ಕೈ ನೋವು ತುಂಬಾ ಇದೆ, ಯಮನೇ ಬಂದು ಕರೆದ್ರೂ 16ರವರೆಗೆ ಪ್ರಚಾರ ಮಾಡುತ್ತೇನೆ; ನಟ ದರ್ಶನ್​

ಕೈ ನೋವು ಅಧಿಕವಿದ್ದರೂ ಪ್ರಚಾರದ ವೇಳೆ  ಜನರ ಅಭಿಮಾನಕ್ಕೆ ಮಣಿದು ಪ್ರಚಾರದ ವೇಳೆ ಹಸುವಿನ ಹಾಲು ಕರೆದು, ಎತ್ತಿನ ಗಾಡಿ ಓಡಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ

Seema.R | news18
Updated:April 13, 2019, 5:24 PM IST
ಕೈ ನೋವು ತುಂಬಾ ಇದೆ, ಯಮನೇ ಬಂದು ಕರೆದ್ರೂ 16ರವರೆಗೆ ಪ್ರಚಾರ ಮಾಡುತ್ತೇನೆ; ನಟ ದರ್ಶನ್​
ನಟ ದರ್ಶನ್​
Seema.R | news18
Updated: April 13, 2019, 5:24 PM IST
ಮಂಡ್ಯ (ಏ.13): ಅಪಘಾತದಿಂದ ಕೈ ಮುರಿದುಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್​ ಕೈ ನೋವಿನಿಂದ ಇನ್ನು ಬಳಲುತ್ತಿದ್ದಾರೆ. ಪ್ರಚಾರದ ವೇಳೆಯೂ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡೆ ಪ್ರಚಾರ ನಡೆಸಿದ್ದಾರೆ. ಈ ಕುರಿತು ಮೊದಲ ಬಾರಿ ಮಾತನಾಡಿರುವ ಅವರು, ಹೌದು ಪ್ರಚಾರದ ವೇಳೆ ಕೈ ನೋವು  ಹೆಚ್ಚಾಗಿದೆ. ನೋವು ನಿವಾರಕ ಔಷಧ ತೆಗೆದುಕೊಂಡು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಇಂಡುವಾಳು ಗ್ರಾಮದಲ್ಲಿ ಈ ಕುರಿತು ಮಾತನಾಡಿದ ಅವರು, ಇಂದಿಗೂ ಕೂಡ ನಾನು ಕೈ ನೋವಿನಿಂದ ನಾನು ಬಳಲುತ್ತಿದ್ದೇನೆ. ಆದರೂ ನಾನು ಏಪ್ರಿಲ್​ 16ರವರೆಗೆ ಸುಮಲತಾ ಪರ ಪ್ರಚಾರ ಮಾಡುತ್ತೇನೆ. ಅಲ್ಲಿವರೆಗೂ ಎಷ್ಟೇ ಕಷ್ಟ ಆದರೂ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಯಮನೇ ಕರೆದ್ರೂ 16ರವರೆಗೆ ಅವಕಾಶ ಕೇಳ್ತೀನಿ ಎಂದಿದ್ದಾರೆ.

ಕೈ ನೋವು ಅಧಿಕವಿದ್ದರೂ ಪ್ರಚಾರದ ವೇಳೆ ಜನರ ಅಭಿಮಾನಕ್ಕೆ ಮಣಿದು ಪ್ರಚಾರದ ವೇಳೆ ದರ್ಶನ್ ಹಸುವಿನ ಹಾಲು ಕರೆದು, ಎತ್ತಿನ ಗಾಡಿ ಓಡಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಯಶ್​ ಜೊತೆ ಒಟ್ಟಿಗೆ ಪ್ರಚಾರ

ಸುಮಲತಾ ಗೆಲುವಿಗೆ ಜೋಡೆತ್ತುಗಳಂತೆ ಪ್ರಚಾರ ನಡೆಸುತ್ತಿರುವ ನಟ ದರ್ಶನ್​, ಯಶ್​ ಮಂಡ್ಯ ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸುತ್ತಲೇ ಇದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆಸಿದ ಸಮಾವೇಶದಲ್ಲಿ ನಾವು ಜೋಡೆತ್ತುಗಳಂತೆ ದುಡಿಯುವುದಾಗಿ ಅವರು ತಿಳಿಸಿದ್ದರು. ಆದಾದ ಬಳಿಕ ಕ್ಷೇತ್ರದಲ್ಲಿ ಒಂದು ಕಡೆ ದರ್ಶನ್​, ಮತ್ತೊಂದು ಕಡೆ ಯಶ್​, ಇನ್ನೊಂದು ಕಡೆ ಸುಮಲತಾ ಪ್ರಚಾರ ನಡೆಸುತ್ತಲೇ ಇದ್ದಾರೆ.

ಇದನ್ನು ಓದಿ: ಕೈ ನೋವಿದ್ದರೂ ಹಾಲು ಕರೆದು ಅಮ್ಮನಿಂದ ಭೇಷ್​ ಎನ್ನಿಸಿಕೊಂಡ ನಟ ದರ್ಶನ್
Loading...

ಕೊನೆಯ ಪ್ರಚಾರ ಅಂದರೆ ಚುನಾವಣೆಗೆ ಎರಡು ದಿನಗಳು ಬಾಕಿಯಿರುವಾಗ ಏ.16ರಂದು ನಡೆಯುವ ಪ್ರಚಾರದಲ್ಲಿ ಇಬ್ಬರು ಒಟ್ಟಿಗೆ ಪ್ರಚಾರ ನಡೆಸುವುದಾಗಿ ದರ್ಶನ್​ ತಿಳಿಸಿದ್ದಾರೆ. ಯಶ್​ ಹಾಗೂ ನಾನು ಹೋದ ಕಡೆಯಲ್ಲ ಜನರು ನಮ್ಮನ್ನು ಸ್ವಾಗತಿಸುತ್ತಿದ್ದಾರೆ. ಕೊನೆಯ ದಿನ ಒಟ್ಟಿಗೆ ಪ್ರಚಾರ ನಡೆಸುವ ಮೂಲಕ ಸುಮಲತಾ ಅವರಿಗೆ ಇನ್ನಷ್ಟು ಶಕ್ತಿ ತುಂಬುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.

First published:April 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...