ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ : ವಾಟಾಳ್ ನಾಗರಾಜ್ ಒತ್ತಾಯ

news18
Updated:May 27, 2018, 2:19 PM IST
ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ : ವಾಟಾಳ್ ನಾಗರಾಜ್ ಒತ್ತಾಯ
  • News18
  • Last Updated: May 27, 2018, 2:19 PM IST
  • Share this:
- ಲೋಕೇಶರಾಮ್ ,ನ್ಯೂಸ್ 18 ಕನ್ನಡ 

 ಬೆಂಗಳೂರು (ಮೇ.27) :  ಹೈದ್ರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಮಲಗಿ ವಿಭಿನ್ನ ರೀತಿಯಲ್ಲಿ  ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಕರ್ನಾಟಕದ ಏಕೀಕರಣ ಇದುವರೆಗೂ ಈಡೇರಿಲ್ಲ ಇದು ಸಮಗ್ರ ಕನ್ನಡಿಗರಿಗೆ ಆಗಿರುವ ಅನ್ಯಾಯವಾಗಿದೆ.

ರಾಜ್ಯದಲ್ಲಿ ಹೊಸ ಮಂತ್ರಿ ಮಂಡಲ ರಚನೆಯಾಗಿದೆ.  ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಸ್ ಸ್ಟಾಪ್ ನಲ್ಲಿ ಮಲಗಿ ಸತ್ಯಾಗ್ರಹ ನಡೆಸಿದರು.  ಇದರ ವಿರುದ್ದ ಕನ್ನಡ ಒಕ್ಕೂಟದ ಮುಖಂಡರುಗಳು ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು.

ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಿದ್ದಾರೆ, ಅಲ್ಲಿನ ಜನ ಕತ್ತಲಲ್ಲಿ ಕಣ್ಣೀರಿಡುತ್ತಾರೆ. ಉತ್ತರ ಕರ್ನಾಟಕವನ್ನು ಕೂಡ ಸಂಪೂರ್ಣವಾಗಿ ಕೈ ಬಿಟ್ಟಿದ್ದು ಅಭಿವೃದ್ಧಿಯಾಗಿಲ್ಲ

ನೂತನ ಸಿಎಂ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ  ಎಚ್ಚರಿಕೆ  ನೀಡಿದರು.
First published:May 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading