• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Kalaburagi: ಮದ್ವೆಗೆ ಮುಂಚೆ ನೀನೇ ನನ್ನ ಅಪ್ಸರೆ; ತಾಳಿ ಕಟ್ಟಿದ್ಮೇಲೆ ಕಪ್ಪು ಎಂದು ಕೊಂದೇ ಬಿಟ್ನಾ?

Kalaburagi: ಮದ್ವೆಗೆ ಮುಂಚೆ ನೀನೇ ನನ್ನ ಅಪ್ಸರೆ; ತಾಳಿ ಕಟ್ಟಿದ್ಮೇಲೆ ಕಪ್ಪು ಎಂದು ಕೊಂದೇ ಬಿಟ್ನಾ?

ಮಹಿಳೆಯ ಶವ ಪತ್ತೆ

ಮಹಿಳೆಯ ಶವ ಪತ್ತೆ

ಇದು ಆತ್ಮಹತ್ಯೆ ಮಾಡಿಕೊಳ್ಳುವ ಜಾಗವೂ ಅಲ್ಲ. ಶವ ಪತ್ತೆಯಾದ ಸ್ಥಳ ಎತ್ತರವಾಗಿಲ್ಲ. ಮಗಳು ಆತ್ಮಹತ್ಯೆ ಮಾಡಿಕೊಳ್ಳುವಳು ಅಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

 • News18 Kannada
 • 4-MIN READ
 • Last Updated :
 • Gulbarga, India
 • Share this:

aಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ (Kelluru, Jevargi) ಗೃಹಿಣಿ ಶವ ನೇಣು ಬಿಗಿದ (Dead body) ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಧವಾರ ಮಹಿಳೆಯ (Woman) ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮಹಿಳೆ ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. 30 ವರ್ಷದ ಫರ್ಜಾನಾ ಬೇಗಂ ಮೃತ ಮಹಿಳೆ. ಕೆಲವು ವರ್ಷಗಳ ಯಾದಗಿರಿ ಜಿಲ್ಲೆಯ ಶಹಪುರ (Shahapur, Yadagiri) ನಿವಾಸಿಯಾಗಿರುವ ಫರ್ಜಾನಾಳನ್ನು ಕೆಲ್ಲೂರ ಗ್ರಾಮದ ಖಾಜಾ ಪಟೇಲ್ ಜೊತೆ ಮದುವೆ (Marriage) ಮಾಡಿಕೊಡಲಾಗಿತ್ತು. ದಂಪತಿಗೆ ಎರಡು ಮಕ್ಕಳು ಸಹ ಇವೆ. ಫರ್ಜಾನಾಳ ಪತಿ ಇದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಹೇಳುತ್ತಿದ್ದಾನೆ.


ಕೃಷಿ ಕೆಲಸ ಮಾಡಿಕೊಂಡಿರುವ ಖಾಜಾ ಪಟೇಲ್ ಮದುವೆ ಮುಂಚೆ ನೀನೇ ನನ್ನ ಚಿನ್ನ, ರನ್ನ ಎಂದು ಹೇಳುತ್ತಿದ್ದನು. ಆದರೆ ಮದುವೆಯಾದ ಬಳಿಕ ನೀನು ಕಪ್ಪು ಎಂದು ಪತ್ನಿಯನ್ನು ಹೀಯಾಳಿಸುತ್ತಿದ್ದನಂತೆ. ಆದರೂ ಫರ್ಜಾನಾ ಸುಮ್ಮನಾಗಿದ್ದರು.  ಇದರ ಜೊತೆ ಚಿನ್ನಾಭರಣ ತರುವಂತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.


ಮಾನಸಿಕ ಕಿರುಕುಳ, ಹಲ್ಲೆ


ಮದುವೆ ಸಮಯದಲ್ಲಿಯೇ ಫರ್ಜಾನಾ ಕುಟುಂಬಸ್ಥರು 50 ಗ್ರಾಂ ಚಿನ್ನ ಮತ್ತು 50 ಸಾವಿರ ರೂಪಾಯಿ ನಗದು ನೀಡಿದ್ದರು. ಆದರೂ ಖಾಜಾನ ವರದಕ್ಷಿಣೆ ದಾಹ ನೀಗಿರಲಿಲ್ಲ. ಕೆಲವು ತಿಂಗಳಿನಿಂದ ಮಕ್ಕಳಿಬ್ಬರಿಗೂ ಮುಂಜವಿ ಮಾಡಿಸಬೇಕು ಎಂದು ನಿತ್ಯ ವರದಕ್ಷಿಣೆ ತರುವಂತೆ ಕಿರುಕುಳ ನೀಡುವದರ ಜೊತೆಗೆ ಹಲ್ಲೆ ಸಹ ನಡೆಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.


ಮನೆಯಲ್ಲಿ ಶವ ಪತ್ತೆ


ಇನ್ನು ಫರ್ಜಾನಾ ಸಾವನ್ನಪ್ಪಿರುವ ವಿಷಯವನ್ನು ತವರು ಮನೆಗೆ ಖಾಜಾ ಪಟೇಲ್ ತಿಳಿಸಿರಲಿಲ್ಲ. ನೆರೆಹೊರೆಯವರು ವಿಷಯ ತಿಳಿಸಿದ ಕೂಡಲೇ ಗ್ರಾಮಕ್ಕೆ ಪೋಷಕರು ದೌಡಾಯಿಸಿ ಪರಿಶೀಲನೆ ನಡೆಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಫರ್ಜಾನಾ ಶವ ಪತ್ತೆಯಾಗಿದೆ.


ಮಗಳನ್ನು ಕಳೆದುಕೊಂಡ ಪೋಷಕರ ಕಣ್ಣೀರು


ಮಗಳ ಕತ್ತ ಹಿಸುಕಿ ಕೊಲೆ ಮಾಡಲಾಗಿದೆ. ನಂತರ ಅನುಮಾನ ಬರದಿರಲಿ ಎಂದು ನೇಣು ಹಾಕಿದ್ದಾರೆ ಎಂದು ಫರ್ಜಾನಾ ಪೋಷಕರು ಆರೋಪಿಸಿದ್ದಾರೆ. ಇದು ಆತ್ಮಹತ್ಯೆ ಮಾಡಿಕೊಳ್ಳುವ ಜಾಗವೂ ಅಲ್ಲ. ಶವ ಪತ್ತೆಯಾದ ಸ್ಥಳ ಎತ್ತರವಾಗಿಲ್ಲ. ಮಗಳು ಆತ್ಮಹತ್ಯೆ ಮಾಡಿಕೊಳ್ಳುವಳು ಅಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.


ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲು


ಈ ಸಂಬಂಧ ಜೇರ್ವಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ಇದು ಕೊಲೆಯೋ? ಆತ್ಮಹತ್ಯೆಯೋ ಎಂದು ತಿಳಿದು ಬರಬೇಕಿದೆ.
ಬೈಕ್ ಕಳ್ಳರು ಅರೆಸ್ಟ್​


ಕಲಬುರಗಿ ನಗರ ಪೊಲೀಸರಿಗೆ ತಲೆ ನೋವಾಗಿದ್ದ ಬೈಕ್ ಕಳ್ಳರನ್ನ ಬಂಧಿಸಲಾಗಿದೆ. ಶಿವರಾಜ್ ಪೂಜಾರಿ , ಮರೇಪ್ಪ ಕುಂಚಿಕೊರವೇರ  ಮತ್ತು ಹುಸೇನಿ ಸಿರಂ ಬಂಧಿತರು.


ಬಂಧಿತರಿಂದ 21 ಲಕ್ಷ ಮೌಲ್ಯದ 23 ಬೈಕ್ ಗಳನ್ನ  ವಶಪಡಿಸಿಕೊಳ್ಳಿದ್ದಾರೆ. ಇದೇ ವೇಳೆ ಮಹಿಳೆಯಿಂದ ದೋಚಿದ್ದ ಒಂದು ಮೊಬೈಲನ್ನ ಕೂಡ ಸೀಜ್ ಮಾಡಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಕಲಬುರಗಿ ಸಿಟಿ ಪೊಲೀಸ್ ಕಮಿಷನರ್ 10 ಸಾವಿರ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.


ಇದನ್ನೂ ಓದಿ: Crime News: 16 ಬಾರಿ ಚುಚ್ಚಿ ಚುಚ್ಚಿ ಯುವತಿಯ ಕೊಲೆ; ಇದು ದಿನಕರ್-ಲೀಲಾ ಪ್ರೇಮ್ ಕಹಾನಿ


ಬೆಂಗಳೂರಿನಲ್ಲಿ ಭೀಕರ ಕೃತ್ಯ


ಬೆಂಗಳೂರಿನ ಕೋಣನಕುಂಟೆಯಲ್ಲಿ ಭೀಕರ ಕೃತ್ಯವೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಪುಟಾಣಿ ಮಕ್ಕಳನ್ನು ವಿಷ ಉಣಿಸಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಾಗೇಂದ್ರ ಎಂಬಾತ ಕೃತ್ಯಕ್ಕೆ ಆತನ ಪತ್ನಿ ವಿಜಯ, ಮಕ್ಕಳಾದ ನಿಶಾ, ದೀಕ್ಷಾ ಪ್ರಾಣ ಕಳೆದುಕೊಂಡಿದ್ದಾರೆ.


ನಾಗೇಂದ್ರ ಊಟದಲ್ಲಿ ತಿಗಣೆ ಔಷಧಿ, ಇಲಿ ಔಷಧ ಬೆರೆಸಿ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಆತನೂ ವಿಷ ಸೇವಿಸಿದ್ದಾನಾದರೂ ಅಸ್ವಸ್ಥನಾಗಿರುವ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು