ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಬಿಟ್ಟು ಕೊಡೋ ಮನಸ್ಸಿಲ್ಲ - ಮಕ್ಕಳ ಪ್ರಗತಿಗಾಗಿ ಕುಟುಂಬ ಸಮೇತ ದುಡೀತೀವಿ ; ಭವಾನಿ ರೇವಣ್ಣ

ನಮ್ಮ ಹಾಸನ ಜಿಲ್ಲೆ ಕಳೆದ ಬಾರಿ ಮೊದಲ ಸ್ಥಾನ ಪಡೆದಿದೆ. ಅದನ್ನು ನಾನಂತು ಎಲ್ಲೂ ಕೂಡ ಹೇಳಿಕೊಂಡಿಲ್ಲ ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿತ್ತು. 31ನೇ ಸ್ಥಾನದಲ್ಲಿ ಇದ್ದ ಜಿಲ್ಲೆ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದೆ

news18-kannada
Updated:January 14, 2020, 3:36 PM IST
ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಬಿಟ್ಟು ಕೊಡೋ ಮನಸ್ಸಿಲ್ಲ - ಮಕ್ಕಳ ಪ್ರಗತಿಗಾಗಿ ಕುಟುಂಬ ಸಮೇತ ದುಡೀತೀವಿ ; ಭವಾನಿ ರೇವಣ್ಣ
ಭವಾನಿ ರೇವಣ್ಣ
  • Share this:
ಹಾಸನ(ಜ.14): ನನಗೆ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಬಿಟ್ಟುಕೊಡಲು ಮನಸ್ಸಿಲ್ಲ. ಆದರೆ ಮಕ್ಕಳ ಓದಿಗಾಗಿ ನಾವು ಕುಟುಂಬ ಸಮೇತರಾಗಿ ದುಡಿಯಲು ಸಿದ್ದರಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ.

ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಮತ್ತೆ ಹಾಸನವನ್ನು ಪ್ರಥಮ ಸ್ಥಾನ ಪಡೆಯುವಂತೆ ಮಾಡಲು ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರುಗಳ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಹಾಸನ ಜಿಲ್ಲೆ ಕಳೆದ ಬಾರಿ ಮೊದಲ ಸ್ಥಾನ ಪಡೆದಿದೆ. ಅದನ್ನು ನಾನಂತು ಎಲ್ಲೂ ಕೂಡ ಹೇಳಿಕೊಂಡಿಲ್ಲ ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿತ್ತು. 31ನೇ ಸ್ಥಾನದಲ್ಲಿ ಇದ್ದ ಜಿಲ್ಲೆ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣರಾದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಧನ್ಯವಾದಗಳು. ಪೋಷಕರ ಸಭೆ ನಡೆಸಿರುವುದು ಹಾಸನ ಜಿಲ್ಲೆಯಲ್ಲಿ ಮಾತ್ರ ಎಂದರು.

ಅಧಿಕಾರ ಇರಲಿ, ಇಲ್ಲದಿರಲಿ ರೇವಣ್ಣ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸಹಕಾರದಿಂದ ಮೊದಲ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಹತ್ತಿರವಿದ್ದು ಶಿಕ್ಷಕರು ಪೋಷಕರ ಸಭೆ ನಡೆಸಬೇಕು. ಈ‌ ಬಾರಿಯೂ ಮೊದಲ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ : ಬೇವಿನ ಮರದಲ್ಲಿ ಹಾಲು; ವಿಶೇಷ ಪೂಜೆ ಮಾಡುವುದಾಗಿ ಹೇಳಿ ರೈತನಿಗೆ 50 ಸಾವಿರ ವಂಚನೆ

ಈ ಬಾರಿಯೂ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು 50 ಅಂಶಗಳಿರುವ ಕಾರ್ಯಕ್ರಮ ರೂಪಿಸಿರೋದಾಗಿ ಭವಾನಿ ರೇವಣ್ಣ ಹೇಳಿದ್ದು, ಈ ಮಾಹಿತಿಯನ್ನು ಪ್ರತಿ ಶಾಲೆಗೂ ತಲುಪಿಸಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು, ತಜ್ಞರ ಸಲಹೆಯೊಂದಿಗೆ 50 ಅಂಶಗಳನ್ನು ಒಳಗೊಂಡಿರುವ ಕಾರ್ಯಕ್ರಮ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
 

 
First published: January 14, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading