Ramanagara: ಸಿ.ಪಿ.ಯೋಗೇಶ್ವರ್ ಹೆಸರು ಹೇಳದೇ ಕುಮಾರಸ್ವಾಮಿ ಟಾಂಗ್ ನೀಡಿದ್ದು ಹೀಗೆ!

ಇಷ್ಟು ದಿನಗಳು ನನ್ನ ಪ್ರಶ್ನೆ ಮಾಡೋರು ಎಲ್ಲಿದ್ದರು. ಈಗ ಏಕೆ ಇವರು ಬರುತ್ತಾ ಇದ್ದಾರೆ.  ಅಧಿಕಾರಿಗಳ ವರ್ಗಾವಣೆ ದಂಧೆ (Officer Transfer Scam)ಮಾಡಿಕೊಂಡು ಬಂದಿದ್ದಾರೆಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ಹೆಸರು ಬಳಸದೇ ಟಾಂಗ್ ನೀಡಿದರು.

ಸಿಪಿ ಯೋಗೇಶ್ವರ್, ಎಚ್​.ಡಿ.ಕುಮಾರಸ್ವಾಮಿ

ಸಿಪಿ ಯೋಗೇಶ್ವರ್, ಎಚ್​.ಡಿ.ಕುಮಾರಸ್ವಾಮಿ

  • Share this:
ರಾಮನಗರ: ಚನ್ನಪಟ್ಟಣದ ಹನಿಯೂರಿನಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ(Former CM HD Kumaraswamy), ಮಾತನಾಡಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (Former Minister CP Yogeshwar) ಹೆಸರು ಬಳಸದೆ ಟಾಂಗ್ ನೀಡಿದ್ದಾರೆ. ನಾನು ಯಾವಾಗಲೂ ಆಕ್ಟಿವ್ ರಾಜಕಾರಣಿ (Active Politician). ನನ್ನ ಕೆಲಸ ಪ್ರಾರಂಭವಾಗುವುದೇ ಬೆಳಗ್ಗೆ 6 ಗಂಟೆಗೆ. ನನ್ನ ದಿನಚರಿ ಆರಂಭವಾಗುವುದೇ ಬೆಳಗ್ಗೆ 6 ಗಂಟೆಗೆ. ನಾನು ಕೇವಲ ಚನ್ನಪಟ್ಟಣ(Channapattana)ಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯವನ್ನು ನಾನು ನೋಡಬೇಕಾಗಿದೆ. ಮಂಡ್ಯ, ಹಾಸನ, ಮೈಸೂರು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲೆಡೆ ಹೋಗುತ್ತೇನೆ. ಶುಭ ಸಮಾರಂಭ ಇರಬಹುದು, ಕಷ್ಟಸುಖಗಳಿಗೆ ಸ್ಪಂದಿಸುವುದು ಇರಬಹುದು ಪ್ರತಿನಿತ್ಯ ಇವುಗಳೇ ನನ್ನ ದಿನಚರಿ. ಇಷ್ಟು ದಿನಗಳು ನನ್ನ ಪ್ರಶ್ನೆ ಮಾಡೋರು ಎಲ್ಲಿದ್ದರು. ಈಗ ಏಕೆ ಇವರು ಬರುತ್ತಾ ಇದ್ದಾರೆ.  ಅಧಿಕಾರಿಗಳ ವರ್ಗಾವಣೆ ದಂಧೆ (Officer Transfer Scam)ಮಾಡಿಕೊಂಡು ಬಂದಿದ್ದಾರೆಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ಹೆಸರು ಬಳಸದೇ ಟಾಂಗ್ ನೀಡಿದರು.

ಈ ದಂಧೆ ಮಾಡಿಕೊಂಡು ಮುಖಂಡರ ಖರೀದಿಗೆ ಹೊರಟಿದ್ದಾರೆ. ಜೂಜು ಆಡುವ ಮುಖಂಡರ ಖರೀದಿ ಅವರು ಮಾಡಲಿ. ನಾನು ಜನರ ಕಷ್ಟಸುಖಗಳಿಗೆ ಸಹಾಯ ಮಾಡುತ್ತೇನೆ.‌ ನಾನು ಜೂಜಾಟ ಆಡೋರಿಗೆ ಹಣ ನೀಡಲು ಆಗುತ್ತಾ? ಅದಕ್ಕೆ ಅವರಿಗೆ ಬಿಟ್ಟಿದ್ದೇನೆ. ಅ ಕೆಲಸ ಅವರೇ ಮಾಡಲಿ, ನಾನು ಜನರ ಕಷ್ಟ ಸುಖಗಳಿಗೆ ಓಡಾಡುತ್ತೇನೆಂದರು.

ಡಿಕೆ ಬ್ರದರ್ಸ್ ಗೆ HDK ಎಚ್ಚರಿಕೆ

ಜೆಡಿಎಸ್ ಮುಖಂಡರು ಬಿಜೆಪಿ ಸೇರುತ್ತಿರುವ ವಿಚಾರವಾಗಿ ಹೇಳಿಕೆ ನೀಡಿದರು. ಇನ್ನು ಇದೇ ವೇಳೆ ಡಿ.ಕೆ.ಬ್ರದರ್ಸ್ (DK Brothers) ಗೆ ಎಚ್ಚರಿಕೆ ನೀಡಿದರು. ‌ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ, ಇಲ್ಲಿ ನಾವು ಕಲ್ಲುಬಂಡೆ ಹೊಡೆಯೋದು ಅಥವಾ ಬಡವರ ಜಮೀನು ಲಪಾಟಾಯಿಸಿ ರಾಜಕಾರಣ ಮಾಡಿಲ್ಲ. ಯಾರಿಗೂ ನಾವು ತೊಂದರೆ ಕೊಟ್ಟಿಲ್ಲ ಜನರು ಕಷ್ಟ ಸುಖಗಳನ್ನು ನೋಡಿದ್ದೇವೆ.‌ ಜನ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. ಪ್ರೀತಿ ವಿಶ್ವಾಸದಿಂದ ನಮ್ಮನ್ನು ನೋಡಿದ್ದಾರೆ.‌

ಅ ಪ್ರೀತಿ ವಿಶ್ವಾಸ‌ದ ಋಣ ತೀರಿಸುವ ಕೆಲಸ ಮಾಡಬೇಕಿದೆ.‌ ನಾವು ದುರಾಂಕರದಿಂದ ನಡೆದುಕೊಂಡಿಲ್ಲ ಯಾವತ್ತು, ನಾವು ಸೋತಾಗಲು, ಗೆದ್ದಾಗಲು ಒಂದೇ ರೀತಿ ಇದ್ದೇವೆ. ನಮಗೆ ಯಾವುದೇ ರೀತಿಯಲ್ಲಿ ದುರಂಕಾರದ ನಡವಳಿಕೆ ಇಲ್ಲ. ಮಣ್ಣಿನ ಮಕ್ಕಳು ಎಂದು ಬೋರ್ಡ್ ಹಾಕಿಕೊಂಡಿಲ್ಲ. ಮಂಡ್ಯದಲ್ಲಿ ಅವರು ಹೇಳಿಕೊಂಡಿದ್ದಾರೆ ಜೆಡಿಎಸ್​ ನವರು ಮಾತ್ರ ಮಣ್ಣಿನ ಮಕ್ಕಳೇ ಎಂದು. ಅದಕ್ಕೆ ನಾನು ಹೇಳಿದ್ದು ಬೋರ್ಡ್ ಹಾಕಿಕೊಂಡು ಸುತ್ತಿ, ದಿನ ರಾಜ್ಯವನ್ನು ಬೋರ್ಡ್ ಹಾಕಿಕೊಂಡು ಸುತ್ತಾಟ ನಡೆಸಿ ಎಂದಿದ್ದೇನೆ.

ನಾನೂ ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ

ಕನಕಪುರದಲ್ಲಿ ಹೋಗಿ ಕೇಳಿದ್ರೆ ಏನ್ ಅಂತಾರೆ ಅವರನ್ನ, ಯಾವ ಮಕ್ಕಳು ಎಂದು ಕರೆಯುತ್ತಾರೆ ಅವರನ್ನು.
ಈ ಸರ್ಕಾರದಲ್ಲಿ ದಂಗಕೋರರಿಗೆ ರಕ್ಷಣೆ ಸಿಗುತ್ತದೆ. ಬಡವರಿಗೆ ರಕ್ಷಣೆ ಸಿಗಲ್ಲ ಸಾವಿರಾರು ದಾಖಲೆ ಕೊಡಬಲ್ಲೆ ಎಂದರು.‌ ಇನ್ನು ನಾನು ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಟೀಕೆ

ಡಿಕೆ ಬ್ರದರ್ಸ್ ನನಗೆ ಕಾಂಪಿಟೇಟರ್ ಅಲ್ಲವೇ ಅಲ್ಲ. ಮೇಕೆದಾಟು ಯೋಜನೆ ವಿಚಾರವಾಗಿ ಪಾದಯಾತ್ರೆ ಮಾಡ್ತಿದ್ದಾರೆ.‌ ಈ ಪಾದಯಾತ್ರೆಯಿಂದ ಏನು ಪ್ರಯೋಜನ. ಏನಪ್ಪ ನಿಮ್ಮ ಸಾಧನೆ ಈ ಪಾದಯಾತ್ರೆಯಿಂದ, ಇದನ್ನು ನಾನು ಕೇಳುತ್ತಿದ್ದೇನೆ ಉತ್ತರ ಕೊಡಲಿ ಅವರು. ಈಗ ಮೇಕೆದಾಟು ಪಾದಯಾತ್ರೆ ಮಾಡಿದ ತಕ್ಷಣ ನೀರು ಬರುತ್ತೋ.‌ ಮೇಕೆದಾಟು ಸಂಬಂಧಿಸಿದ ಹಾಗೆ ಏನಾಗಿದೆ, ಕಳೆದ ವಾಟರ್ ಬೋರ್ಡ್ ಮ್ಯಾನೇಜ್ಮೆಂಟ್ ಮಿಟಿಂಗ್ ನಲ್ಲಿ ಏನಾಗಿದೆ. ಅಲ್ಲಿ ಸಭೆ ನಡೆದಾಗ ಡಿಪಿಆರ್ ಬಗ್ಗೆ ತಕಾರರು ತೆಗೆದ್ರು.

ತಮಿಳುನಾಡಿನವರು ತಕರಾರು ತೆಗೆದಿದ್ದಾರೆ. ಯಾವ ರೀತಿ ಇಲ್ಲಿ ಚರ್ಚೆ ತರ್ತೀರಿ ನಾವು ಇದಕ್ಕೆ ಒಪ್ಪಿಗೆ ಕೊಡಲ್ಲ ಅಂದಿದ್ದಾರೆ. ಇದು ವಾಸ್ತವ ಪರಿಸ್ಥಿತಿ ಜನರ ಮುಂದೆ ಹೇಳಿ ಇದನ್ನ, ದೆಹಲಿಯಲ್ಲಿ ಸಾಧ್ಯ ಇಲ್ಲ ಅಂತಾರೆ ಬಿಜೆಪಿಯವ್ರು ಮಾಡ್ತೀವಿ ಅಂತಾರೆ.

ನಾನು ಕೊಟ್ಟ ಡಿಪಿಆರ್ ಗೆ ಜೀವ ಇರೋದು, ನನ್ನ ಕಾಲದಲ್ಲಿ ಕೊಟ್ಟ ಡಿಪಿಆರ್ ಕೇಂದ್ರದ ಮುಂದಿದೆ. ಇವರ್ಯಾರು ಕೊಟ್ಟ ಡಿಪಿಆರ್ ಗೆ ಜೀವ ಇಲ್ಲ ಅಲ್ಲಿ. ನಾನು ಇಂದು ಸರ್ಕಾರ ನಡೆಸಿದ್ರೆ ಏನ್ ಮಾಡ್ತಾ ಇದ್ದೇ ಚರ್ಚೆ ಮಾಡಲ್ಲ. ಪಾದಯಾತ್ರೆ ಮಾಡಿ ಇವರು ಏನ್ ಮಾಡ್ತಾರೆ.

ಬಿಜೆಪಿ ಏನು ಮಾಡುತ್ತೋ ನೋಡೋಣ

ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇಟ್ಟುಕೊಂಡು ಬಿಜೆಪಿ ಏನು ಮಾಡುತ್ತೋ ನೋಡೋಣ. ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಬಹುಮತ ಸಿಕ್ಕರೆ ಸಾಕು, ಮೇಕೆದಾಟು ಡಿಪಿಆರ್ ಗೆ ಬಹುಮತ ಸಿಕ್ಕರೆ ಸಾಕು. ಆದರೆ ಆಂಧ್ರ ತಮಿಳುನಾಡು ತೆಲಂಗಾಣಕ್ಕೆ ಅನ್ಯಾಯವಾಗಲ್ಲ. ಕರ್ನಾಟಕಕ್ಕೆ ಮಾತ್ರ ನೀರಾವರಿ ವಿಚಾರವಾಗಿ ಅನ್ಯಾಯ, ಇದು ಬಿಜೆಪಿ ಕಾಂಗ್ರೆಸ್ ನವರ ಸಾಧನೆ ಎಂದು ಟೀಕೆ ಮಾಡಿದರು.
Published by:Mahmadrafik K
First published: