Ex MLA Suresh Gowda: ಯಡಿಯೂರಪ್ಪ ಕೆಜೆಪಿಗೆ ಹೋದಾಗಲೇ ಬಿಜೆಪಿ ಬಿಡಲಿಲ್ಲ, ಇನ್ನೂ ಈಗ ಪಕ್ಷ ಬಿಡ್ತೀನಾ: ಮಾಜಿ ಶಾಸಕ ಸುರೇಶ್ ಗೌಡ

ಮುಂದೊಂದು ದಿನ ಮಹತ್ವ‌ ನಿರ್ಧಾರವನ್ನು ಸುರೇಶ್ ಗೌಡ ಅವರು ತೆಗೆದುಕೊಳ್ತಾರೆ ಎನ್ನಲಾಗಿದೆ. ಸ್ವಲ್ಪ ದಿನ ಬಿಜೆಪಿ ಯಲ್ಲೇ ಇದ್ದು, ಆ ನಂತರ ಚುನಾವಣೆ ಹೊಸ್ತಿಲಲ್ಲಿ ಮಹತ್ತರ ತೀರ್ಮಾನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಅಲ್ಲಿಯವರೆಗೂ ಸೈಲೆಂಟ್ ಆಗಿ ಇದ್ದು, ಪಕ್ಷದಲ್ಲಿ ಇರುಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಸುರೇಶ್​ ಗೌಡ

ಸುರೇಶ್​ ಗೌಡ

  • Share this:
ಬೆಂಗಳೂರು: ತುಮಕೂರು ಬಿಜೆಪಿಯಲ್ಲಿ (Tumakuru BJP) ಭಿನ್ನಮತ ಸ್ಫೋಟಗೊಂಡಿದೆ. ಇದೀಗ ಭಿನ್ನಮತ ಶಮನಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಮುಂದಾಗಿದ್ದಾರೆ. ಮಾಜಿ ಶಾಸಕ ಸುರೇಶ್ ಗೌಡರನ್ನು (Former MLA Suresh Gowda) ಕರೆಸಿ, ಚರ್ಚೆ ನಡೆಸಿದ್ದಾರೆ. ಇಂದು ಕಾವೇರಿ ನಿವಾಸಕ್ಕೆ ಆಗಮಿಸಿದ, ಸುರೇಶ್ ಗೌಡ, ತಮ್ಮ ಅಸಮಧಾನಕ್ಕೆ ಕಾರಣವಾಗಿರೋರ ಮೇಲೆ ದೂರಿದ್ದಾರೆ. ಅಲ್ಲದೇ ಯಾಕೆ ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದರ‌ ಬಗ್ಗೆಯೂ ವಿವರಣೆ ನೀಡಿದ್ದಾರೆ. ಇನ್ನೂ ಸ್ಥಳೀಯ ಕೆಲ ನಾಯಕರ ವಿರುದ್ದವೂ ಸುರೇಶ್ ಗೌಡ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಸಚಿವ ಮಾಧುಸ್ವಾಮಿ, ಸಂಸದ ಬಸವರಾಜ್ ಮೇಲೂ ಸುರೇಶ್ ಗೌಡ ಆರೋಪಿಸಿ, ಇವರಿಂದಲೇ ನಾನು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತಾಡಿರುವ ಸುರೇಶ್ ಗೌಡ ಅವರು, ನನಗೆ ಪಕ್ಷ ದಿಂದ ಕೆಟ್ಟದ್ದು ಆಗಿಲ್ಲ, ಆದರೆ ಕೆಲವು ವ್ಯಕ್ತಿಗಳಿಂದ ಕೆಟ್ಟದು ಆಗಿದೆ ಎಂದು ಹೇಳುವ ಮೂಲಕ ಅವರ ಬಗ್ಗೆ ಬಿಎಸ್ವೈಗೆ ದೂರಿರುವ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ ಸುರೇಶ್ ಗೌಡರ ಮಾತು ಕೇಳಿರುವ ಮಾಜಿ ಸಿಎಂ ಯಡಿಯೂರಪ್ಪ, ಏನೆ ಇದ್ದರೂ ಅದನ್ನೆಲ್ಲ ಸರಿಪಡಿಸೋಣ. ಈಗ ಒಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ

ಇನ್ನೂ ಪಕ್ಷ ಬಿಡುವ ಬಗ್ಗೆ ಮಾತಾಡಿರುವ ಸುರೇಶ್ ಗೌಡ, ಹಿಂದೆ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗಲೇ ನಾನು ಪಕ್ಷ ಬಿಟ್ಟಿಲ್ಲ, ಇನ್ನೂ ಇವಾಗ ಪಕ್ಷ ಬಿಟ್ಟು ಯಾಕೆ ಹೋಗಲಿ ಎಂದು ಪ್ರಶ್ನಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪಗಿಂತಲೂ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನನಗೆ ಆತ್ಮೀಯರು, ಅವರ ಜೊತೆ ನಾನು ತುಂಬಾ ಚೆನ್ನಾಗಿದ್ದೇನೆ. ಅವರ ಜೊತೆ ಮುಂದೆ ಒಟ್ಟಾಗಿ ಪಕ್ಷ ಸಂಘಟಿಸುವ ಕೆಲಸ ಮಾಡೋದಾಗಿ ತಿಳಿಸಿದ್ದಾರೆ. ಇನ್ನೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆಗೆ ನೀಡಿದ್ದೇನೆ. ಈ ವಿಷಯದ ಬಗ್ಗೆ ನಾನು ಯಡಿಯೂರಪ್ಪಗೆ ತಿಳಿಸಬೇಕಿತ್ತು, ತಿಳಿಸಿದ್ದೇನೆ. ನಾನು ರಾಜೀನಾಮೆ ನೀಡಿದರೂ, ಪಕ್ಷದ ಕಾರ್ಯಕರ್ತನಾಗಿ ಪಕ್ಷದಲ್ಲೇ ಇರುತ್ತೇನೆ. ಆದರೆ ರಾಜೀನಾಮೆ ಹಿಂಪಡೆಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುತೂಹಲ ಮೂಡಿಸಿದ ಸುರೇಶ್ ಗೌಡ ನಡೆ..?

ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸುರೇಶ್ ಗೌಡ ಹೇಳಿದರೂ,‌ ಮುಂದೊಂದು ದಿನ ಮಹತ್ವ‌ ನಿರ್ಧಾರವನ್ನು ಸುರೇಶ್ ಗೌಡ ಅವರು ತೆಗೆದುಕೊಳ್ತಾರೆ ಎನ್ನಲಾಗಿದೆ. ಸ್ವಲ್ಪ ದಿನ ಬಿಜೆಪಿ ಯಲ್ಲೇ ಇದ್ದು, ಆ ನಂತರ ಚುನಾವಣೆ ಹೊಸ್ತಿಲಲ್ಲಿ ಮಹತ್ತರ ತೀರ್ಮಾನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಅಲ್ಲಿಯವರೆಗೂ ಸೈಲೆಂಟ್ ಆಗಿ ಇದ್ದು, ಪಕ್ಷದಲ್ಲಿ ಇರುಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: Mangaluru Girl: ಅಮೆರಿಕದಲ್ಲಿ ಮಂಗಳೂರಿನ ಯುವತಿಯನ್ನು ಮಗಳೇ ಎಂದ ಪ್ರಧಾನಿ ಮೋದಿ!

ನಾಳೆ ಶಾಸಕರು, ಸಂಸದರ ಭೇಟಿಯಾಗಲಿರುವ ಸಿಎಂ 

ನಾಳೆ ಇಡೀ ದಿನ ಶಾಸಕರಿಗೆ ಮತ್ತು ಸಂಸದರ ಭೇಟಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಿಟ್ಟಿದ್ದಾರೆ. ನಾಳೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯತನಕ ಶಾಸಕರು ಮತ್ತು ಸಂಸದರ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ. ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿ ನಿವಾಸದಲ್ಲಿ ಶಾಸಕರು ಮತ್ತು ಸಂಸದರನ್ನು ಸಿಎಂ ಭೇಟಿಯಾಗಲಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಮತ್ತು ಕಾರ್ಯಕಾರಣಿಯಲ್ಲಿ ಸಿಎಂ ಶಾಸಕರುಗಳು ಸಮಯ ನೀಡಬೇಕು ಎಂದು ಒತ್ತಾಯಿಸಿದ್ದರು. ತಮ್ಮ ಕ್ಷೇತ್ರಗಳ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲು ಸಮಯ ನೀಡಬೇಕು ಎಂದು ಶಾಸಕರುಗಳು ಒತ್ತಾಯಿಸಿದ್ದರು. ಅಂದರಂತೆ ನಾಳೆ ಶಾಸಕರುಗಳಿಗೆ ಸಮಯ ನೀಡಿ, ಅವರ ಸಮಸ್ಯೆ ಆಲಿಸಲಿದ್ದಾರೆ.
Published by:HR Ramesh
First published: