Respect your Wife: ಹೆಂಡತಿಯನ್ನು ಲೇ..ಹೋಗೇ, ಬಾರೇ ಎಂದರೆ ಕೇಸ್ ಬೀಳುತ್ತೆ ಹುಷಾರ್, ಈ ಕಾನೂನಿನ ಬಗ್ಗೆ ಎಲ್ಲಾ ಗಂಡಂದಿರು ತಿಳಿದಿರಲೇಬೇಕು!

Husbands in danger: ಇದು ಯಾವುದೋ ಕಾಣದ ದೇಶದ ಕಾನೂನಲ್ಲ. ನಮ್ಮ ದೇಶದ್ದೇ ನಿಯಮ...ಬಹಳ ಸಮಯದಿಂದ ಈ ಕಾನೂನು ಇರೋದು ಹೌದಾದ್ರೂ ಯಾರೂ ಅದನ್ನು ಅಷ್ಟು ಗಮನಿಸಿರಲಿಲ್ಲ. ಈಗ ಲಾಕ್ಡೌನ್ ನಂತರ ಮನೆಯೊಳಗೆ ಹೆಂಡತಿ ಮೇಲಿನ ದೌರ್ಜನ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾನೂನು, ನಿಯಮಗಳನ್ನು ಕೆದಕಿ, ತೆಗೆದು, ಪರಿಶೀಲನೆ ಮಾಡಿ ಬಳಸಲಾಗ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Protection against Domestic Violence: ಗಂಡಸರಿಗೆ, ಅದರಲ್ಲೂ ಮದುವೆಯಾದ ಗಂಡಸರ ಪಾಲಿಗೆ ಅತಿ ದೊಡ್ಡ ಬ್ಯಾಡ್ ನ್ಯೂಸ್ (Bad News for Husbands) ಇಲ್ಲಿದೆ. ಇನ್ಮುಂದೆ ನೀವು ಹೆಂಡತಿಯನ್ನು ಮನೆಯಲ್ಲಾಗಲೀ ಸಾರ್ವಜನಿಕ ಸ್ಥಳಗಳಲ್ಲಾಗಲಿ ಲೇ…ಹೋಗೇ…ಬಾರೇ…ಎಂದು ಕರೆಯುವಂತಿಲ್ಲ. ಗ್ರಹಚಾರ ಕೆಟ್ಟರೆ ನೇರವಾಗಿ ಜೈಲಿಗೇ ಹೋಗಬೇಕಾದ (Jail for disrespect) ಪರಿಸ್ಥಿತಿ ಬಂದೀತು ಜೋಕೆ. ಮನೆಯೊಳಗಿನ ಪುಟ್ಟ ಹೆಣ್ಣುಮಗುವಿನಿಂದ ಹಿಡಿದು ವಯಸ್ಸಾದ ಹಿರಿಯಜ್ಜಿಯವರಗೆ (Women of all ages) ಯಾವ ಕುರಿತೂ ಏಕವಚನ ಬಳಸುವಂತಿಲ್ಲ. ಈ ಕಾನೂನು 2005ನೇ ಇಸವಿಯಿಂದಲೇ ಜಾರಿಯಲ್ಲಿದೆ. ಮಹಿಳೆಯರ ಹಿತರಕ್ಷಣೆ ಕಾಯಲು ಈ ನಿಯಮ ತರಲಾಗಿತ್ತು. ಆದರೆ ಇತ್ತೀಚೆಗೆ ಈ ಕಾನೂನಿನ ಸಹಾಯ ಪಡೆದು ಗಂಡಂದಿರ ವಿರುದ್ಧ ಅನೇಕ ಮಹಿಳೆಯರು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ (Case against husband) ಎನ್ನುವ ವಿಚಾರ ಬಹಿರಂಗವಾಗಿದೆ. ಅದರಲ್ಲೂ ಕಳೆದ ಒಂದೂವರೆ ವರ್ಷಗಳಿಂದ ಈ ಬಗೆಯ ಪ್ರಕರಣಗಳು ಬಹಳ ಹೆಚ್ಚಾಗಿವೆ ಎನ್ನಲಾಗಿದೆ.

  ಲಾಕ್​ ಡೌನ್ ಸಂದರ್ಭದಲ್ಲಿ ಗೃಹ ಹಿಂಸೆ ಪ್ರಕರಣಗಳ ಪ್ರಮಾಣ ಶೇಕಡಾ 15ರಿಂದ 20ರಷ್ಟು ಹೆಚ್ಚಾಗಿದೆ. ಈ ಬಗೆಯ ಹಿಂಸೆಗಳಿಂದ ಮಹಿಳೆಯರನ್ನು ರಕ್ಷಿಸುವ ಉದ್ದೇಶದಿಂದ ಅಧಿನಿಯಮ ರೂಪಿಸಲಾಗಿದೆ. ಗಂಡಿನಷ್ಟೇ ಹೆಣ್ಣಿಗೂ ಸಮಾನತೆ, ರಕ್ಷಣೆ, ಗೌರವ ಕಲ್ಪಿಸುವ ಉದ್ದೇಶ ಇದಕ್ಕಿದೆ. ಹಾಗಾಗಿ ಮನೆಯ ಹೊರಗೆ ಮಾತ್ರವಲ್ಲ, ಮನೆಯೊಳಗೂ ಮಹಿಳೆಯರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಮಾಡಿರುವ ಈ ನಿಯಮ ಈಗ ಬಹಳಷ್ಟು ದುರುಪಯೋಗವಾಗುತ್ತಿದೆ ಎನ್ನಲಾಗಿದೆ.

  ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ದಿಟ್ಟಿಸಿ ನೋಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದೇ ರೀತಿ ಮನೆಯೊಳಗಿನ ಹೆಣ್ಣುಮಕ್ಕಳಿಗೆ ಗೃಹ ಹಿಂಸೆ ತಡೆ ಕಾನೂನು ರಕ್ಷಣೆ ನೀಡುತ್ತದೆ. ಪತ್ನಿಯನ್ನೂ ಸೇರಿದಂತೆ ಮನೆಯಲ್ಲಿನ ಅತ್ತಿಗೆ, ನಾದಿನಿ, ತಾಯಿ, ಮಗಳು, ಅಜ್ಜಿ, ದತ್ತು ಪಡೆದ ಹೆಣ್ಣುಮಗುವಿಗೂ ಈ ನಿಯಮದಡಿ ರಕ್ಷಣೆ ಇದೆ.

  ಇದನ್ನೂ ಓದಿ: ಗಂಡನ ವರ್ಕ್‌ ಫ್ರಮ್‌ ಹೋಂನಿಂದ ಬೇಸತ್ತ ಹೆಂಡತಿ ಮಾಡಿದ್ದೇನು ಗೊತ್ತಾ? ಸಖತ್ ವೈರಲ್ ಆಗ್ತಿದೆ ಆಕೆ ಬರೆದಿರುವ ಲೆಟರ್

  ಪತ್ನಿಯನ್ನು ಹೆಸರು ಹಿಡಿದು ಕರೆಯುವಂತಿಲ್ಲ. ಏಕವಚನದ ಬದಲು ಬಹುವಚನ ಬಳಸಬೇಕು. ಅಪಮಾನ, ಗಂಡು ಮಗುವನ್ನು ಹೆರದಿರುವ ಕುರಿತು ಮೂದಲಿಕೆ, ಹೆಣ್ಣುಮಕ್ಕಳ ಕುಟುಂಬಸ್ಥರು ಅಥವಾ ಆಪ್ತರಿಗೆ ದೈಹಿಕ ಹಿಂಸೆ ಉಂಟುಮಾಡುವುದಾಗಿ ಬೆದರಿಕೆ ಹಾಕುವುದು ಕೂಡಾ ಶಿಕ್ಷಾರ್ಹ ಅಪರಾಧವಾಗಿದೆ. ದಾಖಲೆಗಳ ಪ್ರಕಾರ 2020ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅತೀ ಹೆಚ್ಚು ದಾಖಲಾಗಿವೆ. 23,722 ಪ್ರಕರಣಗಳು ಈ ಸಂಬಂಧ ದಾಖಲಾಗಿವೆ ಎನ್ನಲಾಗಿದೆ. 2017ರಲ್ಲಿ ಈ ಸಂಖ್ಯೆ 14,591 ಇತ್ತು. ಈ ವರ್ಷ ಜನವರಿಯಿಂದ ಇಲ್ಲಿವರಗೆ ಮಹಿಳೆಯ ಮೇಲೆ ನಡೆದ ಒಟ್ಟು 20,368 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

  ಕಾನೂನಿನ ರಕ್ಷಣೆ ಇರುವುದರಿಂದ ಮನೆಯಲ್ಲಿ ಹೆಣ್ಣುಮಕ್ಕಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಜವಾಬ್ದಾರಿ ಗಂಡಸರದ್ದಾಗಿರುತ್ತದೆ. ಬಹುತೇಕ ಮನೆಗಳಲ್ಲಿ ಹೆಂಡತಿ ಗಂಡನನ್ನು ಗೌರವಯುತವಾಗಿ ಬಹುವಚನದಲ್ಲಿ ಮಾತನಾಡಿಸಿದರೂ ಪತಿ ಏಕವಚನದಲ್ಲೇ ಮಾತನಾಡಿಸುವ ರೂಢಿ ಇರುತ್ತದೆ. ಮಹಿಳೆಗೆ ಗೌರವ ಕೊಡುವುದು ಬರೀ ಹೊರಗಡೆ ಮಾತ್ರವಲ್ಲ, ಮನೆಯೊಳಗೂ ಆಗಬೇಕು ಎನ್ನುವ ರಕ್ಷಣೆಯ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ.

  ಚಿಕ್ಕ ವಯಸ್ಸಿನಲ್ಲೇ ಮನೆಯ ಗಂಡು ಮಕ್ಕಳಿಗೆ ಈ ಅಭ್ಯಾಸ ಮಾಡಿಬಿಟ್ಟರೆ ಆಗ ಸಮಸ್ಯೆ ಇರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಎಲ್ಲಾ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಗಂಡು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಕಲಿಸಬೇಕು, ಜೊತೆಗೆ ಮನೆಯ ಹಿರಿಯ ಗಂಡಸರೂ ಅದನ್ನೇ ಪಾಲಿಸಬೇಕು. ದೊಡ್ಡವರನ್ನು ನೋಡಿ ಮಕ್ಕಳು ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಹಾಗಾಗಿ ಸರಿಯಾದ ಕ್ರಮದಲ್ಲಿ ಕಲಿಕೆ ಆದಾಗ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನಿಷ್ಟ ಗೌರವಕ್ಕೂ ಒಂದು ಕಾನೂನು, ನಿಯಮ ತರಬೇಕಾದ ಪರಿಸ್ಥಿತಿ ಇರುವುದು ಮಾತ್ರ ನಿಜಕ್ಕೂ ವಿಪರ್ಯಾಸ.
  Published by:Soumya KN
  First published: