ಚಿಕ್ಕಮಗಳೂರು (ಡಿ.05): ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗುತ್ತಿದ್ದು, ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗ್ತಿದೆ. ರೌಡಿಶೀಟರ್ಗಳು ಬಿಜೆಪಿ (BJP) ಸೇರ್ಪಡೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಕಿಡಿಕಾರಿತ್ತು. ಇದೀಗ ಚಿಕ್ಕಮಗಳೂರಿನಲ್ಲಿ ಮಾತಾಡಿದ ಬಿಜೆಪಿ ನಾಯಕ ಸಿ.ಟಿ ರವಿ (BJP Leader C T Ravi) ತಿರುಗೇಟು ನೀಡಿದ್ದಾರೆ. ಎಲ್ಲಾ ರೌಡಿಶೀಟರ್ಗಳೂ ರೌಡಿಗಳಲ್ಲ ಎಂದು ಹೇಳಿದ್ದೆ. ರಾಜಕೀಯ ಕಾರಣಕ್ಕೆ ಸಹಸ್ರಾರು ಜನರನ್ನು ರೌಡಿಶೀಟರ್ಗೆ ಸೇರಿಸಿದ್ದರ ಕುರಿತು ಮಾತನಾಡಿದ್ದೆ. ನಿಜವಾದ ರೌಡಿಗಳಿಗೆ ನಾನು ಕ್ಲೀನ್ ಚಿಟ್ (Clean Chit) ಕೊಟ್ಟಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ನಾನು ಯಾವುದೇ ಗೂಂಡಾಗಿರಿ ಮಾಡಿಲ್ಲ
ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ರೌಡಿಶೀಟರ್ ಹಾಕಲಾಗಿತ್ತು. ನಾನು ಯಾವುದೇ ಗೂಂಡಾಗಿರಿ ಮಾಡಿರಲಿಲ್ಲ. ನನ್ನ ಮೇಲೆ ಇರುವುದೆಲ್ಲಾ ಸಾರ್ವಜನಿಕ ಹೋರಾಟದ ಕೇಸ್ಗಳು. ನಾನು ಕೊತ್ವಾಲ್ ರಾಮಚಂದ್ರ, ಜಯರಾಜ್ನ ಶಿಷ್ಯನಲ್ಲ. ನಾನು ಅವರ ಶಿಷ್ಯ ಎಂದು ಹೇಳಿ ಹೆಮ್ಮೆಪಡುವ ರಾಜಕೀಯ ನೇತಾರನೂ ನಾನಲ್ಲ ಎಂದು ಸಿ.ಟಿ.ರವಿ ಅವರು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಎಲ್ಲರಿಗೂ ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ
ಎಲ್ಲಾ ರೌಡಿಶೀಟರ್ಗಳು ರೌಡಿಗಳಲ್ಲ ಅಂತ ಹೇಳಿದ್ದೆ. ರೌಡಿಶೀಟರ್ನಲ್ಲಿರೋ ಎಲ್ಲರಿಗೂ ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ. ನಿಮ್ಮ ಪಕ್ಷದ ಆರ್.ವಿ ದೇವರಾಜ್, ಹರಿಪ್ರಸಾದ್ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಲಿ ಎಂದು ಸಿ.ಟಿ ರವಿ ಕಿಡಿಕಾರಿದರು.
ಇದು ಕಾಂಗ್ರೆಸ್ನ ಮನಸ್ಥಿತಿಯನ್ನ ತೋರಿಸುತ್ತೆ
ಈ ಹಿಂದೆ ನನ್ನನ್ನು ಕುಡುಕ ಅಂತಾ ಹೇಳಿದ್ರು. ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಇದ್ಯಾ ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವನು ನಾನು. ಇದು ಕಾಂಗ್ರೆಸ್ನ ಮನಸ್ಥಿತಿಯನ್ನ ತೋರಿಸುತ್ತೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆ ತನಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಸಿಟಿ ರವಿ ಹೇಳಿದ್ದಾರೆ.
ನನ್ನ ಹೆಸರು ರೌಡಿ ಲಿಸ್ಟಿನಲ್ಲಿತ್ತು
ರಾಜಕೀಯ ಕಾರಣಕ್ಕಾಗಿ ನನ್ನ ಹೆಸರು ಸಹ ರೌಡಿ ಪಟ್ಟಿಯಲ್ಲಿತ್ತು. 90ರ ದಶಕದಲ್ಲಿ ನನ್ನನ್ನೂ ಪೊಲೀಸರು ಸಮಾಜಘಾತುಕರ ಪಟ್ಟಿಗೆ ಸೇರಿಸಿದ್ದರು. ಹಾಗಂತ ರೌಡಿ ಲಿಸ್ಟ್ನಲ್ಲಿದ್ದವರೆಲ್ಲಾ ರೌಡಿಗಳು ಎಂದು ಹೇಳಲಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ನನ್ನ ಹೆಸರು ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು. ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: Siddaramaiah-BJP: ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆಯೋದ್ಯಾಕೆ? ಬಿಜೆಪಿ ನೀಡಿದೆ 8 ಕಾರಣ!
ದಿವಂಗತ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಚೇಂಬರ್ನಲ್ಲಿ ನಟೋರಿಯಸ್ ರೌಡಿಗಳ ಜತೆ ಸಭೆ ನಡೆಸಿದ್ದರು. ಅಂತಹ ಕೆಲಸ ನಾವು ಮಾಡುವುದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ಆ ದಿನಗಳು ಅದನ್ನು ಹೇಳಿವೆ. ಸಂಜಯ್ ಬ್ರಿಗೇಡ್ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್ಗೆ ಬರುವವರ ಮೇಲೆ ಹತ್ತಾರು ಪ್ರಕರಣಗಳು ಇರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಲಪಾಡ್ಗೆ ಇದೇ ಕಾರಣಕ್ಕೆ ನೀಡಿದ್ದಾರೆ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದ ಅವರು, ನಮ್ಮದು ಮಾಸ್ ಪಾರ್ಟಿ. ನಮ್ಮ ಪಕ್ಷದ ನೀತಿ-ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಮಾತ್ರ ಬದಲಾಗಿದೆ. ಪ್ರವಾಹದಲ್ಲಿ ಕಸಕಡ್ಡಿಯೂ ಬರುತ್ತದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ