ಜನ ಆಶೀರ್ವದಿಸಿದರೆ ಮತ್ತೆ ಸಿಎಂ ಆಗಬಾರದಾ? ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಹೇಳಿಕೆಗೆ ಬದ್ಧವಾಗಿದ್ದೇನೆ; ಸಿದ್ದರಾಮಯ್ಯ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ನಮ್ಮವರು ಹೇಳಿದಾರೆ. ಜನ ಆಶೀರ್ವಾದ ಮಾಡಿದ್ರೆ ಸಿಎಂ ಆಗಬಾರದಾ? ಆಗಬಾರದು ಎಂದು ಇದೆಯಾ? ಎಂದು ಪ್ರಶ್ನೆ ಮಾಡಿ, 2023ರಲ್ಲಿ ಆಗಬಹುದು ಅಂದ್ರೆ ತಪ್ಪೇನಿದೆ. ಕೆಲವರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅಭಿಮಾನದಿಂದ ಹೇಳಿದರೆ ನಾನೇನು ಮಾಡೋಕಾಗುತ್ತೆ. ಅವರ ಬಾಯಿಗೆ ಬೀಗ ಹಾಕೋಕಾಗುತ್ತಾ? ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • News18
  • Last Updated :
  • Share this:
ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ವಿಚಾರ ವ್ಯಾಪಕವಾಗಿದ್ದು, ದೋಸ್ತಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್​ ಕೆಲ ಶಾಸಕರು ದಿನನಿತ್ಯ ಹೇಳಿಕೆ ನೀಡುತ್ತಿದ್ದರೆ ಇದಕ್ಕೆ ಜೆಡಿಎಸ್​ ಕೆಲ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ.

ಮುಖ್ಯಮಂತ್ರಿ ವಿಚಾರವಾಗಿ ಇಂದು ಮತ್ತೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಜನರ ಆಶೀರ್ವಾದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​  ಬಹುಮತ ಪಡೆದರೆ ಆಗ ನಾನೇ ಮುಖ್ಯಮಂತ್ರಿ ಆಗಬಹುದು. ಈಗ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ನಾನು ಮುಂದಿನ  ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, "ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಇದ್ದಾರೆ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತ," ಎಂದು ಹೇಳಿದ್ದಾರೆ. ಮುಂದುವರೆದು, "ಸಭೆ ಸಮಾರಂಭಗಳಲ್ಲಿ ಜನರು ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಕೂಗುತ್ತಾರೆ, ಆಗ ಮತ್ತೆ ತಾವೆಲ್ಲ ನಮ್ಮ‌ ಪಕ್ಷಕ್ಕೆ ಬಹುಮತ ನೀಡಿದರೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರಿಗೆ ಹೇಳಿದ್ದೇನೆ. ಅಭಿಮಾನದಿಂದ ನೀವು ಮುಖ್ಯಮಂತ್ರಿಯಾಗಿ ಎಂದು ಹೇಳುವವರ ಬಾಯಿ ಮುಚ್ಚಿಸಲಾಗುತ್ತದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ಡಿಕೆಶಿ ತಂಗಿದ್ದ ರೆಸಾರ್ಟ್​ ಮೇಲೆ ಐಟಿ ದಾಳಿ; ಬಿಜೆಪಿ ನಾಯಕರ ರೂಮ್​ಗಳ ಮೇಲೆ ಯಾಕಿಲ್ಲ ದಾಳಿ ಎಂದ ಸಿದ್ದರಾಮಯ್ಯ

 

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ನಮ್ಮವರು ಹೇಳಿದಾರೆ. ಜನ ಆಶೀರ್ವಾದ ಮಾಡಿದ್ರೆ ಸಿಎಂ ಆಗಬಾರದಾ? ಆಗಬಾರದು ಎಂದು ಇದೆಯಾ? ಎಂದು ಪ್ರಶ್ನೆ ಮಾಡಿ, 2023ರಲ್ಲಿ ಆಗಬಹುದು ಅಂದ್ರೆ ತಪ್ಪೇನಿದೆ. ಕೆಲವರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅಭಿಮಾನದಿಂದ ಹೇಳಿದರೆ ನಾನೇನು ಮಾಡೋಕಾಗುತ್ತೆ. ಅವರ ಬಾಯಿಗೆ ಬೀಗ ಹಾಕೋಕಾಗುತ್ತಾ? ನಾನು ಮುಂದಿನ ಚುನಾವಣೆಗೆ ನಿಲ್ಲಲ್ಲ, ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಸಭೆಗಳಲ್ಲಿ ಜನ ಕೂಗ್ತಾರೆ, ನೀವು ಮುಂದಿನ ಸಿಎಮ್ ಆಗ್ಬೇಕು ಅಂತಾರೆ.
ಆಯ್ತಪ್ಪಾ ನೀವು ಆಶಿರ್ವಾದ ಮಾಡಿದ್ರೆ ಆಗ್ತೀನಿ ಅಂತಾ ಹೇಳಿರ್ತೀನಿ.
ಏನು ತಪ್ಪು? ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಬಿಜೆಪಿಗೆ 104 ಸೀಟು ಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ, ಆ ನಂತರ ಮೂರೇ ದಿನಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟಾದರೂ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹಲವು ಬಾರಿ ಹೇಳಿದ್ದಾರೆ. ಈಗೀಗ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತೇನೆ ಎಂದ ತಕ್ಷಣ ಜನ ನಗಲು ಆರಂಭ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
First published: