ನೋ ಬಾಲ್ ಗೆ ರನೌಟ್ ಆಗಿದ್ದೇನೆ, ಈ ಬಾರಿ ಮ್ಯಾಚ್ ಆಡೋಕೆ ಹೋಗಿಲ್ಲ: MLA Raju Gowda ಹೇಳಿಕೆ

ನಾನು ಕಳೆದ ಬಾರಿ ಸಚಿವ ಸ್ಥಾನ ನೀಡಿ ಅಂತ ಕೇಳಿದ್ದೆ. ಆದರೆ ಸಚಿವ ಸ್ಥಾನ ನೀಡಿಲ್ಲ. ಕಳೆದ ಎರಡು ಬಾರಿ ಸಚಿವ ಸ್ಥಾನ ವಂಚಿತನಾಗಿ ನೋ ಬಾಲ್ ಗೆ ರನೌಟ್ ಆಗಿದ್ದೇನೆ. ಹೀಗಾಗಿ ಈ ಬಾರಿ ಮ್ಯಾಚ್ ಆಡೋಕೆ ಹೋಗಲ್ಲವೆಂದು ಶಾಸಕ ರಾಜುಗೌಡ ಹೇಳಿದರು.

ಶಾಸಕ ರಾಜು ಗೌಡ

ಶಾಸಕ ರಾಜು ಗೌಡ

  • Share this:
ಯಾದಗಿರಿ: ರಾಜಕೀಯ ಪಡಶಾಲೆಯಲ್ಲಿ (Karnataka Politics) ಈಗ ಪಕ್ಷಾಂತರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಶಾಸಕರು (BJP MLA) ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದರೆ, ಇತ್ತ ಬಿಜೆಪಿ ಕೆಲ ಶಾಸಕರು, ಕಾಂಗ್ರೆಸ್ ಶಾಸಕರು (Congress MLA) ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆಂದು ಪರಸ್ಪರ ಹೇಳಿಕೆ ನೀಡುತ್ತಿರುವದು ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳಿಕೆ ನೀಡಿ ಹಾವಾಡಿಗರ ತರಹ ನಾಟಕ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವರು ಮೊದಲು ಬಾಯಿಗೆ ಬೀಗ ಹಾಕಿಕೊಳ್ಳಬೇಕೆಂದು ಶಾಸಕ ರಾಜುಗೌಡ (MLA Raju Gowda) ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜೂ ಗೌಡ, ಬಿಜೆಪಿ ಶಾಸಕರು, ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆಂದು ಅದೆ ರೀತಿ ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಿಕೆ ನೀಡಿದ್ದಾರೆ. 24 ಗಂಟೆ ಮಾಧ್ಯಮದವರು ತೊರಿಸಬೇಕೆಂದು ಹೇಳಿಕೆ ನೀಡುತ್ತಿದ್ದಾರೆ. ದಿನಾ ಮಾಧ್ಯಮದವರು ಕೊರೊನಾ ತೋರಿಸಿ ಜನರಿಗೆ ಬೇಜಾರಾಗಿತ್ತು.

ಇದನ್ನೂ ಓದಿ:  Belagavi Politics: ಸಚಿವ ಕತ್ತಿ ಟೀಂಗೆ ಇಂದು ಕೈಕೊಟ್ಟ ಬೆಳಗಾವಿ ಜಿಲ್ಲೆಯ ಹಲವು ಶಾಸಕರು; ಜಾರಕಿಹೊಳಿ ಸಹೋದರರ ವಿರುದ್ಧ ಸಿಎಂಗೆ ದೂರು

ಈಗ ಮನರಂಜನೆಗಾಗಿ ನಾವು ಸಹ ಐಟಂ ಸಾಂಗ್ ತರಹ ಆಗಿ ಬಿಟ್ಟಿದ್ದೇವೆ. ಜನರು ಕೊರೊನಾ ಮರೆತು ಇದನ್ನು ನೋಡಲಿ ಅಂತ ನಾವು ಸುಮ್ಮನಿದ್ದೇವೆ. ಕಾಂಗ್ರೆಸ್ ಒಂದು ಪಕ್ಷ ಅದು ಟ್ರೈನ್ ಅಲ್ಲ. ಯಾವೊಬ್ಬ ನಾಯಕ ಹೇಳಿಕೆ ನೀಡಿದರೆ ಆ ಹೇಳಿಕೆ ತೂಕ ಇರಬೇಕು. ಸುಮ್ಮನೆ ಪ್ರಚಾರಕ್ಕಾಗಿ ಹೇಳಿಕೆ ನೀಡಬಾರದೆಂದರು.

ಬಾಯಿಗೆ ಬೀಗ ಹಾಕೊಳ್ಳಿ

ಇಂತಹ ಹೇಳಿಕೆಯಿಂದ ಯಾರೊಬ್ಬರು ಬೇರೆ ಪಕ್ಷದ ನಾಯಕರ ಜೊತೆ ಮಾತನಾಡದ ಪರಿಸ್ಥಿತಿ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ನಿಮ್ಮ ಸಂಪರ್ಕದಲ್ಲಿ ಯಾರಿದ್ದಾರೆಂದು ಓಪನ್ ಆಗಿ ಹೇಳಿ. ನಮ್ಮ ಸಂಪರ್ಕದಲ್ಲಿ 16 ಜನ ಇದ್ದಾರೆಂದು ರಮೇಶ್ ಜಾರಕಿಹೊಳಿ ಅಣ್ಣನವರು ಹೇಳುತ್ತಾರೆ. ಒಬ್ಬರಿಗೊಬ್ಬರು ಕೌಂಟರ್ ಕೊಡೋದು ಆಗಿದೆ. ಇವರ ಸಂಪರ್ಕದಲ್ಲಿ ಯಾರಿದ್ದಾರೆ ಅವರ ಸಂಪರ್ಕದಲ್ಲಿ ಯಾರಿದ್ದಾರೆಂದು ಹೇಳಬೇಕು. ಇಲ್ಲದಿದ್ದರೆ ಬಾಯಿಗೆ ಬೀಗ ಹಾಕಿಕೊಳ್ಳಬೇಕೆಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ರನೌಟ್ ಆಗಿದ್ದೇನೆ?

ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಚಾರದ ಬಗ್ಗೆ ಶಾಸಕ ರಾಜುಗೌಡ ಅವರು ಮಾತನಾಡಿ, ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಒತ್ತಡ ಹಾಕುವದಿಲ್ಲ. ಸಚಿವರನ್ನಾಗಿ ಮಾಡಿ ಅಂತ ಕೇಳಲ್ಲ. ಸಚಿವ ಸಂಪುಟ ಪುನರ್ ರಚನೆಯಾದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುವ ಕೆಲಸ ಮಾಡಬಾರದು. ಈ ಭಾಗ ಅಭಿವೃದ್ಧಿಯಾಗಬೇಕಾದರೆ ಸಚಿವ ಸ್ಥಾನ ಒದಗಿಸಬೇಕಿದೆ.

ಇದನ್ನೂ ಓದಿ:  ಸಿದ್ದರಾಮಯ್ಯ ಯಾರನ್ನ ಭೇಟಿ ಮಾಡ್ತಾರೋ ಅದನ್ನ ಕಟ್ಕೊಂಡು ನನಗೇನು? HD Kumaraswamy

ನಾನು ಕಳೆದ ಬಾರಿ ಸಚಿವ ಸ್ಥಾನ ನೀಡಿ ಅಂತ ಕೇಳಿದ್ದೆ. ಆದರೆ ಸಚಿವ ಸ್ಥಾನ ನೀಡಿಲ್ಲ. ಕಳೆದ ಎರಡು ಬಾರಿ ಸಚಿವ ಸ್ಥಾನ ವಂಚಿತನಾಗಿ ನೋ ಬಾಲ್ ಗೆ ರನೌಟ್ ಆಗಿದ್ದೇನೆ. ಹೀಗಾಗಿ ಈ ಬಾರಿ ಮ್ಯಾಚ್ ಆಡೋಕೆ ಹೋಗಲ್ಲವೆಂದು ಶಾಸಕ ರಾಜುಗೌಡ ಹೇಳಿದರು.

ಮಾನವೀಯತೆ ಮೆರೆದ ಶಾಸಕರು

ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದವರಿಗೆ ಸುರಪುರ ಶಾಸಕ ರಾಜುಗೌಡ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮನಗನಾಳ ಗ್ರಾಮದಲ್ಲಿ ಘಟನೆ ಜರುಗಿದೆ. ಮಹಾರಾಷ್ಟ್ರ ಮೂಲದ ಕಾರ್ಮಿಕರು ಕೂಲಿ ಕೆಲಸ ಮುಗಿಸಿ ಟಾಟಾ ಎಸಿಯಲ್ಲಿ ನಾಯ್ಕಲ್ ಗ್ರಾಮದ ಕಡೆ ತೆರಳುತ್ತಿದ್ದರು. ಈ ವೇಳೆ ಟಾಟಾ ಎಸಿ ಪಲ್ಟಿಯಾಗಿ ಕಾರ್ಮಿಕರು ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.

ಈ ವೇಳೆ ಮಾರ್ಗ ಮಧ್ಯ ತೆರಳುತ್ತಿದ್ದ ಶಾಸಕ ರಾಜುಗೌಡ ಅವರು ಕಾರ್ಮಿಕರು ನರಳಾಡುವದನ್ನು ಕಂಡು ಸ್ಥಳೀಯರ ಸಹಾಯದಿಂದ ಗಾಯಗೊಂಡವರಿಗೆ ಬಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
Published by:Mahmadrafik K
First published: