Hyderabad-Karnataka Liberation Day: ಕಲ್ಯಾಣ ಕರ್ನಾಟಕ ಉತ್ಸವ ಹೆಸರಿಗೆ ಮಾತ್ರ ಸೀಮಿತನಾ? ಕಲ್ಯಾಣ ಆಗುವುದು ಯಾವಾಗ?

ನಿಜಾಮರ ವಿರುದ್ಧ ಹೋರಾಟದ ಕಿಚ್ಚು ಹೊತ್ತಿಕೊಳ್ಳುವಂತಾಯಿತು. ನಿಜಾಮರ ಆಳ್ವಿಕೆಯಲ್ಲಿ ರಜಾಕಾರರ ಹಾವಳಿ ಕೂಡ ಹೆಚ್ಚಾಗಿತ್ತು. ಹೀಗಾಗಿ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಕೂಡ ಹೋರಾಟಗಾರರು ಹಂತ ಹಂತವಾಗಿ ಹೋರಾಟ ಮಾಡಲು ಆರಂಭಿಸಿದ್ರು.

 ರಾಷ್ಟ್ರಧ್ವಜ

ರಾಷ್ಟ್ರಧ್ವಜ

  • Share this:
ಯಾದಗಿರಿ: ಹೈದರಾಬಾದ್ ಕರ್ನಾಟಕ ವಿಮೋಚನಾ (Hyderabad Karnataka Vimochana Day) ದಿನಾಚರಣೆಯನ್ನು ಸರಕಾರ ಕಲ್ಯಾಣ ಕರ್ನಾಟಕ ಉತ್ಸವನ್ನಾಗಿ (Kalyana Karnataka Utsava) ಆಚರಣೆ ಮಾಡುತ್ತಿದೆ.ಹೆಸರು ಬದಲಾವಣೆ ಮಾಡಿದರೆ ಸಾಲದು ಕಲ್ಯಾಣ ಕರ್ನಾಟಕ ಭಾಗ ಕಲ್ಯಾಣ ಆಗಬೇಕಿದೆ ಎಂದು ಈ ಭಾಗದ ಜನರು ಹೇಳುತ್ತಿದ್ದಾರೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಕಲಬುರಗಿಗೆ ಆಗಮಿಸಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ಭಾಗಕ್ಕೆ ವಿಶೇಷ ಅನುದಾನ ಘೋಷಣೆ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯ ಮಾಡಬೇಕಿದೆ ಎಂಬುವುದು ಈ ಭಾಗದ ಜನರ ಒತ್ತಾಯವಾಗಿದೆ.

ಹೋರಾಟದ ಹೆಜ್ಜೆ

ಭಾರತೀಯರಿಗೆ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿತ್ತು. ಆದ್ರೆ ಹೈದರಾಬಾದ್ ನಿಜಾಮ ಸಂಸ್ಥಾನವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾಗಿರಲಿಲ್ಲ. ಹೈದ್ರಾಬಾದ್ ನಿಜಾಮ ಸಂಸ್ಥಾನದ ಆಳ್ವಿಕೆಯಲ್ಲಿ ಬೀದರ್, ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳು ಒಳಪಟ್ಟಿದ್ದವು. ಹೀಗಾಗಿ ದೇಶ ಸ್ವಾತಂತ್ರದ ಸಂಭ್ರಮದಲ್ಲಿದ್ದಾಗ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮತ್ತೆ ಹೋರಾಟದ ಕಿಚ್ಚು ಕುದಿಯುತ್ತಿತ್ತು.

ನಿಜಾಮರ ವಿರುದ್ಧ ಹೋರಾಟದ ಕಿಚ್ಚು ಹೊತ್ತಿಕೊಳ್ಳುವಂತಾಯಿತು. ನಿಜಾಮರ ಆಳ್ವಿಕೆಯಲ್ಲಿ ರಜಾಕಾರರ ಹಾವಳಿ ಕೂಡ ಹೆಚ್ಚಾಗಿತ್ತು. ಹೀಗಾಗಿ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಕೂಡ ಹೋರಾಟಗಾರರು ಹಂತ ಹಂತವಾಗಿ ಹೋರಾಟ ಮಾಡಲು ಆರಂಭಿಸಿದ್ರು.

hyderabad karnataka liberation day history nmpg mrq
ರಾಷ್ಟ್ರ ಧ್ವಜ


ವಿಮೋಚನಾ ಚಳವಳಿಯಲ್ಲಿ ಹೋರಾಟಗಾರರು ಧುಮುಕಿದ್ರು. ಹೈದರಾಬಾದ್ ರಾಜ್ಯದ ಒಳಗಿದ್ದು ವಿಮೋಚನೆ ಚಳವಳಿ ನಡೆಸುವುದು ಹೋರಾಟಗಾರರಿಗೆ ಅನಿವಾರ್ಯವಾಗಿತ್ತು.

ಹೋರಾಟದಲ್ಲಿ ಅನೇಕ ಹೋರಾಟಗಾರರು

ಗುಲ್ಬರ್ಗಾದ ಈಗಿನ ಕಲಬುರಗಿಯ ಸರ್ದಾರ್, ಶರಣಗೌಡ ಇನಾಮದಾರ್, ಅಣ್ಣಾರಾವ್ ಪಾಟೀಲ್, ಈಗಿನ ಯಾದಗಿರಿ ಜಿಲ್ಲೆಯ ವಿದ್ಯಾಧರ ಗುರೂಜಿ, ಜಗನ್ನಾಥರಾವ್ ಚಂಡರಕಿ, ವಿಶ್ವನಾಥ ರೆಡ್ಡಿ ಮುದ್ನಾಳ, ರಾಜನಕೊಳ್ಳುರು ವಿರುಪಾಕ್ಷಪ್ಪ ಗೌಡ, ರಾಜಾ ವೆಂಕಟಪ್ಪ ನಾಯಕ, ಈಶ್ವರಲಾಲ್ ಭಟ್ಟಡ, ಅಪ್ಪಚ್ಚಗೌಡ ಸುಬೇದಾರ ಮೊದಲಾದ ಹೋರಾಟಗಾರರು ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಹೋರಾಟದಲ್ಲಿ ಅನೇಕ ಹೋರಾಟಗಾರರು ಬಲಿಯಾಗಿದ್ದಾರೆ.

ಇದನ್ನೂ  ಓದಿ:  Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ

ನಿಜಾಮ ಸಂಸ್ಥಾನ ವಿರುದ್ದ ಪೊಲೀಸ್ ಕಾರ್ಯಾಚರಣೆ

ಹೋರಾಟಗಾರರ ಫಲವಾಗಿ ಹಾಗೂ ಕಾಂಗ್ರೆಸ್ ಮುಖಂಡರ ಮನವಿ ಆಧರಿಸಿ ಅಂದಿನ ಗೃಹ ಸಚಿವ ಸರ್ಧಾರ ವಲ್ಲಭಾಯಿ ಪಟೇಲ್ ನಿಜಾಮ ಸಂಸ್ಥಾನ ವಿರುದ್ದ ಪೊಲೀಸ್ ಕಾರ್ಯಾಚರಣೆಗೆ ಅವಕಾಶ ನೀಡಿದ್ರು. ಭಾರತೀಯ ಸೈನ್ಯ ಹೈದ್ರಾಬಾದ್ ನಗರವನ್ನು ಪ್ರವೇಶಿಸಿ ಶತಮಾನದ ಅರಸೊತ್ತಿಗೆ ವಿರುದ್ಧ ಹೋರಾಟ ನಡೆಸಿ ಭಾರತೀಯ ಸೈನ್ಯ ವಿಜಯ ಸಾಧಿಸಿತ್ತು.

hyderabad karnataka liberation day history nmpg mrq
ರಾಷ್ಟ್ರ ಧ್ವಜ


1948 ಸೆಪ್ಟಂಬರ್ 17 ರಂದು ಸಿಕ್ತು ಸ್ವಾತಂತ್ರ್ಯ

1948 ಸೆಪ್ಟಂಬರ್ 17 ರಂದು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳು ಹೈದ್ರಾಬಾದ್ ನಿಜಾಮ ಆಳ್ವಿಕೆಯಿಂದ ಮುಕ್ತಿ ಹೊಂದಿ ಸ್ವತಂತ್ರವಾದವು. ಹೀಗಾಗಿ ಹೈದರಾಬಾದ್ ಕರ್ನಾಟಕ ಭಾಗದ ಜನತೆಗೆ ಸೆಪ್ಟೆಂಬರ್ ತಿಂಗಳ 17ನೇ ದಿನ ಸ್ವಾತಂತ್ಯ್ರ ಸಂಭ್ರಮದ ವಿಶೇಷವಾಗಿದೆ.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯನಗರ ಹೈಕ ಭಾಗದ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಸರಕಾರ ಹೈದರಾಬಾದ್ ಕರ್ನಾಟಕ ಭಾಗವನ್ನು ಸರಕಾರ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದೆ. ಅದೇ ರೀತಿ ಸರಕಾರ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಿದೆ.

ಇದನ್ನೂ ಓದಿ:  Cauvery Theerthodbhava: ಅಕ್ಟೋಬರ್ 17 ರಂದು ಸಂಜೆ 7 ಗಂಟೆ 21 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವ

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಗಸ್ಟ್ 15 ಮತ್ತು ಸೆಪ್ಟಂಬರ್ 17 ಈ ಭಾಗದ ಜನತೆಗೆ ಎರಡು ಬಾರಿ ಸ್ವಾತಂತ್ರ್ಯ ಸಂಭ್ರಮದ ದಿನವಾಗಿದೆ.
Published by:Mahmadrafik K
First published: