ನಾನು ಕ್ರಿಮಿನಲ್​ ಅಲ್ಲ; ರಾಜಕೀಯ ಚದುರಂಗವಿದ್ದಂತೆ, ನನ್ನ ಆಟ ತೋರಿಸುತ್ತೇನೆ; ಸಚಿವ ಡಿಕೆಶಿ

news18
Updated:September 9, 2018, 10:04 AM IST
ನಾನು ಕ್ರಿಮಿನಲ್​ ಅಲ್ಲ; ರಾಜಕೀಯ ಚದುರಂಗವಿದ್ದಂತೆ, ನನ್ನ ಆಟ ತೋರಿಸುತ್ತೇನೆ; ಸಚಿವ ಡಿಕೆಶಿ
ಡಿಕೆ ಶಿವಕುಮಾರ್
news18
Updated: September 9, 2018, 10:04 AM IST
ಕೃಷ್ಣ ಜಿ.ವಿ, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 9):  'ನನಗೆ ಇದುವರೆಗೂ ಯಾವುದೇ ನೋಟಿಸ್​ ಬಂದಿಲ್ಲ. ಒಂದುವೇಳೆ ಬಂದರೂ ಎದುರಿಸಲು ಸಿದ್ಧನಿದ್ದೇನೆ. ನಾನೇನೂ ಕ್ರಿಮಿನಲ್​ ಅಲ್ಲ, ಯಾವ ತಪ್ಪನ್ನೂ ಮಾಡಿಲ್ಲ' ಎಂದು ಸಚಿವ ಡಿಕೆ ಶಿವಕುಮಾರ್​ ಇಂದು ಸ್ಪಷ್ಟಪಡಿಸಿದ್ದಾರೆ.

ನನಗೆ ನೋಟಿಸ್​ ನೀಡಿದರೆ ತನಿಖಾ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಆದಾಯ ತೆರಿಗೆ ಇಲಾಖೆಯವರು ನನ್ನನ್ನು ಕರೆದಿದ್ದರು. ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಅಕ್ರಮವಾಗಿ ಆಸ್ತಿಯನ್ನೂ ಮಾಡಿಲ್ಲ ಎಂದು ಸದಾಶಿವನಗರದಲ್ಲಿ ಡಿಕೆಶಿ  ಹೇಳಿದ್ದಾರೆ.

ದೆಹಲಿಯಲ್ಲಿ ನನಗೆ ಎರಡು ಸ್ವಂತ ಮನೆಗಳಿವೆ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ. ನನಗೆ ಯಾವ ಆತಂಕವೂ ಇಲ್ಲ. ನಿಮಗೆಲ್ಲ ಗೊತ್ತಿಲ್ಲದ ಏನೇನೋ ವಿಚಾರಗಳು ಇದೆ. ಈಗ ನಾನು ಅದರ ಬಗ್ಗೆಯೆಲ್ಲ ಏನೂ ಮಾತಾಡುವುದಿಲ್ಲ. ರಾಜಕೀಯವೆಂಬುದು ಫುಟ್​ಬಾಲ್​ ಅಲ್ಲ, ಅದು ಚೆಸ್​ ಆಟ. ನನ್ನ ಕಾಯಿಯನ್ನು ನಾನು ನಡೆಸುತ್ತೇನೆ. ಬಹಳ ಜಾಣ್ಮೆಯಿಂದ  ಆಡಿದರೆ ಮಾತ್ರ ಚದುರಂಗದಲ್ಲಿ ಗೆಲ್ಲಲು ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಿಲೆಯೊಂದನ್ನು ವಿಗ್ರಹವನ್ನಾಗಿ ಮಾಡುವಾಗ ಎಲ್ಲರೂ ಅದನ್ನು ಭಗ್ನ ಮಾಡೋಕೆ ಪ್ರಯತ್ನಿಸುತ್ತಾರೆ. ಹಾಗೇ, ನಾನು ರಾಜಕೀಯದಲ್ಲಿ ಮುಂದುವರಿಯುತ್ತಿರುವುದನ್ನು ನೋಡಲಾಗದೆ ಇಂತಹ ಷಡ್ಯಂತ್ರ ರೂಪಿಸಲಾಗುತ್ತಿದೆ. ಹಣ್ಣು ಕೆಂಪಗಿದ್ದರೆ  ಮಾತ್ರ ಎಲ್ಲರೂ ಅದನ್ನು ನೋಡುತ್ತಾರೆ. ಹಾಗೇ, ನನ್ನ ಮೇಲೆ  ಅಟ್ಯಾಕ್​ ಮಾಡಲಾಗುತ್ತಿದೆ ಎಂದಿದ್ದಾರೆ.

ದೇವರಿದ್ದಾನೆ, ನಾನು ಹೆದರಲ್ಲ:

ನನಗೆ ಹಾಗೂ ಯಡಿಯೂರಪ್ಪರಿಗೆ ಸ್ನೇಹ ಇರಬಹುದು. ಆದರೆ, ಅವರ ಪಕ್ಷದ ಸಿದ್ಧಾಂತಗಳೇ ಬೇರೆ, ನಮ್ಮ ಪಕ್ಷದ ತತ್ವಗಳೇ  ಬೇರೆ. ನಮ್ಮನ್ನೆಲ್ಲ ನೋಡಲು ಮೇಲೆ ದೇವರಿದ್ದಾನೆ. ನಾನು ಹೆದರುವ ಪ್ರಮೇಯವೇ ಇಲ್ಲ. ಕಳ್ಳನ ಹಾಗೆ ಓಡಿಹೋಗೋಕೆ ನಾನು ತಪ್ಪು ಮಾಡಿಲ್ಲ. ತಪ್ಪು ಮಾಡಿಲ್ಲ ಅಂದಮೇಲೆ ಭಯ ಯಾಕೆ? ನಾನು ಬೆಂಗಳೂರಿಗೆ ಬಂದಿದ್ದೇ ರಾಜಕೀಯ ಮಾಡೋಕೆ.  ಬಿಜೆಪಿಯವರು ಬೇರೆ ಮಾರ್ಗದಲ್ಲಿ ನಮ್ಮ ಪಕ್ಷದವರನ್ನು ಸೆಳೆಯುಲು ಹುನ್ನಾರ ನಡೆಸಿದ್ದಾರೆ. ನಮ್ಮ ಶಾಸಕರಿಗೂ ಬಿಜೆಪಿ ಹಣದ ಆಮಿಷ ಒಡ್ಡಿದೆ. ಇದೆಲ್ಲವನ್ನೂ ನಾನು ಹೈಕಮಾಂಡ್​ ಗಮನಕ್ಕೆ ತರಲಿದ್ದೇನೆ ಎಂದು ಹೇಳಿದರು.
Loading...

ಇಂದು ದೆಹಲಿಗೆ ಪ್ರಯಾಣ:

ನಿನ್ನೆ ರಾತ್ರಿ ದೆಹಲಿಗೆ ತೆರಳಬೇಕಾಗಿದ್ದ ಸಚಿವ ಡಿಕೆ ಶಿವಕುಮಾರ್​  ತಮ್ಮ ವಿರುದ್ಧ ಎಫ್​ಐಆರ್​ ದಾಖಲಾಗುವ ಆತಂಕದಲ್ಲಿ ಕೊನೆಕ್ಷಣದಲ್ಲಿ ದೆಹಲಿ ಪ್ರಯಾಣ ರದ್ದುಗೊಳಿಸಿದ್ದರು. ಇಂದು ಸಂಜೆ 5.30ರ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಡಿಕೆಶಿ ಜಾರಿ ನಿರ್ದೇಶನಾಲಯದ ಕುಣಿಕೆಯಿಂದ ಪಾರಾಗಲು ಮಾರ್ಗ ಹುಡುಕುತ್ತಿದ್ದಾರೆ. ದೆಹಲಿಯಲ್ಲಿ ಹಿರಿಯ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಗ್ವಿ ಅವರನ್ನು ಭೇಟಿಯಾಗಿ ನಿರೀಕ್ಷಣಾ ಜಾಮೀನು ಪಡೆಯುವ ವಿಚಾರವಾಗಿ ಚರ್ಚೆ ನಡೆಸುವ ಸಾಧ್ಯತೆಯಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...