• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rohini Sindhuri Vs D Roopa: ನಾನು ಗಟ್ಟಿಗಿತ್ತಿ, ಹೋರಾಡುತ್ತೇನೆ; ಆಡಿಯೋ ಲೀಕ್​ ಬೆನ್ನಲ್ಲೇ ಡಿ ರೂಪಾ ಮತ್ತೊಂದು ಪೋಸ್ಟ್

Rohini Sindhuri Vs D Roopa: ನಾನು ಗಟ್ಟಿಗಿತ್ತಿ, ಹೋರಾಡುತ್ತೇನೆ; ಆಡಿಯೋ ಲೀಕ್​ ಬೆನ್ನಲ್ಲೇ ಡಿ ರೂಪಾ ಮತ್ತೊಂದು ಪೋಸ್ಟ್

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ನಾನು ಮತ್ತು ನನ್ನ ಪತಿ ಜೊತೆಯಲ್ಲಿದ್ದೇವೆ. ನಾವು ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬವನ್ನು ನಾಶ ಮಾಡಲು ಹೊರಟಿರುವವರನ್ನು ದಯವಿಟ್ಟು ಪ್ರಶ್ನಿಸಿ. ಇನ್ನು ಹಲವು ಕುಟುಂಬಗಳು ನಾಶ ಆಗುತ್ತಿವೆ. ನಾನು ಧೈರ್ಯವಂತೆ, ಹಾಗಾಗಿ ಹೋರಾಡುತ್ತಿದ್ದೇನೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಬೆಂಗಳೂರು: ಉನ್ನತ ಸ್ಥಾನದಲ್ಲಿರುವ ರಾಜ್ಯದ ಮಹಿಳಾಧಿಕಾರಿಗಳಾದ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಡಿ ರೂಪಾ (IPS Officer D Roopa) ನಡುವಿನ ಜಗಳ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಇಬ್ಬರನ್ನು ವರ್ಗಾವಣೆಗೊಳಿಸಿ (Transfer) ರಾಜ್ಯ ಸರ್ಕಾರ (Karnataka Government) ಶಾಕ್ ನೀಡಿತ್ತು. ಇಬ್ಬರ ಜೊತೆಯಲ್ಲಿ ಡಿ.ರೂಪಾ ಅವರ ಪತಿ ಮುದ್ಗಿಲ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ. ಇನ್ನೇನು ಇಬ್ಬರ ಗಲಾಟೆಗೆ ಸರ್ಕಾರ ಬ್ರೇಕ್ ಹಾಕಿದೆ ಅನ್ನೋವಾಗಲೇ ಡಿ.ರೂಪಾ ಅವರು ಆರ್​ಟಿಐ ಗಂಗರಾಜು (RTI Activist Gangaraju) ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್ (D Roopa Audio Viral) ಆಗಿದೆ. ಆಡಿಯೋದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರದ ದುರ್ಬಳಕೆ ಬಗ್ಗೆ ರೂಪಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆಡಿಯೋ ಲೀಕ್ ಹಿನ್ನೆಲೆ ಫೇಸ್​ಬುಕ್​ (D Roopa FB Post) ಮೂಲಕ ಪ್ರತಿಕ್ರಿಯೆ ನೀಡಿರುವ ಡಿ.ರೂಪಾ, ನಾನು ಗಟ್ಟಿಗತ್ತಿ, ಹೋರಾಡುತ್ತೇನೆ ಎಂದಿದ್ದಾರೆ.


ಫೇಸ್​ಬುಕ್​ ಪೋಸ್ಟ್​ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿರುವ ರೂಪಾ, ಖಾಸಗಿ ವಿಷಯಗಳ ಬಗ್ಗೆಗೂ ಮಾತನಾಡಿದ್ದಾರೆ. ಪೋಸ್ಟ್​ನಲ್ಲಿ ಡಿಕೆ ರವಿ ಸಾವನ್ನು ಪರೋಕ್ಷವಾಗಿ ಮುನ್ನಲೆಗೆ ತರವು ಪ್ರಯತ್ನ ಮಾಡಿದ್ದಾರೆ.


ಡಿ.ರೂಪಾ ಫೇಸ್​ಬುಕ್​ ಪೋಸ್ಟ್​ನಲ್ಲಿ ಏನಿದೆ?


ಆತ್ಮೀಯ ಮಾಧ್ಯಮಗಳೇ, ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಕೇಂದ್ರಿಕರಿಸಿ. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವ ಜನರನ್ನು ನಾನು ಎಂದಿಗೂ ತಡೆದಿಲ್ಲ. ಕರ್ನಾಟಕದಲ್ಲಿ ಓರ್ವ ಐಎಎಸ್ ಅಧಿಕಾರಿ, ತಮಿಳುನಾಡಿಲ್ಲಿ ಓರ್ವ ಐಪಿಎಸ್ ಅಧಿಕಾರಿ ಮತ್ತು ನಮ್ಮ ರಾಜ್ಯದಲ್ಲಿಯೇ ಐಎಎಸ್ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ.




ನಾನು ಮತ್ತು ನನ್ನ ಪತಿ ಜೊತೆಯಲ್ಲಿದ್ದೇವೆ. ನಾವು ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬವನ್ನು ನಾಶ ಮಾಡಲು ಹೊರಟಿರುವವರನ್ನು ದಯವಿಟ್ಟು ಪ್ರಶ್ನಿಸಿ. ಇನ್ನು ಹಲವು ಕುಟುಂಬಗಳು ನಾಶ ಆಗುತ್ತಿವೆ. ನಾನು ಧೈರ್ಯವಂತೆ, ಹಾಗಾಗಿ ಹೋರಾಡುತ್ತಿದ್ದೇನೆ.


ಎಲ್ಲರಿಗೂ ನನ್ನಂತೆ ಹೋರಾಟ ಮಾಡಲು ಸಾಧ್ಯವಿಲ್ಲ. ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಧ್ವನಿಯಾಗಿ. ಕೌಟುಂಬಿಕ ಮೌಲ್ಯಗಳಿಗೆ ಭಾರತ ಹೆಸರುವಾಸಿಯಾಗಿದ್ದು, ಅದೆಲ್ಲವನ್ನು ನಾವು ಮುಂದುವರಿಸೋಣ ಎಂದು ಡಿ.ರೂಪಾ ಮನವಿ ಮಾಡಿಕೊಂಡಿದ್ದಾರೆ.




ಲೀಕ್​ ಆಗಿರುವ ಆಡಿಯೋದಲ್ಲಿ ಏನಿದೆ?


ನೀವು ಮೊದಲು ಅಪ್ಲಿಕೇಶನ್ ಕಳಿಸಿ. ಗಂಡನ ರಿಯಲ್ ಎಸ್ಟೇಟ್ ಬ್ಯುಸಿನೆಸ್​ ಪ್ರಮೋಟ್ ಮಾಡಲು ಲ್ಯಾಂಡ್​ ರೆಕಾರ್ಡ್​ ಆಫೀಸ್​ ನಿಂದ ಎಷ್ಟು ಮಾಹಿತಿ ತೆಗೆದುಕೊಂಡಿದ್ದಾಳೆ ಅಂತ ಗೊತ್ತು. ನೀವು ಇದರಲ್ಲಿ ಶಾಮೀಲು ಆಗಿದ್ದೀರಿ. ನನಗೆ ಬರುತ್ತಿರೋ ಕೋಪದಲ್ಲಿ, ಬೇಕಿದ್ರೆ ಈ ಆಡಿಯೋ ಪಬ್ಲಿಕ್ ಮಾಡ್ಕೊಳ್ಳಿ. ರೋಹಿಣಿ ಸಿಂಧೂರಿ ಎಷ್ಟು ಮನೆ ಕೆಡೆಸಿದ್ದಾಳೆ ಎಂಬುವುದು ಎಲ್ಲರಿಗೂ ಗೊತ್ತಾಗಲಿ ಎಂದು ಡಿ ರೂಪಾ ಹೇಳಿದ್ದಾರೆ.


ಇದನ್ನೂ ಓದಿ:  Rohini Sindhuri Vs D Roopa: ರೋಹಿಣಿ ಸಿಂಧೂರಿ ಪತಿ ಹೇಳಿಕೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಹರಿಬಿಟ್ಟ ರೂಪಾ


ಡಿಕೆ ರವಿ ತಾಯಿ ಮನವಿ 


ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರನ್ನು ತರಬೇಡಿ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಮನವಿ ಮಾಡಿಕೊಂಡಿದ್ದಾರೆ. ಕುಸುಮಾಗೂ ನಮಗೂ ಏನು ಸಂಬಂಧವಿಲ್ಲ. ಕುಸುಮಾ ತಮ್ಮ ತವರು ಮನೆಯಲ್ಲಿದ್ರೆ ನಾನಿಲ್ಲಿದ್ದೇನೆ. ಸಿಬಿಐನವರು ನೇರವಾಗಿಯೇ ದುಡ್ಡು ಬೇಕಮ್ಮಾ ಏನು ಎಂದು ಕೇಳಿದರು. ನೀವು ನ್ಯಾಯ ಮಾಡಲು ಬಂದವರು. ನಮಗೆ ನ್ಯಾಯ ಕೊಡಿಸಿ ಎಂದು ಹೇಳಿದೆ ಎಂದರು.

Published by:Mahmadrafik K
First published: