ಅಂಬರೀಷ್ ಎನ್ನುವ ಶಕ್ತಿ ನನ್ನೊಂದಿಗಿಲ್ಲ ಅಂತಾ, ನನ್ನ ಟಾರ್ಗೆಟ್ ಮಾಡಲಾಗುತ್ತಿದೆ ; ಸುಮಲತಾ ಅಂಬರೀಷ್

ಅಂಬರೀಷ್​ ಇದ್ದಾಗ ಎಲ್ಲರೂ ಸುಮ್ಮನಿದ್ದರು. ಅವರು ಎಷ್ಟು ಚುನಾವಣೆಗಳನ್ನ ನಡೆಸಿದ್ದಾರೆ. ಆಗ ಇವರೆಲ್ಲಾ ಏನೂ ಮಾತನಾಡುತ್ತಿರಲಿಲ್ಲ. ಈಗ ಆ ಒಂದು ಶಕ್ತಿ ನನ್ನೊಂದಿಗಿಲ್ಲ ಅನ್ನೋ ಕಾರಣಕ್ಕೆ ಮಹಿಳೆ ಅನ್ನೋದು ನೋಡದೆ ಮಾತನಾಡುತ್ತಿದ್ದಾರೆ

G Hareeshkumar | news18
Updated:March 29, 2019, 4:34 PM IST
ಅಂಬರೀಷ್ ಎನ್ನುವ ಶಕ್ತಿ ನನ್ನೊಂದಿಗಿಲ್ಲ ಅಂತಾ, ನನ್ನ ಟಾರ್ಗೆಟ್ ಮಾಡಲಾಗುತ್ತಿದೆ ; ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
  • News18
  • Last Updated: March 29, 2019, 4:34 PM IST
  • Share this:
ಮಂಡ್ಯ ( ಮಾ.29) :  ಅಂಬರೀಷ್ ಅನ್ನೊ ಶಕ್ತಿ ನನ್ನೊಂದಿಗೆ ಇಲ್ಲಾ ಅನ್ನೋ ಕಾರಣಕ್ಕೆ ನನ್ನ‌ ಟಾರ್ಗೆಟ್ ಮಾಡಿ ಮಾತನಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾತು ಮಿತಿ ಮೀರಿದೆ. ಸಿಎಂ ಸೇರಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಾಗ್ದಾಳಿ ನಡೆಸಿದರು.

ಅಂಬರೀಷ್ ಇದ್ದಾಗ ಎಲ್ಲರೂ ಸುಮ್ಮನಿದ್ದರು. ಅವರು ಎಷ್ಟು ಚುನಾವಣೆಗಳನ್ನ ನಡೆಸಿದ್ದಾರೆ. ಆಗ ಇವರೆಲ್ಲಾ ಏನೂ ಮಾತನಾಡುತ್ತಿರಲಿಲ್ಲ. ಈಗ ಆ ಒಂದು ಶಕ್ತಿ ನನ್ನೊಂದಿಗಿಲ್ಲ ಅನ್ನೋ ಕಾರಣಕ್ಕೆ ಮಹಿಳೆ ಅನ್ನೋದು ನೋಡದೆ ಮಾತನಾಡುತ್ತಿದ್ದಾರೆ. ಮಾತನಾಡುವ ಮೊದಲು ಒಂದೇ ಒಂದು ನಿಮಿಷ ಯೋಚನೆ ಮಾಡದೆ, ಸಿಎಂ ಕುರ್ಚಿ ಮೇಲಿದ್ದೀನಿ ಅನ್ನೋದನ್ನ ಮರೆತು ಮಾತನಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ರೈತ ಸಂಘದ ಬೆಂಬಲದಿಂದ ನೂರಾನೆ ಬಲ ಬಂದಿದೆ; ಸುಮಲತಾ ಅಂಬರೀಷ್​

ಐಟಿ ದಾಳಿ ನನ್ನ ನಿಯಂತ್ರಣದಲ್ಲಿಲ್ಲ‌. ಆ ಇಲಾಖೆಯನ್ನ ನಾನು‌ ಕಂಟ್ರೋಲ್ ಮಾಡುತ್ತಿದ್ದೆನಾ. ಐಟಿ ದಾಳಿ ಮಾಡಲು ಮೂರು ತಿಂಗಳಿಂದ ಒಂದು ವರ್ಷದವರೆಗೂ ನಿಗಾ ಇಟ್ಟು ದಾಳಿ ಮಾಡಲಾಗುತ್ತದೆ. ಮನೆಗೆ ಹೋಗಿ ಪಾರ್ಟಿ ಮಾಡಲು ಬರ್ತಾರಾ? ಸಿನಿಮಾ ನಟರ ಮೇಲೆ ದಾಳಿಯಾದಾಗ ಅವರು ಸಹಕಾರ ನೀಡಲಿಲ್ಲವೇ?. ನಿಮಗೆ ಮಾತ್ರ ಐಟಿ ರಿಯಾಯಿತಿ ಕೊಡಬೇಕೆ? ಅಂದು ನಾಮಪತ್ರ ಸಲ್ಲಿಕೆ ದಿನ ಅವರು ದುಡ್ಡು ಹಂಚುತ್ತಿದ್ದನ್ನ ನೋಡಿ ಐಟಿಯವರು ದಾಳಿ ಮಾಡಿದ್ದಾರೆ  ಎಂದು ತಿಳಿಸಿದರು.

ನಿಖಿಲ್ ನಾಮಪತ್ರ ಕಾನೂನು ಬದ್ದವಾಗಿಲ್ಲ

ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರ ಕಾನೂನು ಬದ್ದವಾಗಿಲ್ಲ. ಅದನ್ನ ಸರಿಪಡಿಸಲು ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಐಟಿ ದಾಳಿ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ದೂರುತ್ತಾರೆ. ಇವರು ಮಾಡಿರುವುದೇನು? ಈ ವಿಚಾರದಲ್ಲಿ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ. ನಿಖಿಲ್ ನಾಮಪತ್ರ ಗೊಂದಲ ವಿಚಾರದಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಲಾಗಿದೆ‌ ಎಂದರು.

First published: March 29, 2019, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading