ನಾನೊಬ್ಬ ರಾಜಕಾರಣಿ ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ; ಲಕ್ಷ್ಮಣ ಸವದಿ

ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ವಿಧಾನಪರಿಷತ್ ಸ್ಥಾನಕ್ಕೆ ಉಪಚುನಾವಣೆಯ ದಿನ ನಿಗದಿಯಾಗಿದೆ. ಫೆ. 17ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಹೆಚ್ಚಿನ ಶಾಸಕ ಬಲ ಇರುವ ಬಿಜೆಪಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಆದರೆ, ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಪಕ್ಷದೊಳಗೆ ಇನ್ನೂ ನಿವಾರಣೆಯಾಗಿಲ್ಲ.

ಆರ್​. ಶಂಕರ್​-ಲಕ್ಷ್ಮಣ ಸವದಿ.

ಆರ್​. ಶಂಕರ್​-ಲಕ್ಷ್ಮಣ ಸವದಿ.

  • Share this:
ಬೆಂಗಳೂರು (ಜನವರಿ 28); ವಿಧಾನ ಪರಿಷತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಗೊಂದಲ ಮನೆ ಮಾಡಿದೆ. ಇದರ ಬೆನ್ನಿಗೆ ಇಂದು ವಿಕಾಸಸೌಧದಲ್ಲಿ ಹೇಳಿಕೆ ನೀಡಿರುವ ಡಿಸಿಎಂ ಲಕ್ಷ್ಮಣ್ ಸವದಿ, "ನಾನೊಬ್ಬ ರಾಜಕಾರಣಿ, ಸನ್ಯಾಸಿ ಅಲ್ಲ. ನನಗೂ ಸಹಜವಾಗಿ ರಾಜಕೀಯ ಆಪೇಕ್ಷೆಗಳಿವೆ. ಆದರೆ, ಇದರ ಬಗ್ಗೆ ನಿರ್ಧರಿಸಲು ಮುಖ್ಯಮಂತ್ರಿ ಇದ್ದಾರೆ" ಎಂದು ತಿಳಿಸಿದ್ದಾರೆ.

ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ವಿಧಾನಪರಿಷತ್ ಸ್ಥಾನಕ್ಕೆ ಉಪಚುನಾವಣೆಯ ದಿನ ನಿಗದಿಯಾಗಿದೆ. ಫೆ. 17ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಹೆಚ್ಚಿನ ಶಾಸಕ ಬಲ ಇರುವ ಬಿಜೆಪಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಆದರೆ, ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಪಕ್ಷದೊಳಗೆ ಇನ್ನೂ ನಿವಾರಣೆಯಾಗಿಲ್ಲ.

ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಗೆ ಟಿಕೆಟ್ ಕೊಡುವುದೋ ಅಥವಾ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ ಆರ್. ಶಂಕರ್ ಅವರಿಗೆ ಟಿಕೆಟ್ ಕೊಡುವುದೋ ಎಂಬ ಧರ್ಮಸಂಕಟದಲ್ಲಿ ಯಡಿಯೂರಪ್ಪ ಸಿಲುಕಿಕೊಂಡಿದ್ದಾರೆ.

ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಯ ಬೆನ್ನಿಗೆ ನಿಂತಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸು ಆರ್. ಶಂಕರ್ ಮೇಲಿದೆ. ರಾಣೆಬೆನ್ನೂರು ಟಿಕೆಟ್ ತ್ಯಾಗ ಮಾಡಿದರೆ ಸಚಿವ ಸ್ಥಾನ ಮತ್ತು ಪರಿಷತ್ ಸ್ಥಾನ ಕೊಡಿಸುವುದಾಗಿ ಆರ್. ಶಂಕರ್​ಗೆ ವಾಗ್ದಾನ ನೀಡಿದ್ದ ಯಡಿಯೂರಪ್ಪಗೆ ಈಗ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ಧಾರೆ.

ಈಗಾಗಲೇ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಅವರನ್ನು ಯಾವುದೇ ಕಾರಣಕ್ಕೂ ಕೆಳಗಿಳಿಸಬಾರದು, ಅವಮಾನ ಮಾಡಬಾರದು ಎಂದು ಹೈಕಮಾಂಡ್​ನಿಂದ ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶವೂ ರವಾನೆಯಾಗಿದೆ. ಹೀಗಾಗಿ, ಯಡಿಯೂರಪ್ಪ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ಧಾರೆ.

ಇನ್ನು ಫೆ. 17ರಂದು ನಡೆಯುವ ವಿಧಾನಪರಿಷತ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆ. 6 ಕೊನೆಯ ದಿನವಾಗಿದೆ. ಅಷ್ಟರೊಳಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಅಂದರೆ ಇನ್ನು 10 ದಿನದೊಳಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ. ಆದರೆ, ಯಡಿಯೂರಪ್ಪ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದರ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ : ಪಂಚಮಸಾಲಿ ಲಿಂಗಾಯಿತರ ಬೆನ್ನಿಗೆ ಶುರುವಾಯ್ತು ಕುರುಬರ ಲಾಬಿ; ನಮಗೂ ಒಂದು ಸಚಿವ ಸ್ಥಾನ ಇರಲಿ!

 
First published: