ನಾನು ರಮೇಶ್​ ಜಾರಕಿಹೊಳಿಗೆ ಸಮನಾದ ನಾಯಕನಲ್ಲ, ಬೇಕಾದ್ರೆ ಎರಡು ಏಟು ಹೊಡೆದು ಬಿಡಲಿ; ಡಿಕೆ ಶಿವಕುಮಾರ್​

"ನಾನು ರಮೇಶ್ ಜಾರಕಿಹೊಳಿಗೆ ಸಮನಾದ ನಾಯಕನಲ್ಲ. ರಮೇಶ್ ನನಗೆ ಎರಡು ಏಟು ಹೊಡೆದು ಬಿಡಲಿ, ಆದರೆ ನನಗೇನೂ ಬೇಜಾರಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರು, ಕುಟುಂಬದಲ್ಲಿ ಅಣ್ಣ ತಮ್ಮಂದಿರ ತಪ್ಪು ಸಹಜ. ರಮೇಶ್ ಜಾರಕಿಹೊಳಿ ಜೊತೆ 80 ಶಾಸಕರಿದ್ದೇವೆ," ಎಂದು ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

news18
Updated:April 25, 2019, 4:04 PM IST
ನಾನು ರಮೇಶ್​ ಜಾರಕಿಹೊಳಿಗೆ ಸಮನಾದ ನಾಯಕನಲ್ಲ, ಬೇಕಾದ್ರೆ ಎರಡು ಏಟು ಹೊಡೆದು ಬಿಡಲಿ; ಡಿಕೆ ಶಿವಕುಮಾರ್​
ರಮೇಶ್​ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್​ ಸಾಂದರ್ಭಿಕ ಚಿತ್ರ
news18
Updated: April 25, 2019, 4:04 PM IST
ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್​ ಮತ್ತು ರಮೇಶ್​ ಜಾರಕಿಹೊಳಿ ನಡುವಿನ ಗುದ್ದಾಟ ಕಳೆದ ಕೆಲ ತಿಂಗಳುಗಳಿಂದ ಮುಂದುವರೆಯುತ್ತಲೇ ಇದೆ. ಕಳೆದ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದಿದ್ದ ಬಡಿದಾಟವನ್ನು ರಮೇಶ್​ ಜಾರಕಿಹೊಳಿ ಮತ್ತೆ ಮುನ್ನೆಲೆಗೆ ತಂದಿದ್ಧಾರೆ. ಸಚಿವ ಡಿ.ಕೆ. ಶಿವಕುಮಾರ್​ ನನಗೆ ಲೆಕ್ಕಕ್ಕೇ ಇಲ್ಲ, ಅವರು ನಾಯಕ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ, ಆದರೆ ನನ್ನ ನಾಯಕ ರಾಹುಲ್​ ಗಾಂಧಿ, ಇವರ್ಯಾರೂ ಅಲ್ಲ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್​ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. "ನಾನು ರಮೇಶ್ ಜಾರಕಿಹೊಳಿಗೆ ಸಮನಾದ ನಾಯಕನಲ್ಲ. ರಮೇಶ್ ನನಗೆ ಎರಡು ಏಟು ಹೊಡೆದು ಬಿಡಲಿ, ಆದರೆ ನನಗೇನೂ ಬೇಜಾರಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರು, ಕುಟುಂಬದಲ್ಲಿ ಅಣ್ಣ ತಮ್ಮಂದಿರ ತಪ್ಪು ಸಹಜ. ರಮೇಶ್ ಜಾರಕಿಹೊಳಿ ಜೊತೆ 80 ಶಾಸಕರಿದ್ದೇವೆ," ಎಂದು ಹೇಳುವ ಮೂಲಕ ಬಿಕ್ಕಟ್ಟು ಶಮನಕ್ಕೆ ಮುಂದಾಗಿರುವಂತೆ ಬಿಂಬಿಸಿಕೊಂಡಿದ್ದಾರೆ.

ಈ ರೀತಿಯ ಜಾಣ್ಮೆಯ ಹೇಳಿಕೆಗಳು ಡಿ.ಕೆ. ಶಿವಕುಮಾರ್​ ಹಲವು ಬಾರಿ ನೀಡಿದ್ದಾರೆ. ಈ ಹಿಂದೆ ಬಳ್ಳಾರಿ ಉಪಚುನಾವಣೆ ವೇಳೆ, ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದ ಶ್ರೀರಾಮುಲು ಅವರನ್ನು ಅಣ್ಣ ಎಂದು ಕರೆಯುವ ಮೂಲಕ ವ್ಯಂಗ್ಯದಿಂದಲೇ ವಿರೋಧ ಪಕ್ಷವನ್ನು ಕಟ್ಟಿ ಹಾಕಿದ್ದನ್ನು ಮರೆಯುವಂತಿಲ್ಲ.



ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಸಭೆಯ ನಂತರ ಡಿ.ಕೆ. ಶಿವಕುಮಾರ್​ ಈ ಹೇಳಿಕೆ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ರಮೇಶ್​ ಜಾರಕಿಹೊಳಿ ಬಂಡಾಯ ಮತ್ತು ಅವರ ಜತೆಗಿರುವ ಶಾಸಕರ ಸಂಖ್ಯೆಯ ಕುರಿತು ಭಾರೀ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ರಾಜೀನಾಮೆ ಸಮಸ್ಯೆ ಬಗೆಹರಿಸಲು ಇನ್ನೂ ಸಮಯವಿದೆ; ಪ್ರಿಯಾಂಕ್​ ಖರ್ಗೆ
Loading...

ಡಿ.ಕೆ. ಶಿವಕುಮಾರ್​ ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬ ದೂರು ರಮೇಶ್​ ಜಾರಕಿಹೊಳಿ ಅವರಿಂದ ಹಲವು ಬಾರಿ ಕೇಳಿ ಬಂದಿತ್ತು. ನಂತರ ಸಚಿವ ಸಂಪುಟ ಸಭೆಗಳಿಗೆ ರಮೇಶ್​ ಹಾಜರಾಗಿರಲಿಲ್ಲ. ಸಚಿವ ಸಂಪುಟ ಪುನಾರಚನೆಯಲ್ಲಿ ರಮೇಶ್​ ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದರು. ಡಿ.ಕೆ. ಶಿವಕುಮಾರ್​ ಮತ್ತು ರಮೇಶ್​ ನಡುವಷ್ಟೇ ಅಲ್ಲದೇ ಈಗ ಅಣ್ಣ ತಮ್ಮಂದಿರಾದ ಸತೀಶ್​ ಜಾರಕಿಹೊಳಿ ಮತ್ತು ರಮೇಶ್​ ಕೂಡ ಬಹಿರಂಗವಾಗಿ ಕಿತ್ತಾಡುತ್ತಿದ್ದಾರೆ. ಈ ಹಿಂದೆ ಜಾರಕಿಹೊಳಿ ಕುಟುಂಬದ ಯಾವೊಬ್ಬ ನಾಯಕರೂ ಬಹಿರಂಗವಾಗಿ ಒಬ್ಬರ ಮೇಲೊಬ್ಬರು ಕೆಸರೆರಚಿಕೊಂಡ ಉದಾಹರಣೆಗಳಿಲ್ಲ.

First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626