ಹೆಂಡತಿ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಭೂಪ!

news18
Updated:September 10, 2018, 4:32 PM IST
ಹೆಂಡತಿ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಭೂಪ!
news18
Updated: September 10, 2018, 4:32 PM IST
- ವೀರೇಶ್ ಜಿ ಹೊಸೂರ್ ನ್ಯೂಸ್ 18 ಕನ್ನ

ಚಿಕ್ಕಮಗಳೂರು( ಸೆ.10) : ಮೂರು ವರ್ಷ ಪ್ರೀತಿಸಿ ಮದ್ವೆಯಾದ. ಚಿನ್ನದಂತ ಎರಡು ಮಕ್ಕಳೂ ಆದ್ವು. ಆತ ದುಡಿಮೆಗೆಂದು ಬೀದಿಗೆ ಬಿದ್ದ. ಈಕೆ ಪರಪುರುಷನ ತೆಕ್ಕೆಯಲ್ಲಿ ಬಂಧಿಯಾದ್ಲು. 3 ಲಕ್ಷ ಸಾಲ ಮಾಡಿ ಪ್ರಿಯಕರನಿಗೆ ಕೊಟ್ಟು, ಪೊಲೀಸರಿಗೆ ಗಂಡನ ವಿರುದ್ಧವೇ ದೂರು ಕೊಟ್ಲು. ದೊಡ್ಡವರು ಹಂಗೆಲ್ಲಾ ಮಾಡ್ಬೇಡಮ್ಮ ಅಂತ ರಾಜಿ ಮಾಡುದ್ರು, ತನ್ನ ಚಾಳಿ ಮಾತ್ರ ಬಿಡಲಿಲ್ಲ. ಪ್ರೀತಿಸಿ ಮದುವೆಯಾದವಳು ಮತ್ತೊಬ್ಬನ ತೋಳ ತೆಕ್ಕೆಯಲ್ಲಿರೋದ್ನ ಕಂಡ ಗಂಡ ಮಾಡಿದ್ದೇನು ಗೊತ್ತಾ.... ಈ ಸ್ಟೋರ ಓದಿ. ಕಾಫಿನಾಡಲ್ಲಿ ನಡೆದಿದೆ, ಕಂಡು-ಕೇಳರಿಯದ ಕಥೆ.l

ಸತೀಶ್ ತನ್ನ ಹೆಂಡತಿಯ ತಲೆಯನ್ನ ಕಡಿದ ವ್ಯಕ್ತಿ. 9 ವರ್ಷಗಳ ಹಿಂದೆ ರೂಪ ಎಂಬುವಳನ್ನ ಪ್ರೀತಿಸಿ ಮದುವೆಯಾಗಿದ್ದ ಸತೀಶ್‍ಗೆ ಇಬ್ಬರು ಮಕ್ಕಳು. ಬೆಂಗಳೂರಿನಲ್ಲಿ ಡ್ರೈವರ್ ವೃತ್ತಿ ಮಾಡ್ತಿದ್ದ ಸತೀಶ್ ಶಿವನಿಗೆ ಬಂದು ಮಾಂಸದ ಅಂಗಡಿ ಇಟ್ಟುಕೊಂಡು ಹೆಂಡತಿ ಜೊತೆಗಿದ್ದ. ಮೃತ ರೂಪಾಗೆ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದ ಕಾರಣಕ್ಕೆ ಇಬ್ಬರ ನಡುವೆ ಸಾಕಷ್ಟು ಗಲಾಟೆ ಕೂಡ ನಡೆದು, ಸ್ಟೇಷನ್ ಮೆಟ್ಟಿಲು ಕೂಡ ಹತ್ತಿದ್ದರು.

ಈತನ ಹೆಸರು ಸತೀಶ್. ಕೈಯಲ್ಲಿರೋದು ಹೆಂಡತಿ ರೂಪಾಳ ರುಂಡ. ತನ್ನ ಹೆಂಡತಿಯ ತಲೆಯನ್ನ ಕಡಿದು ತಾನೇ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾಣೆ. ಯಾಕಂದ್ರೆ, ಈತ ತರೀಕೆರೆ ತಾಲೂಕಿನ ಶಿವನಿಯವನು. ಅದೇ ಗ್ರಾಮದ ರೂಪಾಳನ್ನ 9 ವರ್ಷದಿಂದೆ ಪ್ರೀತಿಸಿ ಮದ್ವೆಯಾಗಿದ್ದ. 2 ಮಕ್ಕಳು ಇದ್ವು. ಬೆಂಗಳೂರಲ್ಲಿ ಡ್ರೈವರ್​ ಆಗಿದ್ದ ಸತೀಶ್, ಹೆಂಡತಿ ಮಕ್ಕಳಿಗಾಗಿ ಶಿವನಿ ರೈಲ್ವೆ ಸ್ಟೇಷನ್ ಬಳಿ ಕೋಳಿ ಅಂಗಡಿ ಇಟ್ಕೊಂಡಿದ್ದ. ಸಂಸಾರ ಸುಖವಾಗಿರಲೆಂದು ಆತ ಬೀದಿಗೆ ಬಿದ್ರೆ, ಈಕೆ ಪರಪುರುಷನ ತೋಳಲ್ಲಿ ಬಂಧಿಯಾಗ್ತಿದ್ಲು. ಮನೆಗೆ ಬಂದಾಗ ಆ ಸಂದರ್ಭವನ್ನ ಕಣ್ಣಾರೆ ಕಂಡ ಸತೀಶ್, ಮಚ್ಚು ತೆಗೆದಿದ್ದೆ ಮಡದಿಯ ಜೊತೆಗಿದ್ದವನ ಮೇಲೆ ಬೀಸಿದ್ದಾನೆ. ಆತ ತಪ್ಪಿಸಿಕೊಂಡ ಬಳಿಕ ಹೆಂಡತಿಯ ತಲೆ ಕಡಿದು, ಬೈಕ್‍ನಲ್ಲಿ 20 ಕಿ.ಮೀ. ದೂರದ ಅಜ್ಜಂಪುರ ಠಾಣೆಗೆ ಕತ್ತಿ ಹಾಗೂ ರುಂಡ ಎರಡನ್ನೂ ತಂದು ಶರಣಾಗಿದ್ದಾನೆ. ಈತನನ್ನ ನೋಡಿದ ಅಜ್ಜಂಪುರ ಪೊಲೀಸರೇ ಒಂದು ಕ್ಷಣ ಬೆಚ್ಚಿ ನಿಂತಿದ್ರು.

ಪೊಲೀಸ್ ಠಾಣೆಗೆ ಬಂದವನೆ, ಕೈಯಲ್ಲಿದ್ದ ಚೀಲ ಕೆಳಗಿಟ್ಟು ಬ್ಯಾಗ್‍ನಿಂದ ತಲೆ ತೆಗೆದು ಸರ್, ಇದು ನನ್ನ ಹೆಂಡತಿಯದ್ದು ಸರ್ ಅಂದಿದ್ದಾನೆ. ಮುಖದಲ್ಲಿ ಆಕ್ರೋಶ, ಎಡಗೈಯಲ್ಲಿ ಮಚ್ಚು, ಬಲಗೈಯಲ್ಲಿ ರುಂಡ ಕಂಡು ಪೋಲಿಸರೇ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. ಪೊಲೀಸರ ಬಳಿಯೇ ಎರಡು ಲೋಟ ನೀರು ಕುಡಿದು ಘಟನೆಯನ್ನ ವಿವರಿಸಿದ್ದಾನೆ. ಸತೀಶ್-ರೂಪ ಜಗಳ ಹಲವು ಬಾರಿ ಠಾಣೆಗೂ ಬಂದಿದೆ. ಗಂಡ-ಮಕ್ಕಳು ಬೇಡೆಂದು ರೂಪ ಬರೆದು ಕೊಟ್ಟಿದ್ಲು. ಆದರೆ ದೊಡ್ಡವರು ರಾಜಿ ಮಾಡಿದರು.

ಮತ್ತದೇ ಚಾಳಿ ಮುಂದುವರೆಸಿರುವ ಕಾರಣಕ್ಕೆ ಸತೀಶ್ ಆಕೆಯ ತಲೆ ಕಡಿದು ರುಂಡವನ್ನ ರೈಲ್ವೆ ಸ್ಟೇಷನ್ ಬಳಿಯ ಪ್ಲಾಂಟೇಶನ್‍ನಲ್ಲಿ ಹಾಕಿ, ರುಂಡದೊಂದಿಗೆ ಠಾಣೆಗೆ ಬಂದಿದ್ದಾನೆ. ಬಂದವನು, ನನಗೆ ಯಾವ ಶಿಕ್ಷೆ ಕೊಡ್ತಿರೋ ಕೊಡಿ, ನಾನು ರಿಲೀಸ್ ಆದ ಮೇಲೆ ಓಡಿಹೋಗಿರೋ ಆತ ಎಲ್ಲೇ ಇದ್ರು, ಅವನನ್ನೂ ತೆಗೆದು ಮತ್ತೆ ಬರ್ತೀನಿ ಅಂದಿದ್ದಾನಂತೆ. ಆದ್ರೀಗ, ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತೆಂಬಂತೆ, ಮಕ್ಕಳ ಸ್ಥಿತಿ ಕಂಡು ಸ್ಥಳಿಯರೇ ಮರುಗುತ್ತಿದ್ದಾರೆ.

ಒಟ್ಟಾರೆ, ಪ್ರೀತಿ-ಮೋಸ-ಮರ್ಡರ್ ಮಿಸ್ಟರಿ ಕಾಫಿನಾಡು ಸೇರಿದಂತೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಆದ್ರೀಗ, ಅಮ್ಮ ಮಣ್ಣು ಸೇರಿದ್ಲು, ಅಪ್ಪ ಜೈಲು ಸೇರಿದ ಆ ಎರಡು ಪುಟ್ಟ ಕಂದಮ್ಮಗಳ ಭವಿಷ್ಯ ಹೇಗೆ, ಏನು ಅನ್ನೋದು ಯಕ್ಷಪ್ರಶ್ನೆಯಾಗಿದೆ. ಎದೆಮಟ್ಟದ ಮಕ್ಕಳಿದ್ದಾಗ್ಲು ಅಮ್ಮ ಮತ್ತೊಬ್ಬನಿಗೆ ಮನಸ್ಸು ಕೊಟ್ಲು, ಅಪ್ಪ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ. ಮಕ್ಕಳೀಗ ಅನಾಥವಾದ್ರು. ಆದ್ರೀಗ, ಮಕ್ಕಳ ಭವಿಷ್ಯದ ಬಗ್ಗೆ ಅಜ್ಜ-ಅಜ್ಜಿ ಮಾತ್ರ ಆತಂಕಕ್ಕೀಡಾಗಿದ್ದಾರೆ.
Loading...

 
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ