• Home
  • »
  • News
  • »
  • state
  • »
  • ಹೆಂಡತಿಗೆ ನಿತ್ಯ ಚಿತ್ರಹಿಂಸೆ ನೀಡಿ, ಕೊಲೆಗೆ ಯತ್ನಿಸಿದ ಗಂಡ; ಗೃಹಿಣಿ ಕುಟುಂಬಸ್ಥರಿಂದ ದೂರು

ಹೆಂಡತಿಗೆ ನಿತ್ಯ ಚಿತ್ರಹಿಂಸೆ ನೀಡಿ, ಕೊಲೆಗೆ ಯತ್ನಿಸಿದ ಗಂಡ; ಗೃಹಿಣಿ ಕುಟುಂಬಸ್ಥರಿಂದ ದೂರು

ಗಂಡ ವೆಂಕಟಪ್ಪ ಮತ್ತು ಹೆಂಡತಿ ನಾಗಲಕ್ಷ್ಮೀ.

ಗಂಡ ವೆಂಕಟಪ್ಪ ಮತ್ತು ಹೆಂಡತಿ ನಾಗಲಕ್ಷ್ಮೀ.

ವೆಂಕಟಪ್ಪ ತನ್ನ ಹೆಂಡತಿ ನಾಗವೇಣಿಯ ಮೊಬೈಲ್ ಚೆಕ್​ ಮಾಡೋದು, ನಿತ್ಯ ಕುಡಿದು ಬಂದು ಗಲಾಟೆ ಮಾಡೋದು. ಮಕ್ಕಳ ಮುಂದೆ ಬೈಯ್ಯೋದು, ನಾನು ಸರ್ಕಾರಿ ಅಧಿಕಾರಿ ನಿಮ್ಮಿಂದ ನನ್ನ ಏನು ಮಾಡೋಕಾಗೋಲ್ಲ ಅಂತ ಬೆದರಿಸುವುದು ಅಲ್ಲದೇ, ಮನಸೋಇಚ್ಛೆ ಥಳಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ.

  • Share this:

ಮೈಸೂರು: ಸರ್ಕಾರಿ ಅಧಿಕಾರಿಗಳಿಂದ ಜನಸಾಮಾನ್ಯರು ಕಿರುಕುಳ ಅನುಭವಿಸೋದು ಸಹಜ. ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ತನ್ನ ಹೆಂಡತಿಗೆ ನಿತ್ಯ ಕಿರುಕುಳ ನೀಡಿ, ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.

ಹುಣಸೂರು ತಾಲೂಕಿನಲ್ಲಿ ಸಹಾಯಕ ಶಿಶು ಯೋಜನಾ ಅಧಿಕಾರಿಯಾಗಿರುವ ವೆಂಕಟಪ್ಪ ಎಂಬಾತ  1997ರಲ್ಲಿ ಮೈಸೂರಿನ  ನಾಗವೇಣಿ ಅಲಿಯಾಸ್ ಮಣಿ ಎಂಬುವರನ್ನು ಮದುವೆಯಾಗಿದ್ದ. ಮೈಸೂರು ತಾಲೂಕಿನ ಸೋಮನಾಥಪುರದಲ್ಲಿ ದಂಪತಿ ವಾಸವಾಗಿದ್ದರು. ಮದುವೆಯಾಗಿ 23 ವರ್ಷ ಕಳೆದು ಎರಡು ಮಕ್ಕಳಾಗಿದ್ದರೂ ಈತನ ದುರ್ಬುದ್ದಿ ಮಾತ್ರ ಒಂಚೂರು ಕಮ್ಮಿಯಾಗಿರಲಿಲ್ಲ. ಮದುವೆಯಾದ ದಿನದಿಂದಲೂ ಈತ ಹೆಂಡತಿ ಪೀಡಕನಾಗಿದ್ದ ಎನ್ನಲಾಗಿದೆ.

ಹೆಂಡತಿಗೆ ನಿರಂತರವಾಗಿ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ವೆಂಕಟಪ್ಪ ಹೆಂಡತಿಗೆ ಕೊಡಬಾರದ ಹಿಂಸೆ ನೀಡಿದ್ದಾನೆ. ವೆಂಕಟಪ್ಪ ತನ್ನ ಹೆಂಡತಿ ನಾಗವೇಣಿಯ ಮೊಬೈಲ್ ಚೆಕ್​ ಮಾಡೋದು, ನಿತ್ಯ ಕುಡಿದು ಬಂದು ಗಲಾಟೆ ಮಾಡೋದು. ಮಕ್ಕಳ ಮುಂದೆ ಬೈಯ್ಯೋದು, ನಾನು ಸರ್ಕಾರಿ ಅಧಿಕಾರಿ ನಿಮ್ಮಿಂದ ನನ್ನ ಏನು ಮಾಡೋಕಾಗೋಲ್ಲ ಅಂತ ಬೆದರಿಸುವುದು ಅಲ್ಲದೇ, ಮನಸೋಇಚ್ಛೆ ಥಳಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ. ಮಾರ್ಚ್3 ರಂದು ಇದೇ ರೀತಿ ಗಲಾಟೆ ಮಾಡಿ ನಾಗವೇಣಿಯನ್ನು ನೇಣು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅದಾದ ನಂತರ ತಾನೇ ನಾಗವೇಣಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ಮಗಳಿಗೆ ಹೃದಯಾಘಾತವಾಗಿದೆ, ನೇಣು ಹಾಕಿಕೊಂಡಿದ್ದಾಳೆ ಅಂತ ಹೇಳಿ ಪರಾರಿಯಾಗಿದ್ದಾನೆ ಎಂದು ನಾಗವೇಣಿ ಕುಟುಂಬಸ್ಥರು ಆರೋಪಿಸಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನು ಓದಿ: ಆಸ್ಪತ್ರೆಗೆ ದಾಖಲಾಗಲು ಒಲ್ಲೆ ಎಂದು ಓಡಿಹೋದ ಕೊರೋನಾ ಸೋಂಕು ಶಂಕಿತ

ಜಯಪುರ ಪೊಲೀಸ್ ಠಾಣೆಯಲ್ಲಿ ವೆಂಕಟಪ್ಪ ವಿರುದ್ದ ದೂರು ದಾಖಲಾಗಿದ್ದು, ವೆಂಕಟಪ್ಪ ನಾಪತ್ತೆಯಾಗಿದ್ದಾರೆ. ಆದರೆ ಆಸ್ಪತ್ರೆ ಮುಂಭಾಗ ಕುಟುಂಬಸ್ಥರು ನಮಗೆ ನ್ಯಾಯ ಕೊಡಿಸಿ ಅಂತ ಕಣ್ಣಿರಿಡುತ್ತಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗವೇಣಿ ಆರೋಗ್ಯ ಗಂಭೀರವಾಗಿದ್ದು, ಸಾವು-ಬದಕಿನ ನಡುವೆ ಹೋರಾಡುತ್ತಿದ್ದಾರೆ.


 

First published: