ನೆಲಮಂಗಲ (ಜ. 20): ನೆಲಮಂಗಲದ ಶಾಂತಿನಗರದಲ್ಲಿ ನಡೆದಿದ್ದ ಹಲ್ಲೆಗೆ ಮರು ಹಲ್ಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿಯೊಬ್ಬರನ್ನು ಕೈಬಿಡುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಡಿವೈಎಸ್ಪಿ ಜಗದೀಶ್ಗೆ ಒತ್ತಾಯ ಮಾಡಿದ್ದಾರೆ.
18ನೇ ತಾರೀಖಿನಂದು ಹಲ್ಲೆ ಪ್ರತಿಹಲ್ಲೆ ಕೇಸ್ ಆರೋಪಿ 65 ವರ್ಷದ ಲಲಿತಮ್ಮ ಅವರನ್ನು ಕೈಬಿಡುವ ವಿಚಾರವಾಗಿ ನೆಲಮಂಗಲ ಡಿವೈಎಸ್ಪಿ ಕಚೇರಿಗೆ ಮಾಜಿ ಶಾಸಕ ಸುರೇಶ್ಗೌಡ ಬಂದಿದ್ದಾರೆ. ಡಿವೈಎಸ್ಪಿ ಜಗದೀಶ್ಗೆ ಏರು ಧ್ವನಿಯಲ್ಲೇ ಒತ್ತಡ ಏರಿದ್ದಾರೆ. ಏನ್ ನಡಿತಾ ಇದೆ ಇಲ್ಲಿ ನನಗೆ ಗೊತ್ತು, ಇದು ಸರಿಯಲ್ಲ, ನಾನು ಬಂದಿದ್ದಿನಿ ಅಂದ್ರೆ ಕಾರಣ ಇರುತ್ತೆ, ಕೀಪ್ ಇಟ್ ಇನ್ ಯುವರ್ ಮೈಂಡ್, ನ್ಯಾಯ ಕೇಳೋಕೆ ಬಂದಿದ್ದೇವೆ. ನಿಮಗೆ ಅಧಿಕಾರ ಇದೆ, ನಮ್ಮ ಎಂಎಲ್ಎ ಇಲ್ಲ ಅಂತ ಸವಾರಿ ಮಾಡ್ಬೇಡಿ ಕೇಸ್ ಮಾಡ್ಬೇಡಿ ಅಂತ ಹೇಳಿದ್ದಿನಿ, ಮಾಡುದ್ರೆ ಧರಣಿ ಮಾಡ್ತಿವಿ. ಅಷ್ಟೆ ಅಲ್ಲ ಗೃಹ ಸಚಿವರಿಗೆ ತನಿಖೆಗೆ ಒಪ್ಪಿಸಿದ್ರೆ ಇವೆಲ್ಲ ಸಮಸ್ಯೆನೇ ಇರಲ್ಲ ಎಂದು ಆವಾಜ್ ಹಾಕಿದರು. ಮಾತುಕತೆಯನ್ನ ರೆಕಾರ್ಡ್ ಮಾಡುತ್ತಿದ್ದ ಇಲಾಖೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡ್ಬೇಕು ಅಂದ್ಕೊಂಡಿದ್ಯ ಎಂದು ಆವಾಜ್ ಹಾಕಿದ್ದಾರೆ. ಅಲ್ಲದೆ ಪ್ರಕರಣದ ಮಾಹಿತಿಯನ್ನು ಹೇಳಲು ಮುಂದಾದ DySP ಜಗದೀಶ್ ಕೇಳದೆ ಹೊರ ನಡೆದಿದ್ದಾರೆ.
ಇದನ್ನು ಓದಿ: ರಾಜಭವನ ಮುತ್ತಿಗೆಗೆ ಯತ್ನ; ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನನ್ನು ವಶಕ್ಕೆ ಪಡೆದ ಪೊಲೀಸರು
ಏನಿದು ಪ್ರಕರಣ?
ಜನವರಿ 18 ನೇ ತಾರೀಕಿನಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶಾಂತಿನಗರದಲ್ಲಿ ರಾತ್ರಿ ವೇಳೆ ಅಂಗಡಿಯಲ್ಲಿದ್ದ ಸುಶೀಲಾ ಎನ್ನುವ ಮಹಿಳೆಯನ್ನ ಬಾವಿಕೆರೆ ಗ್ರಾಮದ ಆಂಜನಮೂರ್ತಿ ಅತ್ಯಾಚಾರಕ್ಕೆ ಯತ್ನಿಸಿದ ಎಂದು ಅಂಗಡಿಯಲ್ಲೇ ಇದ್ದ ಎಳೆನೀರು ಕೊಚ್ಚುವ ಮಚ್ವಿನಿಂದ ಆಂಜನಮೂರ್ತಿ ಕುತ್ತಿಗೆಗೆ ಸುಶೀಲ ಬಲವಾಗಿ ಹಲ್ಲೆ ಮಾಡಿದ್ದಳು ಎನ್ನಲಾಗಿದೆ. ಹಲ್ಲೆ ಸಂಬಂಧ ಗಾಯಾಳು ಆಂಜನಮೂರ್ತಿ ಕುಟುಂಬಸ್ಥರು ಮಚ್ಚಿನಿಂದ ಸುಶೀಲಾಳ ಎರಡು ಕಾಲುಗಳನ್ನು ಕೊಚ್ಚಿದ್ದರು ಎಂದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಕರಣದಲ್ಲಿ ಆಂಜನಮೂರ್ತಿ, ತಂದೆ ಮುನಿರಾಜು, ತಾಯಿ ಲಲಿತಮ್ಮ, ವಿರುದ್ದ ಕೊಲೆ ಯತ್ನ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣದಿಂದ ಆರೋಪಿ ಆಂಜನಮೂರ್ತಿ ತಾಯಿ ಎ 3 ಆರೋಪಿ ಲಲಿತಮ್ಮರನ್ನ ಕೈ ಬಿಡುವಂತೆ ಮಾಜಿ ಶಾಸಕ ಸುರೇಶ್ ಗೌಡ ಸೂಚಿಸಿದ್ದಾರೆ. ಈಗಾಗಲೇ ಲಲಿತಮ್ಮರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ