ಜೆಡಿಎಸ್ ಬಿಡುವ ಸಂಭವವೇ ಇಲ್ಲ, ಅಲ್ಲದೇ ಬಿಜೆಪಿಗೆ ಈಗ ನಮ್ಮ ಅಗತ್ಯವೇ ಇಲ್ಲ; ಜೆಡಿಎಸ್ ಶಾಸಕ ಸುರೇಶ್​ಗೌಡ

ಇಲ್ಲಿಗೆ ಬಂದಾಗ ನಮ್ಮ ಜನ ಈ ಕೇಸರಿ ಬಣ್ಣದ ಶಾಲು ಹಾಕುದ್ರು. ಈ ಟವಲ್ ಹಾಕಿದ ಮಾತ್ರಕ್ಕೆ ಏನಪ್ಪ ಈತ ಬಿಜೆಪಿಗೆ ಹೋಗ್ತಾ ಇದ್ದಾನಾ ಅಂದ್ರೆ ನಾವೇನ್ ಮಾಡೋಣ. ಅಲ್ಲಾ ಈ ಬಣ್ಣದ ಟವಲ್​ಗೆ ಏನಾದ್ರು ಪೇಟೆಂಟ್ ತಗೊಂಡಿದ್ದೀರಾ ಇಲ್ವಲ್ಲ ಎಂದು ಹೇಳಿದರು.

HR Ramesh | news18-kannada
Updated:December 17, 2019, 5:05 PM IST
ಜೆಡಿಎಸ್ ಬಿಡುವ ಸಂಭವವೇ ಇಲ್ಲ, ಅಲ್ಲದೇ ಬಿಜೆಪಿಗೆ ಈಗ ನಮ್ಮ ಅಗತ್ಯವೇ ಇಲ್ಲ; ಜೆಡಿಎಸ್ ಶಾಸಕ ಸುರೇಶ್​ಗೌಡ
ಇಲ್ಲಿಗೆ ಬಂದಾಗ ನಮ್ಮ ಜನ ಈ ಕೇಸರಿ ಬಣ್ಣದ ಶಾಲು ಹಾಕುದ್ರು. ಈ ಟವಲ್ ಹಾಕಿದ ಮಾತ್ರಕ್ಕೆ ಏನಪ್ಪ ಈತ ಬಿಜೆಪಿಗೆ ಹೋಗ್ತಾ ಇದ್ದಾನಾ ಅಂದ್ರೆ ನಾವೇನ್ ಮಾಡೋಣ. ಅಲ್ಲಾ ಈ ಬಣ್ಣದ ಟವಲ್​ಗೆ ಏನಾದ್ರು ಪೇಟೆಂಟ್ ತಗೊಂಡಿದ್ದೀರಾ ಇಲ್ವಲ್ಲ ಎಂದು ಹೇಳಿದರು.
  • Share this:
ಮಂಡ್ಯ: ನಾನು ಜೆಡಿಎಸ್ ಬಿಡುತ್ತೇನೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಯಾಕೆ ಬರ್ತಿದೆ ಅನ್ನೋದು ಗೊತ್ತಿಲ್ಲ. ನಾನು ಮೊದಲೇ ಹೇಳಿದ್ದೀನಿ, ನಾನು ಮಾರಾಟಕ್ಕಿಲ್ಲ ಎಂದು. ನಾನು ಯಾವುದೇ ಪಕ್ಷದವರ ಜೊತೆ ಇದುವರೆಗೂ ಯಾವುದೇ ಮಾತುಕತೆ ಮಾಡಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ದೇವೇಗೌಡ ಕುಟುಂಬ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಬಿಟ್ಟು ಹೋಗುವ ಪ್ರಮೇಯ ಬರೋದೇ ಇಲ್ಲ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಸ್ಪಷ್ಟಪಡಿಸಿದರು.

ಜೆಡಿಎಸ್ ಶಾಸಕರಾದ ಸುರೇಶ್ ಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಅವರು ಬಿಜೆಪಿ ಸೇರ್ಪಡೆ ವದಂತಿ ವಿಚಾರವಾಗಿ ನಾಗಮಂಗಲದ ಹುಳ್ಳೇನನಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಸುರೇಶ್ ಗೌಡ, ನಾನು ಜೆಡಿಎಸ್ ಬಿಡುತ್ತೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರು ಈ ಷಡ್ಯಂತ್ರ್ಯ ಮಾಡ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಬೇಕು. ಖಡಾಖಂಡಿತವಾಗಿ ಈ ತರ ಸುದ್ದಿ ಹಬ್ಬಿಸಿ ಒಬ್ಬ ವ್ಯಕ್ತಿಯ ತೇಜೋವಧೆ ಮಾಡ್ತಿದ್ದಾರೆ. ನಾನು ಸ್ಪಷ್ಟೀಕರಣ ನೀಡ್ತಾ‌ ಇದ್ದೇನೆ, ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಬಿಟ್ಟು ಹೋಗುವ ಪರಿಸ್ಥಿತಿ ಉದ್ಭವವಾಗಿಲ್ಲ. ನಾನಾಗಲಿ ಅಥವಾ ರವೀಂದ್ರ ಶ್ರೀಕಂಠಯ್ಯ ಆಗಲಿ, ಯಾವತ್ತು ಯಾರಿಗೂ ಬೆನ್ನಿಗೆ ಚೂರಿ ಹಾಕಿ ಹೋದವರಲ್ಲ. ನಾವು ಪರಿಸ್ಥಿತಿಗೆ ಅನುಗುಣವಾಗಿ ಅವತ್ತು ಕಾಂಗ್ರೆಸ್ ಪಕ್ಷದಲ್ಲಿದ್ದೋ ಅವತ್ತು ಆ ಪಕ್ಷಕ್ಕೆ ಅನ್ಯಾಯ ಮಾಡಿಲ್ಲ. ನಮ್ಮ ವಿರೋಧಿಗಳು ಆ ಪಕ್ಷಕ್ಕೆ ಬಂದ್ರು ಹಾಗಾಗಿ ನಾವು ಬೇರೇ ಪಕ್ಷ ಆಯ್ಕೆ ಮಾಡ್ಕೋ ಬೇಕಾದ ಪರಿಸ್ಥಿತಿ‌ ಆಯ್ತು. ಅವತ್ತು ನಮಗೆ ರಕ್ಷಣೆ ಕೊಟ್ಟವರು ದೇವೇಗೌಡ್ರು ಮತ್ತು ಕುಮಾರಸ್ವಾಮಿ ಅವ್ರು. ನಾವು ಬಂದಿದ್ದಿವಿ, ನಾವು ಅವರಿಗೆ ಪ್ರಾಮಾಣಿಕವಾಗಿ ಇರುತ್ತೇವೆ, ಹೊರತು ಪಕ್ಷ ಬಿಡುವ ಪ್ರಮೇಯ ಇಲ್ಲ. ಆದರೆ, ಈಗ ಯಾಕೆ ನಮ್ಮ ವಿರುದ್ಧ ಹೀಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ಗೊತ್ತಿಲ್ಲ. ಅಲ್ಲದೇ, ಬಿಜೆಪಿಯವರಿಗೆ ಈಗ ನಮ್ಮ ಅವಶ್ಯಕತೆನೇ ಇಲ್ಲ ಎಂದರು.

ಇದನ್ನು ಓದಿ: ನಾನು ಜೆಡಿಎಸ್​ ಬಿಡಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ; ಊಹಾಪೋಹಗಳಿಗೆ ತೆರೆ ಎಳೆದ ಶಾಸಕ ರವೀಂದ್ರ ಶ್ರೀಕಂಠಯ್ಯ

ಸುರೇಶ್​ ಗೌಡ ಹೆಗಲ ಮೇಲೆ ಕೇಸರಿ ಶಾಲು

ನಾಗಮಂಗಲ ಶಾಸಕ ಸುರೇಶ್ ಗೌಡ್ರು ಹೆಗಲ ಮೇಲೆ ಕೇಸರಿ‌ ಶಾಲು ಹಾಕಿಕೊಂಡ ವಿಚಾರವಾಗಿಯೂ ಸ್ಪಷ್ಟನೆ ನೀಡಿದ ಅವರು, ಈ ಕೇಸರಿ ಶಾಲಿಗೆ ಏನಾದರೂ ಬಿಜೆಪಿ ಪೇಟೆಂಟ್ ಪಡೆದಿಯಾ? ನಾನು ಈ ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಬಿಜೆಪಿಗೆ ಹೋದ ಅಂತ ಹೇಳಿದರೆ ನಾನೇನು ಮಾಡೋಕೆ ಆಗುತ್ತೆ. ಈ ಊರಿನಲ್ಲಿ ದೇವರ ಪೂಜೆ ನಡೀತಾ ಇದೆ. ಇಲ್ಲಿಗೆ ಬಂದಾಗ ನಮ್ಮ ಜನ ಈ ಕೇಸರಿ ಬಣ್ಣದ ಶಾಲು ಹಾಕುದ್ರು. ಈ ಟವಲ್ ಹಾಕಿದ ಮಾತ್ರಕ್ಕೆ ಏನಪ್ಪ ಈತ ಬಿಜೆಪಿಗೆ ಹೋಗ್ತಾ ಇದ್ದಾನಾ ಅಂದ್ರೆ ನಾವೇನ್ ಮಾಡೋಣ. ಅಲ್ಲಾ ಈ ಬಣ್ಣದ ಟವಲ್​ಗೆ ಏನಾದ್ರು ಪೇಟೆಂಟ್ ತಗೊಂಡಿದ್ದೀರಾ ಇಲ್ವಲ್ಲ ಎಂದು ಹೇಳಿದರು.
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading