• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಸ್ಕಿ ಸೋಲಿನ ಹೊಣೆಯನ್ನು ನಾನೂ ಕೂಡ ಹೊರುತ್ತೇನೆ, ಪ್ರತಾಪಗೌಡ ಪಾಟೀಲರ ಹೇಳಿಕೆ ನಾನು ಒಪ್ಪಲ್ಲ; ಬಿವೈ ವಿಜಯೇಂದ್ರ

ಮಸ್ಕಿ ಸೋಲಿನ ಹೊಣೆಯನ್ನು ನಾನೂ ಕೂಡ ಹೊರುತ್ತೇನೆ, ಪ್ರತಾಪಗೌಡ ಪಾಟೀಲರ ಹೇಳಿಕೆ ನಾನು ಒಪ್ಪಲ್ಲ; ಬಿವೈ ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

ಪ್ರತಾಪಗೌಡ ಪಾಟೀಲ್ ಅವರನ್ನು ಎಂಎಲ್​ಸಿ ಮಾಡುತ್ತಿರಾ ಎಂಬ ಪ್ರಶ್ನೆಗೆ ಮಾತನಾಡಿದ ವಿಜಯೇಂದ್ರ, ಅದರ ಬಗ್ಗೆ ಪಕ್ಷದ ಮುಖಂಡರು ಕೂತು ಚರ್ಚೆ ಮಾಡ್ತಾರೆ. ಈಗ ತಾನೇ ಫಲಿತಾಂಶ ಬಂದಿದೆ. ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರು ಅದರ ಬಗ್ಗೆ ಚರ್ಚೆ ಮಾಡ್ತಾರೆ ಎಂದಷ್ಟೇ ಹೇಳಿದರು.

  • Share this:

ಬೆಂಗಳೂರು: ಇಂದು ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.  ಪುದುಚೇರಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ 78 ಸ್ಥಾನ ಗೆದ್ದಿರುವುದು ಅತಿ ದೊಡ್ಡ ಸಾಧನೆ. ಮಸ್ಕಿಯಲ್ಲಿ ಗೆಲುವು ಸಾಧಿಸುತ್ತೇವೆ ಅಂತ ಭಾವಿಸಿದ್ದೆವು. ಸೋತರು ಪರವಾಗಿಲ್ಲ, ನಾವು ಕಾರ್ಯಕರ್ತರ ಜೊತೆ ಇದ್ದೀವಿ. ಮಸ್ಕಿ ಸೋಲು ನಾವು ನಿರೀಕ್ಷೆ ಮಾಡಿರಲಿಲ್ಲ.  ನಾವು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದ್ದೆವು. ಜನಾದೇಶವನ್ನು ನಾವು ಗೌರವಿಸುತ್ತೇವೆ. ಈಗ ತಾನೇ ತೀರ್ಪು ಬಂದಿದೆ. ಮತದಾರರು ಮತದಾನ ಮಾಡೋ ಮೂಲಕ ತೀರ್ಪು ಪ್ರಕಟಿಸಿದ್ದಾರೆ. ಸೋಲಿಗೆ ನಮ್ಮವರೇ ಕಾರಣ ಅನ್ನೋದನ್ನು ನಾನು ಒಪ್ಪುವುದಿಲ್ಲ.  ಸೋಲಿನ ಬಗ್ಗೆ ಎಲ್ಲಾ ಕೂತು ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಸ್ಕಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಬಿ.ವೈ. ವಿಜಯೇಂದ್ರ ಅವರು ಹೇಳಿದರು.


ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಬಸವ ಕಲ್ಯಾಣ, ಮಸ್ಕಿ ಅನ್ನೋದು ಬರೋದಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟಾಗ ಇಲ್ಲ ಅನ್ನೋದಕ್ಕೆ ಆಗೋದಿಲ್ಲ. ಮುಂದೆ ಸರಿ ಹೋಗುತ್ತೇ, ಒಗ್ಗಟ್ಟಾಗಿ ಇರ್ತೇವೆ. ನಾವೆಲ್ಲರೂ ಒಟ್ಟಿಗೆ ಸಂಘಟನೆ ಮಾಡಿದ್ದೆವು. ಮಸ್ಕಿ ಸೋಲಿನ ಹೊಣೆಯನ್ನು ನಾನೂ ಕೂಡ ಹೊರುತ್ತೇನೆ ಎಂದು ತಿಳಿಸಿದರು.


ಉಸ್ತುವಾರಿ ಕ್ಷೇತ್ರ ಬದಲಾದ ವಿಚಾರಕ್ಕೆ ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಮಸ್ಕಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಇದ್ದವು. ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟರೂ ಸೋಲಾಗಿದೆ. ಕ್ಷೇತ್ರದ ಮತದಾರರು ನಮಗೆ ಆಶೀರ್ವದಿಸಿಲ್ಲ. ಜನಾದೇಶವನ್ನು ನಾವು ಗೌರವಿಸುತ್ತೇವೆ. ಈಗಷ್ಟೇ ತೀರ್ಪು ಬಂದಿದೆ. ಬಿಜೆಪಿ ಸೋಲಿಗೆ ಕಾರಣ ಏನು ಅಂತ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.


ಇದನ್ನು ಓದಿ: ಮೋದಿ ವೇಷಕ್ಕೆ, ಗಡ್ಡಕ್ಕೆ ಓಟು ಹಾಕಲ್ಲ, ಜನ ಅಭಿವೃದ್ಧಿ ಕೆಲಸ ನೋಡುತ್ತಾರೆ; ಸಿದ್ದರಾಮಯ್ಯ ವ್ಯಂಗ್ಯ


ಮಸ್ಕಿಯಲ್ಲಿ ನನ್ನ ಸೋಲಿಗೆ ಬಿಜೆಪಿ ನಾಯಕರೇ ಕಾರಣ ಎಂಬ ಬಿಜೆಪಿ ಪರಾಜಿತ ಅಭ್ಯರ್ಥಿ  ಪ್ರತಾಪಗೌಡ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ನಾನು ಪ್ರತಾಪಗೌಡ ಪಾಟೀಲ ಅವರ ಹೇಳಿಕೆ ಒಪ್ಪಲ್ಲ. ಸೋಲಿಗೆ ಹಲವು ಕಾರಣ ಇರುತ್ತವೆ.  ಕಾರ್ಯಕರ್ತರ ಶ್ರಮ ಇರುತ್ತೆ. ಯಾವುದೋ ಒಂದು ಕಾರಣದಿಂದ ಸೋತ್ವಿ ಅನ್ನೋದನ್ನು ನಾನು ಒಪ್ಪಲ್ಲ ಎಂದರು.


ಪ್ರತಾಪಗೌಡ ಪಾಟೀಲ್ ಅವರನ್ನು ಎಂಎಲ್​ಸಿ ಮಾಡುತ್ತಿರಾ ಎಂಬ ಪ್ರಶ್ನೆಗೆ ಮಾತನಾಡಿದ ವಿಜಯೇಂದ್ರ, ಅದರ ಬಗ್ಗೆ ಪಕ್ಷದ ಮುಖಂಡರು ಕೂತು ಚರ್ಚೆ ಮಾಡ್ತಾರೆ. ಈಗ ತಾನೇ ಫಲಿತಾಂಶ ಬಂದಿದೆ. ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರು ಅದರ ಬಗ್ಗೆ ಚರ್ಚೆ ಮಾಡ್ತಾರೆ ಎಂದಷ್ಟೇ ಹೇಳಿದರು.

top videos
    First published: