ಮಂಡ್ಯಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಮಾಧ್ಯಮಗಳ ಜೊತೆ ಮಾತನಾಡಿ ಸಂಸದ ಪ್ರತಾಪ್ ಸಿಂಹ (MP Pratap Simha) ಅವರಿಗೆ ತಿರುಗೇಟು ನೀಡಿದರು. ಇದೇ ವೇಳೆ ಕ್ಷೇತ್ರ ಬದಲಾವಣೆ ಬಗ್ಗೆ ಕೇಳುತ್ತಿರುವ ಬಗ್ಗೆ ಸ್ಪಷ್ಟನೆ ಸಹ ನೀಡಿದರು. ಬೆಂಗಳೂರು-ಮೈಸೂರು ದಶಪಥ ಮಾರ್ಗದ (Bengaluru-Mysuru 10 Lane Highway) ಕಾಮಗಾರಿ ಹಿನ್ನೆಲೆ ಟ್ರಾಫಿಕ್ ಉಂಟಾಗುತ್ತಿದೆ. ಆದ್ರಿಂದ ಸುಮಲತಾ ಅವರು ಮಂಡ್ಯಕ್ಕೆ (Mandya) ರೈಲಿನಲ್ಲಿ ಆಗಮಿಸಿದರು. ಇನ್ನೇನು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ಸಮಸ್ಯೆ ಆಗುತ್ತೆ ಎಂದರು. ದಿಶಾ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಸಂಸದರು ಭಾಗಿಯಾಗಿದರು.
ರಾಜಕಾರಣದಲ್ಲಿ ಮಗನಿಗೆ ಸ್ಟೂಲ್ ಹಿಡಿಯಲ್ಲ
ಪುತ್ರ ಅಭಿಷೇಕ್ಗೆ ರಾಜಕೀಯ ಪಕ್ಷಗಳು ನೀಡಿರೋದು ನಿಜ. ಆದರೆ ಯಾವ ಪಕ್ಷ ಎಂದು ಈ ಸಮಯದಲ್ಲಿ ಹೇಳಲು ಆಗಲ್ಲ. ಮದ್ದೂರು ಅಥವಾ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೇಳುವ ಪರಿಸ್ಥಿತಿ ನಮಗೆ ಬಂದಿಲ್ಲ. ಸಿನಿಮಾದಲ್ಲಿ ಮೊದಲ ಹೆಜ್ಜೆ ಇರಿಸಿರುವ ರಾಜಕೀಯಕ್ಕೆ ಬರುವ ಕುರಿತು ಅವನು ನಿರ್ಧರಿಸಬೇಕು.
ಬೇರೆ ಬೇರೆ ಪಕ್ಷದಿಂದ ಆಫರ್ ಇರೋದು ನಿಜ. ಯಾವ ಪಕ್ಷಕ್ಕೆ ಅಭಿಷೇಕ್ ಅನಿವಾರ್ಯ ವದೆಯೋ ಆ ಪಕ್ಷದವರು ಮಾತನಾಡುತ್ತಾರೆ. ನಾನು ಸಂಸದೆಯಾಗಿ ರಾಜಕಾರಣದಲ್ಲಿ ಮಗನಿಗೆ ಸ್ಟೂಲ್ ಹಿಡಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: Chitradurga: ಅಪ್ರಾಪ್ತೆ ಪತ್ನಿಯ ಮೇಲೆ ಪತಿ ಸ್ನೇಹಿತರಿಂದಲೇ ಗ್ಯಾಂಗ್ರೇಪ್; ಮೂವರ ಬಂಧನ, ಓರ್ವ ಎಸ್ಕೇಪ್
ಮಂಡ್ಯವನ್ನು ನಾನು ಬಿಡಲ್ಲ
2019ರ ಚುನಾವಣೆ ಕಾಂಗ್ರೆಸ್ ನನಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಮೈಸೂರು ಕ್ಷೇತ್ರದ ಟಿಕೆಟ್ ನೀಡೋದಾಗಿ ಹೇಳಿತ್ತು. ಆದರೆ ಎಲ್ಲ ವಿರೋಧದ ನಡುವೆ ಮಂಡ್ಯಕ್ಕೆ ಬಂದಿದ್ದೇನೆ. ಮಂಡ್ಯವನ್ನು ನಾನು ಬಿಡಲ್ಲ, ಮಂಡ್ಯ ಸಹ ನನ್ನನ್ನು ಬಿಡಲ್ಲ ಎಂಬ ನಂಬಿಕೆ ನನಗಿದೆ.
ನಾನು ಯಾವುದೇ ಪಕ್ಷದಲ್ಲಿಯೂ ಇಲ್ಲ, ಯಾವ ಕ್ಷೇತ್ರಕ್ಕೂ ಟಿಕೆಟ್ ಕೇಳಿಲ್ಲ. ಇದು ಕೇವಲ ಅಪಪ್ರಚಾರ ಎಂದು ಕೇಳಿಬರುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು.
ಕೆಲವರಿಂದ ಚೀಪ್ ಲೆವೆಲ್ ಪಾಲಿಟಿಕ್ಸ್
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಚೀಪ್ ಪಾಲಿಟಿಕ್ಸ್ ಮಾಡಲಾಗುತ್ತಿದೆ. ಈ ತರಹ ಹೇಳಿಕೆ ಮೂಲಕ ಅಪಪ್ರಚಾರ ಮಾಡುವ ಯತ್ನ ನಡೆಯುತ್ತಿದೆ. ಜನ ನನ್ನನ್ನ ಇಷ್ಟ ಪಟ್ಟಿದ್ದಾರೆ ಅದಕ್ಕೆ ನಾನಿಲ್ಲಿದೀನಿ. ಚೀಪ್ ಲೆವೆಲ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ.
ನನ್ನ ಹಾಗೂ ಮೈಸೂರು ಸಂಸದರ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ. ನಮ್ಮ ರೈತರು ಮತ್ತು ನಮ್ಮ ಜನಕ್ಕೆ ತೊಂದರೆ ಆದ್ರೆ ನಾನು ಹೋರಾಟ ಮಾಡುತ್ತೇನೆ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ನಮ್ಮ ಭಾಗದ ಜನರಿಗೆ ತೊಂದರೆಯಾದ್ರೆ ನೇರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿಯೇ ಹೋಗಿ ನ್ಯಾಯ ಕೇಳ್ತೀನಿ ಎಂದರು.
ಕೆಲಸ ಮಾಡದೇ ಇರೋರಿಂದ ಅಪಪ್ರಚಾರ
ನನ್ನದು ಫೋಟೊ ಪಾಲಿಟಿಕ್ಸ್ ಅಲ್ಲ. ಕೆಲಸ ಮಾಡಿಸಿ ಕ್ಯಾಮೆರಾ ಮುಂದೆ ಮೀಡಿಯಾ ಮುಂದೆ ನಾನು ಪ್ರಚಾರ ಪಡೆಯುವುದಿಲ್ಲ. ಮೂರು ವರ್ಷದಲ್ಲಿ ಏನು ಕೆಲಸ ಮಾಡದೇ ಇದ್ದವರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಜನರ ಆಶೀರ್ವಾದ ನಮ್ಮ ಮೇಲೆ ಇರೋದರಿಂದ ನಾನಿಲ್ಲಿದ್ದೇನೆ.
ಇದನ್ನೂ ಓದಿ: BK Hariprasad Allegation: ನನ್ನ ಸ್ವಂತ ಸಾಮಾಜಿಕ ಜಾಲತಾಣದ ನಿರ್ವಹಣೆಗೆ ಸರ್ಕಾರದ ಹಣ ಬಳಸಿಲ್ಲ: BC Nagesh ಸ್ಪಷ್ಟನೆ
ನನ್ನ ಕೆಲಸ ಏನು ಅಂತ ನಮ್ಮ ಆತ್ಮಸಾಕ್ಷಿಗೆ ಗೊತ್ತಿದೆ. ಕ್ರೆಡಿಟ್ ಪಾಲಿಟಿಕ್ಸ್ ಬಗ್ಗೆ ಕೇಳಿಬರುತ್ತಿರುವ ನ್ಯೂಸ್ ಬಗ್ಗೆ ಬೇಸರವಿದೆ. ಪ್ರತಾಪ್ ಸಿಂಹ ಅವರ ಕೆಲಸ ಮಾಡಲಿ. ಹಾಗಂತ ನಾನು ಅವರ ಕೆಲಸಗಳಿಗೆ ಅಡ್ಡಿ ಮಾಡುತ್ತಿಲ್ಲ. ಕ್ಷೇತ್ರದ ಜನತೆಗೆ ತೊಂದರೆ ಆದ್ರೆ ಅದಕ್ಕೆ ಸ್ಪಂದಿಸೋದು ನನ್ನ ಜವಾಬ್ದಾರಿ ಅಂತ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ