಂ ಕುರ್ಚಿ ಜಪ

ಸ್ವಾಮಿಜಿಗಳ ಹಾಗೂ ಜನಗಳ ಆಶೀರ್ವಾದದಿಂದ 2023ಕ್ಕೆ ಪುನಃ ನಾನು ಯಾವ ರೀತಿ ಮುಖ್ಯಮಂತ್ರಿ ಆಗ್ತಿನೋ ಗೊತ್ತಿಲ್ಲ. ಮುಖ್ಯಮಂತ್ರಿ ಆಗುವ‌ ವಿಶ್ವಾಸ ಖಂಡಿತ ಇದೆ ಎಂದು ಭಾಷಣದುದ್ದಕ್ಕೂ ಎರಡೆರಡು ಬಾರಿ ನಾನು ಸಿಎಂ ಆಗ್ತಿನಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ರಾಜ್ಯದಲ್ಲಿರೋ ಬಡ ಕುಟುಂಬಗಳಿಗಾಗಿ 5 ವರ್ಷದ ಆಡಳಿತ ನೀಡುತ್ತೇನೆ ಎಂದ್ರು.

ಇದನ್ನೂ ಓದಿ: Bengaluru University: ಮೊದಲು ಡಿಸ್ಟಿಂಕ್ಷನ್​ನಲ್ಲಿ ಪಾಸ್ ಅಂದ್ರು ಆಮೇಲೆ ನೀವೆಲ್ಲಾ ಫೇಲ್ ಅಂದ್ರು; ಬೆಂಗಳೂರು ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಸಿಟ್ಟು

ನನ್ನನ್ನು ಬಿಜೆಪಿ B ಟೀಂ ಎಂದರು ಪರವಾಗಿಲ್ಲ

ಕುಂಚಿಟಿಗರನ್ನು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ‌ ಸೇರಿಸುವ‌‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು ಸಿಎಂ ಬಸವರಾಜ ಬೊಮ್ಮಾಯಿ ನನ್ನ ಜೊತೆ ಚೆನ್ನಾಗಿದ್ದಾರೆ. ಅವರ ಜೊತೆ ಚರ್ಚೆ ಮಾಡುವೆ ಒಬಿಸಿ ಪಟ್ಟಿಗೆ‌ ಸೇರಿಸಲು ಪ್ರಯತ್ನ ಮಾಡುತ್ತೇನೆ. ನನ್ನನ್ನು ಬಿಜೆಪಿ ಬಿ ಟೀಮ್ ಎಂದರೂ ಪರವಾಗಿಲ್ಲ, ನಾನು ಬಿಜೆಪಿ ನಾಯಕರಿಗೆ ಹೇಳಿ ಕುಂಚಿಟಿಗರನ್ನು ಒಬಿಸಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ನಿರ್ಲಜ್ಜ ಸರಕಾರಕ್ಕೆ ಜನಹಿತಕ್ಕಿಂತ ಪಕ್ಷ ಹಿತವೇ ಸರ್ವಸ್ವ

ಬೆಂಗಳೂರು ನಗರದ ವಾರ್ಡ್ ಗಳ ವಿಂಗಡನೆ ಮತ್ತು ಒಬಿಸಿ ಮೀಸಲಾತಿ ಪ್ರಕ್ರಿಯೆಯನ್ನು ಎಂಟು ವಾರಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ (Supreme Court) ಕರ್ನಾಟಕ ಸರ್ಕಾರಕ್ಕೆ (Karnataka Government) ಸೂಚನೆ ನೀಡಿತ್ತು. ಸುಪ್ರಿಂ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ  (BBMP) 243 ವಾರ್ಡ್‌ಗಳ ಕರಡು ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ವಾರ್ಡ್‌ಗಳ ವಿಂಗಡಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಇದೀಗ ಈ ವಾರ್ಡ್ ವಿಂಗಡಣೆ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ತಮ್ಮಅಭಿಪ್ರಾಯವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ನಾನು ಮಾಡಿದ್ದು ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಅಡಳಿತ, ಸೇವೆಗಳು ಲಭ್ಯವಾಗಲಿ ಎಂದು. ಆದರೆ, ಬಿಜೆಪಿ ಸರಕಾರವು ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ
Published by:Pavana HS
First published: