Crime News: ಪತ್ನಿ ಆಶಾ ಆತ್ಮಹತ್ಯೆಗೆ ಕಾರಣವಾದ ಅಲೀಂಗೆ 8 ವರ್ಷ ಕಠಿಣ ಜೈಲು ಶಿಕ್ಷೆ

ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಜೈಲುಶಿಕ್ಷೆ ತೀರ್ಪು ನೀಡಲಾಗಿದ್ದು, 8ವರ್ಷ ಕಠಿಣ ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು ಕೊಟ್ಟಿದೆ. ಅಲೀಂಪಾಷಾ ಶಿಕ್ಷೆಗೊಳಗಾದ ಅಪರಾಧಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು(ಏ.26): ಪತ್ನಿ ಆತ್ಮಹತ್ಯೆಗೆ (Suicide) ಕಾರಣವಾಗಿದ್ದ ಪತಿಗೆ ಜೈಲು ಶಿಕ್ಷೆಯಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಜೈಲುಶಿಕ್ಷೆ ತೀರ್ಪು ನೀಡಲಾಗಿದ್ದು, 8ವರ್ಷ ಕಠಿಣ ಶಿಕ್ಷೆ (Imprisonment) ನೀಡಿ ನ್ಯಾಯಾಲಯ ತೀರ್ಪು ಕೊಟ್ಟಿದೆ. ಅಲೀಂಪಾಷಾ ಶಿಕ್ಷೆಗೊಳಗಾದ ಅಪರಾಧಿ. ಪತ್ನಿ ಆಶಾಳನ್ನ ಪ್ರೀತಿಸಿ (Love) ಮದುವೆಯಾಗಿದ್ದ ಅಲೀಂ ಪಾಷಾ ವರದಕ್ಷಿಣೆ (Dowry) ತರುವಂತೆ ಪ್ರತಿದಿನ ಚಿತ್ರಹಿಂಸೆ ಕೊಡುತ್ತಿದ್ದ. ತವರು ಮನೆಯಿಂದ 2.30ಲಕ್ಷ ತಂದು ಕೊಟ್ಟಿದ್ದರೂ ಮತ್ತೆ ಮೂರು ಲಕ್ಷ ತರುವಂತೆ ಹಿಂಸಿಸಿದ್ದ ಅಲಿಂಪಾಷಾ ಹೆಂಡತಿಗೆ ಚಿತ್ರಹಿಂಸೆ ಕೊಡುತ್ತಿದ್ದ.

ಪತಿಯ ಕಿರುಕುಳ ತಾಳಲಾರದೆ 2018 ಸೆಪ್ಟಂಬರ್ 21ರಂದು ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ತುಮಕೂರು ನಗರದ ಪಿ.ಜಿ.ಲೇಔಟ್ ನಲ್ಲಿ ದಂಪತಿ ವಾಸವಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತುಮಕೂರು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಚ್‌.ಎಸ್.ಮಲ್ಲಿಕಾರ್ಜುನ ಸ್ವಾಮಿ ಅವರು ತೀರ್ಪು ನೀಡಿದ್ದು ಆಶಾಗೆ ನ್ಯಾಯ ಸಿಕ್ಕಿದೆ.

ವರದಕ್ಷಿಣೆ ಕಾಟ, ಮದುವೆಯಾಗಿ ಎರಡೇ ವರ್ಷಕ್ಕೆ ಕಣ್ಮುಚ್ಚಿದ ಮಗಳು

ವಯಸ್ಸು ಇನ್ನೂ 25 ವರ್ಷ ಅಷ್ಟೇ. ಆಗಲೆ ಈಗ ಜೀವನ ಸಾಕೆನಿಸಿ, ಬಾರದ ಲೋಕಕ್ಕೆ ಹೋಗಿದ್ದಾಳೆ. ಈಕೆ ಮೈಸೂರಿನ ಟಿ.ಕೆ. ಬಡಾವಣೆಯ (Layout) ನಿವಾಸಿ. ಮದುವೆಯಾದ ಎರಡೇ ವರ್ಷಕ್ಕೆ ನಂದಿನಿ ಈಗ ನೆನಪು ಮಾತ್ರವಾಗಿ ಉಳಿದಿದ್ದಾರೆ. ಗಂಡನ (Husband) ಹಾಗೂ ಅವರ ಮನೆಯವರ ವರದಕ್ಷಿಣೆ (Dowry) ದಾಹಕ್ಕೆ ನಂದಿನಿ‌ ಬಲಿಯಾಗಿದ್ದಾಳೆ.
ಅಂದ ಹಾಗೇ ಮೈಸೂರಿನ ಜೆ.ಪಿ. ನಗರದ ನಿವಾಸಿಗಳಾದ ಸಾವಿತ್ರಮ್ಮ ಮಹದೇವ ಶೆಟ್ಟಿ ಎಂಬುವವರು ಎರಡು ವರ್ಷಗಳ ಹಿಂದೆ ತಮ್ಮ ಮಗಳು ನಂದಿನಿ ವಿವಾಹ ಮಾಡಿದ್ದರಿ. ವಿಜಯ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ನೀಡಲಾಗಿತ್ತು.

ಇದನ್ನೂ ಓದಿ: Dowry Case: "ಅಮ್ಮ ಬೇಗ ಬಾ" ಎನ್ನುತ್ತಲೇ ಪ್ರಾಣ ಬಿಟ್ಟಳು ಮಗಳು! ವರದಕ್ಷಿಣೆಗಾಗಿ ಕೊಂದರಾ ಕಿರಾತಕರು?

ಒಂದೂವರೆ ಲಕ್ಷ ನಗದು, 50 ಗ್ರಾಂ ಚಿನ್ನ ನೀಡಿ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ಆದ ಕೆಲ ದಿನಗಳು ಎಲ್ಲವೂ ಚೆನ್ನಾಗಿಯೇ ಸಂಸಾರವು ಇತ್ತು. ಆದ್ರೆ ದಿನ ಕಳೆದಂತೆ ವಿಜಯನ ವರಸೆಯೇ ಬದಲಾಗಿತ್ತು.

ತನ್ನ ಕುಟುಂಬದ ಸದಸ್ಯರ ಜೊತೆ ಸೇರಿ ನಂದಿನಿಗೆ ವರದಕ್ಷಿಣೆಗಾಗಿ ಕಿರುಕುಳ ಕೊಡಲು ಆರಂಭಿಸಿದ್ದನಂತೆ. ಅಗಾಗ ಹಣ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಕಿರುಕುಳ‌ ನೀಡೋದು, ಹೊಡೆಯೋದು ಮಾಡುತ್ತಿದ್ದನಂತೆ. ಸರಿಯಾಗಿ ಕೆಲಸಕ್ಕೂ ಹೋಗದೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ

ಮಗಳು, ಅಳಿಯನಿಗೆ ಮನೆ ಮಾಡಿ ಕೊಟ್ಟಿದ್ದ ಹೆತ್ತವರು

ಗಂಡನ ಕಾಟ ತಾಳಲಾರದೇ ನಂದಿನಿ ತವರು ಮನೆಗೆ ಬಂದು ಕಣ್ಣೀರಾಗುತ್ತಿದ್ದಳು. ಹೀಗಾಗಿ ಈತನ ಕಾಟ ತಡೆಯಲಾರದೆೇ, ಮಗಳ ನೋವು ನೋಡಲಾಗದೆ 6 ತಿಂಗಳ ಹಿಂದೆ ನಂದಿನಿ ಪೋಷಕರೇ 4 ಲಕ್ಷ ಹಣ ನೀಡಿ, ಮೈಸೂರಿನ ಟಿ.ಕೆ ಬಡಾವಣೆಯಲ್ಲಿ ಮನೆ ಮಾಡಿ ಕೊಟ್ಟಿದ್ದಾರೆ.

ಇದನ್ನೂ ಓದಿ: Dowry: ಚಿನ್ನ, ಹಣ ಇನ್ನೂ ಕೊಟ್ಟಿಲ್ಲ, ನನಗೆ ಸರ್ಕಾರಿ ನೌಕರಿ ಇದೆ: ಮೂರು ಬಿಟ್ಟು ವರದಕ್ಷಿಣೆ ಕೇಳಿದ ವರನ ವಿಡಿಯೋ ನೋಡಿ

ಈ ನಡುವೆ ನಂದಿನಿಗೆ ಹೆಣ್ಣು ಮಗುವಾಗಿದೆ. ಮಗುವಾದ ನಂತರವೂ ಹಿಂಸೆ ಮತ್ತಷ್ಟು ಹೆಚ್ಚಾಗಿದೆ. ವಿಜಯ್ ಜೊತೆ ಅವರ ಮನೆಯವರು ಸೇರಿಕೊಂಡು ಮೃತ ನಂದಿನಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ.

“ನಿಮ್ಮ ಅಕ್ಕ ನೇಣು ಹಾಕಿಕೊಂಡಿದ್ದಾಳೆ” ಎಂದ ಭಾವ

ನಿನ್ನೆಯೂ ಇದ್ದಕ್ಕಿದ್ದಂತೆ ನಂದಿನಿ ತಂಗಿ ದೀಪಿಕಾಗೆ ಕರೆ ಮಾಡಿದ ವಿಜಯ್, ನಿಮ್ಮ ಅಕ್ಕ ನೇಣು ಹಾಕಿಕೊಂಡಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಅಂತಾ ಹೇಳಿದ್ದಾನೆ. ಆಸ್ಪತ್ರೆಗೆ ದೌಡಾಯಿಸಿ ಬಂದ ನಂದಿನಿ‌ ಮನೆಯವರಿಗೆ ಶಾಕ್ ಕಾದಿತ್ತು. ನಂದಿನಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
Published by:Divya D
First published: