ನಾನು ಅನರ್ಹರ ಪರವೂ ಇಲ್ಲ, ಕಾಂಗ್ರೆಸ್​ ಜೆಡಿಎಸ್​ ಪರವೂ ಇಲ್ಲ: ತೀರ್ಪಿಗೂ ಮುನ್ನ ರಮೇಶ್​ ಕುಮಾರ್​

ಸಂವಿಧಾನ ಎತ್ತಿಹಿಡಿಯುವ ತೀರ್ಪು ಬಯಸಿದ್ದೇನೆ. ಎಲ್ಲಾ ಆಯಾಮಗಳಲ್ಲೂ ವಿಚಾರಿಸಿ ತೀರ್ಪನ್ನ ಕೊಟ್ಟಿದ್ದೇನೆ. ತೀರ್ಪಲ್ಲಿ ಇಬ್ಬರು ಇರ್ತಾರೆ, ಹಾಗಾಗಿ ಒಬ್ಬರ ಪರವಾಗಿ ತೀರ್ಪು ಬರುತ್ತೆ. ತೀರ್ಪು ಬಂದ ನಂತರ ನಾನು ಪ್ರತಿಕ್ರಿಯೆ ನೀಡುವೆ, ಅದರಿಂದ ನನಗೆ ಯಾವುದೇ ಸಮಸ್ಯೆ ಆಗಲ್ಲ - ರಮೇಶ್​ ಕುಮಾರ್​

Sharath Sharma Kalagaru | news18-kannada
Updated:November 13, 2019, 10:49 AM IST
ನಾನು ಅನರ್ಹರ ಪರವೂ ಇಲ್ಲ, ಕಾಂಗ್ರೆಸ್​ ಜೆಡಿಎಸ್​ ಪರವೂ ಇಲ್ಲ: ತೀರ್ಪಿಗೂ ಮುನ್ನ ರಮೇಶ್​ ಕುಮಾರ್​
ಮಾಜಿ ಸ್ಪೀಕರ್ ರಮೇಶ್ ಕುಮಾರ್.
  • Share this:
ಕೋಲಾರ: ಇನ್ನು ಕೆಲವೇ ಕ್ಷಣಗಳಲ್ಲಿ ಅನರ್ಹ ಶಾಸಕರ ಅರ್ಜಿ ಕುರಿತಾದ ಸುಪ್ರೀಂ ಕೋರ್ಟ್​ ತೀರ್ಪು ಹೊರಬೀಳಲಿದ್ದು, ಈ ಬಗ್ಗೆ ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ ಕುಮಾರ್​ ನ್ಯೂಸ್​18 ಜತೆ ಮಾತನಾಡಿದ್ದಾರೆ. ತೀರ್ಪಿನ ಬಗ್ಗೆ ಮಾತನಾಡಿದ ಅವರು, ತಾವು ಅನರ್ಹರ ಪರವೂ ಇಲ್ಲ ಅಥವಾ ಜೆಡಿಎಸ್​ - ಕಾಂಗ್ರೆಸ್​ ಪರವೂ ಇಲ್ಲ, ದೇಶದ ಪರ ತೀರ್ಪು ಬರಲಿ ಎಂಬುದಷ್ಟೇ ತಮ್ಮ ಆಶಯ ಎಂದರು. 

"ಅನರ್ಹರು ನನ್ನ ಬಗ್ಗೆ ಏನಾದರೂ ಹೇಳಲಿ, ನಾನು ಅದಕ್ಕೆ ಮನ್ನಣೆ ಕೊಡುವುದಿಲ್ಲ. ನಾನು ಯಾರ ಮಾತನ್ನೂ ಕೇಳಿ ಶಾಸಕರನ್ನು ಅನರ್ಹಗೊಳಿಸಿಲ್ಲ. ನಾನು ಭೂಲೋಕದಲ್ಲಿ ಯಾರು ಏನೇ ಹೇಳಿದ್ರು ಕೇಳಲ್ಲ. ನನ್ನ ಹೆಂಡತಿಯೇ ನಾನು ಯಾರ ಮಾತೂ ಕೇಳಲ್ಲ ಅಂತಾರೆ. ಹಾಗಿರುವಾಗ ನಾನು ಬೇರೆಯವರ ಮಾತು ಕೇಳಿ ತೀರ್ಪು ನೀಡುತ್ತೀನಾ?" ಎಂದು ರಮೇಶ್​ ಕುಮಾರ್​ ಪ್ರಶ್ನಿಸಿದರು.

ಮುಂದುವರೆದ ಅವರು "ಸಂವಿಧಾನ ಎತ್ತಿಹಿಡಿಯುವ ತೀರ್ಪು ಬಯಸಿದ್ದೇನೆ. ಎಲ್ಲಾ ಆಯಾಮಗಳಲ್ಲೂ ವಿಚಾರಿಸಿ ತೀರ್ಪನ್ನ ಕೊಟ್ಟಿದ್ದೇನೆ. ತೀರ್ಪಲ್ಲಿ ಇಬ್ಬರು ಇರ್ತಾರೆ, ಹಾಗಾಗಿ ಒಬ್ಬರ ಪರವಾಗಿ ತೀರ್ಪು ಬರುತ್ತೆ. ತೀರ್ಪು ಬಂದ ನಂತರ ನಾನು ಪ್ರತಿಕ್ರಿಯೆ ನೀಡುವೆ, ಅದರಿಂದ ನನಗೆ ಯಾವುದೇ ಸಮಸ್ಯೆ ಆಗಲ್ಲ," ಎಂದರು.

ಇದನ್ನೂ ಓದಿ: ಸುಪ್ರೀಂಕೋರ್ಟ್​​ನಲ್ಲಿ ಇಂದು 17 ಅನರ್ಹ ಶಾಸಕರ ಭವಿಷ್ಯ ನಿರ್ಧಾರ; ನಡೆಯುತ್ತಾ ಉಪಚುನಾವಣೆ?

ಏನಿದು ಪ್ರಕರಣ?:

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಭಯ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿ ಜುಲೈ 28ರಂದು ಮಹತ್ವದ ಆದೇಶ ಹೊರಡಿಸಿದ್ದರು. ಸ್ಪೀಕರ್ ಆದೇಶ ಪ್ರಶ್ನಿಸಿ ಎಲ್ಲ ಅನರ್ಹರು ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಪ್ರಕಟಿಸಲಿದೆ. ಹೀಗಾಗಿ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ: Live: ಸುಪ್ರೀಂ ಅಂಗಳದಲ್ಲಿ ಅನರ್ಹರ ರಾಜಕೀಯ ಭವಿಷ್ಯ; ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟ
First published: November 13, 2019, 10:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading