ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ; ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿರುವ ಬಗ್ಗೆಯೂ ಸ್ಪಷ್ಟನೆ ನೀಡಿದ್ದು, ‘ಭಾರತ್ ಬಚಾವ್ ಆಂದೋಲ’ನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು.

news18-kannada
Updated:December 12, 2019, 2:17 PM IST
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ; ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
  • Share this:
ಬೆಂಗಳೂರು (ಡಿ.12): ಕೆ.ಪಿ.ಸಿ.ಸಿ. ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್​ ಟ್ರಬಲ್​ ಶೂಟರ್ ಡಿ.ಕೆ. ಶಿವಕುಮಾರ್​​ ಲಾಭಿ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರವಾಗಿ ಸ್ವತಃ ಡಿಕೆಶಿ ಪ್ರತಿಕ್ರಿಯಿಸಿದ್ದು, ನನಗೆ ಈ ಹುದ್ದೆ ಪಡೆಯಲು ಲಾಬಿ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಪಕ್ಷದಲ್ಲಿ ನಾನು ಗುಂಪುಗಾರಿಕೆ ಮಾಡುವವನಲ್ಲ. ಜಾತಿ, ಧರ್ಮದ ಮೇಲೆ ಗುಂಪುಲ ಕಟ್ಟಿಲ್ಲ. ಹಾಗೆ ಮಾಡುವುದಾದರೆ ಎಸ್.ಎಂ. ಕೃಷ್ಣ ಅವರ ಅವಧಿ ಮುಗಿದಾಗಲೇ ಗಂಪು ಕಟ್ಟಬಹುದಿತ್ತು. ಆದರೆ, ಆ ಕೆಲಸ ನಾನು ಮಾಡಿದವನಲ್ಲ. ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ. ಅದಕ್ಕಾಗಿ ಲಾಬಿ ಮಾಡುವ ಅವಶ್ಯಕತೆಯೂ,” ನನಗಿಲ್ಲ ಎಂದು ಸಿಟ್ಟಾದರು.

ಕಾರ್ಯಕರ್ತರು ವಿಶ್ವಾಸ ಕಳೆದುಕೊಳ್ಳಬಾರದು ಎಂದ ಶಿವಕುಮಾರ್​, “ಯಾವಾಗಲೂ ಪಕ್ಷದ ಕಾರ್ಯಕರ್ತರ ವಿಶ್ವಾಸ ಮುಖ್ಯ. ಅದನ್ನು ಎಂದಿಗೂ ಕಳೆದುಕೊಳ್ಳಬಾರದು. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿ.ಎಲ್.ಪಿ. ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಕಾರಣ, ದಿನೇಶ್​ ಗುಂಡೂರಾವ್​ ಹಾಗೂ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಹೈಕಮಾಂಡ್ ಇನ್ನೂ ಅಂಗೀಕರಿಸಿಲ್ಲ. ಉಪಚುನಾವಣೆಯಲ್ಲಿ ಸೋಲಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಗುಂಡೂರಾವ್ ತಮ್ಮ ನೋವು ವ್ಯಕ್ತಪಡಿಸಿದ್ದಾರೆ,” ಎಂದರು.

ಇದನ್ನೂ ಓದಿ: ಜನರ ನಂಬಿಕೆ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ; ಸುಪ್ರೀಂ ತೀರ್ಪು ಸ್ವಾಗತಿಸಿದ ಡಿಕೆ ಶಿವಕುಮಾರ್​​

ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್​ಗೆ ಉಂಟಾದ ಸೋಲಿನ ಬಗ್ಗೆಯೂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. “ಉಪಚುನಾವಣೆಯಲ್ಲಿ ಸೋಲು ಗೆಲುವುಗಳಿರುತ್ತವೆ. ನಾನು ಸಾಕಷ್ಟು ಉಪಚುನಾವಣೆ, ಫಲಿತಾಂಶಗಳನ್ನು ಕೂಡ ನೋಡಿದ್ದೇನೆ. ಜನ ಸೇರಿದ ತಕ್ಷಣ ಮತ ಹಾಕುವುದಿಲ್ಲ. ಮತ ರಾಜಕೀಯ, ಚುನಾವಣಾ ರಾಜಕೀಯವೇ ಎರಡೂ ಬೇರೆ ಬೇರೆ,” ಎಂದರು ಅವರು.

ಇನ್ನು, ಡಿಕೆಶಿ ದೆಹಲಿಗೆ ತೆರಳುತ್ತಿರುವ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ‘ಭಾರತ್ ಬಚಾವ್ ಆಂದೋಲ’ನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು.
First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ