ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ (Congress High Command) ನೀಡಿರುವ ಸೂತ್ರ ಒಪ್ಪಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC DK Shivakumar) ಇಂದು ನಗುಮೊಗದಿಂದಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಸಿಎಂ ಸ್ಥಾನಕ್ಕಾಗಿ ಮುನಿಸಿಕೊಂಡಿದ್ದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ (Siddaramaiah) ಇಂದು ಜೊತೆಯಾಗಿ ಕಾಣಿಸಿಕೊಂಡು ಒಂದೇ ಕಾರ್ನಲ್ಲಿಯೇ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಅವರ ನಿವಾಸಕ್ಕೆ ತೆರಳಿದರು. ಆದ್ರೆ ಅಣ್ಣನಿಗೆ ಸಿಎಂ ಸ್ಥಾನ ತಪ್ಪಿದ್ದಕ್ಕೆ ಸಂಸದ ಡಿಕೆ ಸುರೇಶ್ (MP DK Suresh) ಮುನಿಸಿಕೊಂಡಿದ್ದಾರೆ. ನಾನು ಇಂದು ಸಂಪೂರ್ಣವಾಗಿ ಸಂತೋಷವಾಗಿದ್ದೇನೆ ಎಂದು ಹೇಳಲ್ಲ. ಆದ್ರೆ ಕರ್ನಾಟಕ ಜನತೆಗಾಗಿ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.
ಕರ್ನಾಟಕ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಪಕ್ಷ ಮತ್ತು ಡಿಕೆ ಶಿವಕುಮಾರ್ ಕೆಲವು ವಿಷಯಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮುಂದೆ ಏನಾಗುತ್ತೆ ಅಂತ ನೋಡೋಣ ಎಂದರು.
ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹಾರೈಸುತ್ತೇನೆ. ಆದ್ರೆ ಅದು ಸದ್ಯಕ್ಕೆ ಆಗಿಲ್ಲ ಅಲ್ಲವಾ? ನಾವು ಖಂಡಿತವಾಗಿ ಆ ಕ್ಷಣಕ್ಕೆ ಕಾಯುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: DK Shivakumar: ಕೂಲಿಯಾಗಿ ಸಿಎಂ ಸ್ಥಾನ ಕೇಳಿದ್ದ ಡಿಕೆಶಿ ಡಿಸಿಎಂ ಪೋಸ್ಟ್ಗೆ ಒಪ್ಪಿಕೊಂಡಿದ್ದು ಹೇಗೆ?
ಹೈಕಮಾಂಡ್ ಸೂತ್ರ ಒಪ್ಪಿಕೊಂಡ ಡಿಕೆ ಶಿವಕುಮಾರ್
ಕಾಂಗ್ರೆಸ್ ಅಧ್ಯಕ್ಷರು ಮತ್ತು ಗಾಂಧಿ ಕುಟುಂಬದ ಮಾತಿಗೆ ಒಪ್ಪಿಕೊಂಡಿದ್ದೇನೆ. ಪಕ್ಷದ ಹಿತಕ್ಕಾಗಿ ಹೈಕಮಾಂಡ್ ಫಾರ್ಮುಲಾ ಒಪ್ಪಿಕೊಂಡಿದ್ದೇನೆ. ನಮ್ಮ ಮೇಲೆ ಹೆಚ್ಚು ಜವಾಬ್ದಾರಿಗಳಿದ್ದು, ಕರ್ನಾಟಕದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ