ಪ್ರಾಣ ಬೇಕಾದರೆ ಹೋಗಲಿ, ಆದರೆ ವೈದ್ಯಕೀಯ ಕಾಲೇಜನ್ನು ಮಾತ್ರ ಬಿಟ್ಟುಕೊಡುವುದಿಲ್ಲ; ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ

ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಹೋರಾಟ ಮಾಡಲು ನಾನು ಸಿದ್ಧ. ವಿಧಾನಸೌಧದಲ್ಲಿ ನನ್ನ ಪ್ರಾಣ ಬೇಕಿದ್ದರೆ ಹೋಗಲಿ ಎಂದರು ಡಿಕೆಶಿ.

Rajesh Duggumane | news18-kannada
Updated:October 29, 2019, 2:17 PM IST
ಪ್ರಾಣ ಬೇಕಾದರೆ ಹೋಗಲಿ, ಆದರೆ ವೈದ್ಯಕೀಯ ಕಾಲೇಜನ್ನು ಮಾತ್ರ ಬಿಟ್ಟುಕೊಡುವುದಿಲ್ಲ; ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ
ಡಿಕೆ ಶಿವಕುಮಾರ್
  • Share this:
ಬೆಂಗಳೂರು (ಅ.29): ಕಳೆದ ಮೈತ್ರಿ ಸರ್ಕಾರದ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕನಕಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. ಅಲ್ಲದೆ, ಈ ಯೋಜನೆಗೆ ಸಾವಿರಾರು ಕೋಟಿ ಅನುದಾನವನ್ನೂ ಸಹ ತೆಗೆದಿಟ್ಟಿದ್ದರು. ಆದರೆ, ಇದೀಗ ಸಿಎಂ ಬಿ.ಎಸ್. ಯಡಿಯೂರಪ್ಪ ಈ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುವ ಕುರಿತು ಚಿಂತನೆ ನಡೆಸಿದ್ದು, ಈ ಬಗ್ಗೆ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ.

ಬಿಜೆಪಿ ಸರ್ಕಾರದ ಈ ಕುರಿತ ಚಿಂತನೆ ವಿರುದ್ಧ ಕೆಂಡಕಾರಿರುವ ಡಿ.ಕೆ. ಶಿವಕುಮಾರ್​, "​ ಕನಕಪುರದಲ್ಲೇ ಮೆಡಿಕಲ್ ಕಾಲೇಜು ಆಗಬೇಕು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ, ಯಡಿಯೂರಪ್ಪ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾರೆ. ಯಡಿಯೂರಪ್ಪ ಧೋರಣೆ ಸರಿಇಲ್ಲ,” ಎಂದರು.

ಕನಕಪುರದಲ್ಲೇ ಮೆಡಿಕಲ್​ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ ಹೋರಾಟಕ್ಕೂ ಸಿದ್ಧ ಎಂದ ಅವರು, “ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಹೋರಾಟ ಮಾಡಲು ನಾನು ಸಿದ್ಧ. ವಿಧಾನಸೌಧದಲ್ಲಿ ನನ್ನ ಪ್ರಾಣ ಬೇಕಿದ್ದರೆ ಹೋಗಲಿ. ಆದರೆ ಮೆಡಿಕಲ್ ಕಾಲೇಜನ್ನು ಮಾತ್ರ ಬಿಟ್ಟುಕೊಡುವುದಿಲ್ಲ,” ಎಂದು ಡಿಕೆಶಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ: ನಾನು ಯಾವ ಯುದ್ದವನ್ನೂ ಗೆದ್ದು ಬಂದಿಲ್ಲ; ಆದರೆ ಜನ ತೋರಿದ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ; ಡಿಕೆ ಶಿವಕುಮಾರ್

ಅನರ್ಹ ಶಾಸಕ ಸುಧಾಕರ್​ ಲಾಭಿ ಮಾಡಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್​ ಕಾಲೇಜನ್ನು ಸ್ಥಳಾಂತರ ಮಾಡಿಸಿಕೊಂಡಿದ್ದಾರೆ ಎನ್ನುವ ಮಾತಿದೆ. ಈ ವಿಚಾರವಾಗಿಯೂ ಟ್ರಬಲ್​ ಶೂಟರ್​ ಗುಡುಗಿದ್ದಾರೆ. “ಸುಧಾಕರ್ ಯಾರ್ರೀ ನಮಗೆ? ಸುಧಾಕರ್​ ನನ್ನ ಮೇಲೇ ಏನಾದರೂ ಹಗೆ ತನ ಮಾಡಿಕೊಳ್ಳಲಿ ಅಥವಾ ನನ್ನನ್ನು ನೇಣಿಗೆ ಹಾಕಲಿ. ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆ. ಯಾವುದೇ ಕಾರಣಕ್ಕೂ ಅದನ್ನು ಬಿಟ್ಟು ಕೊಡುವ ಮಾತೇ ಇಲ್ಲ,” ಎಂದರು ಅವರು.

ಡಿಕೆಶಿ ಎಲ್ಲಾ ಸಮಸ್ಯೆಯಿಂದ ಹೊರಗೆ ಬಂದರೆ ಅತ್ಯಂತ ಖುಷಿ ಪಡುವ ವ್ಯಕ್ತಿ ನಾನು ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, “ಯಡಿಯೂರಪ್ಪ ಬಗ್ಗೆ ನಾನು ಮಾತನಾಡುವುದಿಲ್ಲ. ಪಾಪ, ನಾನು ಮಾತಾನಾಡುವುದರಿಂದ ಅವರ ಖುರ್ಚಿಗೆ ಸಮಸ್ಯೆ ಆಗುವುದು ಬೇಡ. ನನ್ನ ಜೊತೆ ಯಡಿಯೂರಪ್ಪ ಏನು ಮಾತನಾಡಿಲ್ಲ. ಆದರೆ, ಕೆಲ ಬಿಜೆಪಿ ಸ್ನೇಹಿತರು ನನಗೆ ಶುಭ ಕೋರಿದ್ದಾರೆ. ಅವರ ಹೆಸರು ಇವಾಗ ಹೇಳೋದು ಬೇಡಬಿಡಿ,” ಎಂದು ಹೇಳುವ ಮೂಲಕ ಬಿಎಸ್​ವೈಗೆ ಡಿಕೆಶಿ ಟಾಂಗ್ ಕೊಟ್ಟರು.

(ವರದಿ: ಕೃಷ್ಣ ಜಿವಿ)
First published:October 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ