ನಾನು ಫೆಲ್ಯೂರ್ ಆಗಿದ್ದೇನೆ, ಸೋಲಿನ ಹೊಣೆಯನ್ನು ನಾನೇ ಹೊರಲಿದ್ದೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬಿಹಾರದಲ್ಲಿ ಹಿಂದೆ ಬಿಜೆಪಿ ಹಾಗೂ ನಿತೀಶ್ ಸೇರಿಕೊಂಡು ಸರ್ಕಾರ ಮಾಡಿದ್ದರು. ಈಗ ಆರ್.ಜೆ.ಡಿ. ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಗೆದ್ದಿಲ್ಲ ಅಂದ್ರು ನಮಗೆ ಸಮಾಧಾನ ಇದೆ. ಆ ಮಟ್ಟದ ಅಂಕಿ ಅಂಶಗಳು ನಮಗೆ ಸಮಾಧಾನ ತಂದಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.

 • Share this:
  ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತದಾರರು ಕೊಟ್ಟ ತೀರ್ಪನ್ನು ಗೌವರಯುತವಾಗಿ ಒಪ್ಪಿಕೊಳ್ಳುತ್ತೇವೆ. ಮತದಾರರ ತೀರ್ಪನ್ನು ಪ್ರಶ್ನಿಸುವ ಪರಿಸ್ಥಿತಿ ಕಾಂಗ್ರೆಸ್‌ಗೆ ಇಲ್ಲ. ಪ್ರಜಾಪ್ರಭುತ್ವವನ್ನು ನಾವು ನಂಬಿದ್ದೇವೆ. ತೀರ್ಪಿನ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲೆಲ್ಲಿ ಸರಿಪಡಿಸಿಕೊಳ್ಳಬೇಕು ಸರಿಪಡಿಸಿಕೊಳ್ಳುತ್ತೇವೆ. ಸೋತಿದ್ದಕ್ಕೆ ನಮ್ಮ ಪಕ್ಷದಲ್ಲಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

  ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಸರ್ಕಾರ ಇದ್ದಾಗ ಬೈ ಎಲೆಕ್ಷನ್‌ನಲ್ಲಿ ರೂಲಿಂಗ್ ಪಾರ್ಟಿ‌ಗೆ ಅನುಕೂಲವಾಗುತ್ತದೆ. ಹಿಂದೆ ಬೈ ಎಲೆಕ್ಷನ್‌ನಲ್ಲಿ ನಾವು ಗೆದ್ದಿದ್ದೇವೆ. ನಮ್ಮೆಲ್ಲಾ ಕಾರ್ಯಕರ್ತರು ಶಕ್ತಿ ಮೀರಿ ಗೆಲುವಿಗೆ ಶ್ರಮಿಸಿದ್ದಾರೆ. ಸಂಪೂರ್ಣ ಮತದಾನ ನಡೆದಿಲ್ಲ. ಆರ್​ಆರ್​ ನಗರದಲ್ಲಿ ಇಷ್ಟೊಂದು ಅಂತರ ನಾನು ನಿರೀಕ್ಷೆ ಮಾಡಿರಲಿಲ್ಲ.  ಮುಂದಿನ ದಿನಗಳ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಸೂಚಿಸಿದ್ದೋ. ಕುಸುಮಾ ಉತ್ತಮ ಹೋರಾಟ ಮಾಡಿದ್ದಾರೆ. ಕೇವಲ ಪಕ್ಷದ ಮತವಲ್ಲ, ಎಲ್ಲಾ ಮತಗಳು ನಮಗೆ ಸಿಕ್ಕಿವೆ ಎಂದರು.

  ಶಿರಾ ಕ್ಷೇತ್ರದಲ್ಲಿ ನಿರೀಕ್ಷೆ ಹೆಚ್ಚು ಕಡಿಮೆ ಆಗಿದೆ. ಗೆದ್ದೆ ಗೆಲ್ಲುತ್ತೇವೆ ಎನ್ನುವ ನಿರೀಕ್ಷೆ ಇತ್ತು.  ಬಿಜೆಪಿಗೆ ಬಹುಮತ ಸಿಕ್ಕಿರುವುದು ಆಶ್ಚರ್ಯವಾಗಿದೆ. ಬಹಳಷ್ಟು ಮೊದಲ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ನಾನು ಸಹ ಸೋತಿದ್ದೇನೆ, ಹಾಗಂತ ಧೃತಿಗೆಟ್ಟಿಲ್ಲ.  ಆಡಳಿತ ಪಕ್ಷಕ್ಕೆ ನಮ್ಮ ಸಂದೇಶ ರವಾನಿಸುವ ಕೆಲಸ ಮಾಡಿದ್ದೇವೆ. ಜನ ತೀರ್ಪು ಕೊಟ್ಟಿದ್ದಾರೆ. ವೈಫಲ್ಯಗಳನ್ನು ಸಹ ನಾವು ಗಮನಿಸಿದ್ದೇವೆ ಎಂದು ಹೇಳಿದರು.

  ಇದನ್ನು ಓದಿ: ಉಪಚುನಾವಣೆ ಸೋಲಿನ ಹೊಣೆಯನ್ನು ಡಿಕೆ ಶಿವಕುಮಾರ್ ಯಾಕೆ ಹೊರಬೇಕು?; ಡಿಕೆಶಿ ಪರ ಸಿದ್ದರಾಮಯ್ಯ ಬ್ಯಾಟಿಂಗ್

  ಅಂತರ ತುಂಬಾ ಇರಬಹುದು. ಆದರೆ ನಮ್ಮ ಕಾರ್ಯಕರ್ತರ ಬಗ್ಗೆ ಹೆಮ್ಮೆ ಇದೆ. ಜನ ತೀರ್ಪು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿ ಮಾಡುತ್ತೇವೆ. ಹಣ ಯಾವ ರೀತಿ ಹಂಚಿಕೆ ಆಯ್ತು. ಅದನ್ನೆಲ್ಲೆ ನಾವು ಈಗ ಚರ್ಚೆ ಮಾಡುವುದಿಲ್ಲ. ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಇದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ನಾನು ಫೆಲ್ಯೂರ್ ಆಗಿದ್ದೇನೆ. ಅದನ್ನು ನಾನು ಒಪ್ಪಿದ್ದೇನೆ. ಸೋಲಿನ ಹೊಣೆಯನ್ನು ನಾನೇ ಹೊರಲಿದ್ದೇನೆ ಎಂದರು.

  ಬಿಹಾರದಲ್ಲಿ ಹಿಂದೆ ಬಿಜೆಪಿ ಹಾಗೂ ನಿತೀಶ್ ಸೇರಿಕೊಂಡು ಸರ್ಕಾರ ಮಾಡಿದ್ದರು. ಈಗ ಆರ್.ಜೆ.ಡಿ. ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಗೆದ್ದಿಲ್ಲ ಅಂದ್ರು ನಮಗೆ ಸಮಾಧಾನ ಇದೆ. ಆ ಮಟ್ಟದ ಅಂಕಿ ಅಂಶಗಳು ನಮಗೆ ಸಮಾಧಾನ ತಂದಿದೆ ಎಂದು ಹೇಳಿದರು.
  Published by:HR Ramesh
  First published: