ಕ್ಷುಲ್ಲಕ ಕಾರಣಕ್ಕೆ ಹೆಂಡತಿ-ಮಕ್ಕಳನ್ನು ಮನೆಯಿಂದ ಹೊರಹಾಕಿದ ಪತಿರಾಯ

ಉಟ್ಟ ಬಟ್ಟೆಯಲ್ಲೇ ಹೊರ ಬಂದ ಮಮತಾ ಭವಿಷ್ಯದ ದಾರಿ ಕಾಣದೆ ನ್ಯಾಯಕ್ಕಾಗಿ ಪೊಲೀಸರು ಹೇಳಿದಾಗೆಲ್ಲಾ ಸ್ಟೇಷನ್ ಬಾಗಿಲು ಕಾಯ್ತಿದ್ದಾರೆ. ಆದರೆ, ನ್ಯಾಯ ಮಾತ್ರ ಸಿಕ್ಕಿಲ್ಲ.

ಬೀದಿ ಪಾಲಾಗಿರುವ ಹೆಂಡತಿ-ಮಕ್ಕಳು

ಬೀದಿ ಪಾಲಾಗಿರುವ ಹೆಂಡತಿ-ಮಕ್ಕಳು

  • Share this:
ಚಿಕ್ಕಮಗಳೂರು(ನ.20): ಗಂಡನಿಗೆ ಕುಡಿಯಬೇಡ ಅಂದಿದ್ದೇ ತಪ್ಪಾಯ್ತು. ಮನೆ ಮಾಲೀಕನಿಗೆ ಮಕ್ಕಳನ್ನ ಕೆಲಸಕ್ಕೆ ಇಟ್ಕೊಳೋದು ತಪ್ಪಲ್ವಾ ಅಂತಾ ಪ್ರಶ್ನೆ ಮಾಡಿದ್ದೇ ಕೆಂಗಣ್ಣಿಗೆ ಕಾರಣವಾಯ್ತು. ಪರಿಣಾಮ, ಪತ್ನಿ, ಇಬ್ಬರು ಮಕ್ಕಳು, ಅತ್ತೆಗೆ ಮನೆಯಿಂದಲೇ ಗೇಟ್ ಪಾಸ್. ! ಸದ್ಯ ಬೀದಿಗೆ ಬಂದಿರೋ ನಾಲ್ವರು, ನಮ್ಮನ್ನ ಬದುಕಲು ಬಿಡಿ ಅಂತಾ ಅಂಗಲಾಚುತ್ತಿದ್ದಾರೆ. ಗೃಹಿಣಿ ಮಮತಾ ಹಾಗೂ ಆಕೆಯ ಇಬ್ಬರು ಮಕ್ಕಳು ಮತ್ತು ಆಕೆಯ ತಾಯಿ ಈಗ ಬೀದಿಯಲ್ಲಿದ್ದಾರೆ. ಇವರು ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರು ನಿವಾಸಿಗಳು. ಮನೆಯಿಂದ ಹೊರಹಾಕಿದವನ ಹೆಸ್ರು ಸುರೇಶ್ ಅಲಿಯಾಸ್ ಎಣ್ಣೆ ಮಾಸ್ಟ್ರು. ಬೇಕರಿ ಕೆಲಸ ಮಾಡಿಕೊಂಡಿದ್ದ. ಈತ ಈಗ ಕುಡಿದು ಗಲಾಟೆ ಮಾಡೋದೆ ಕೆಲಸ. ಮಮತಾ ಬೆಂಗಳೂರಲ್ಲಿ ಮನೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳ ಜೊತೆ ಗಂಡನನ್ನೂ ಸಾಕ್ತಿದ್ಳು. ಆದ್ರೆ ಯಲ್ಲಮ್ಮ ಮಾತ್ರ ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ರು.

ಈ ಯಲ್ಲಮ್ಮನ ಮಗನ ಮಗುವನ್ನ ಬಾಡಿಗೆ ಮನೆಯ ಕೆಲಸಕ್ಕೆ ಇಟ್ಟುಕೊಂಡಿದ್ದ. ಬಟ್ಟೆ ತೊಳೆಯೋದು, ಮದ್ಯ ತರಿಸೋದು, ಹಾಲು ಹಾಕಿಸೋದು, ಹೊಲ-ಗದ್ದೆ ತೋಟದ ಕೆಲಸ ಮಾಡಿಸೋದನ್ನ ಮನೆ ಮಾಲೀಕ ಮಾಡಿಸ್ತಿದ್ನಂತೆ. ವಿಷಯ ತಿಳಿದು ಬೆಂಗಳೂರಿಂದ ಬಂದ ಮಮತಾ ಮನೆ ಮಾಲೀಕರಿಗೆ ಪ್ರಶ್ನಿಸಿದ್ದಾರೆ. ಓದೋ ಹುಡುಗ, ಹೀಗೆ ಮಾಡಿದ್ರೆ ಅವನ ಭವಿಷ್ಯ ಹಾಳಾಗೋದಿಲ್ಲವಾ ಎಂದು ಕೇಳಿದ್ದಾರಂತೆ. ಅಷ್ಟಕ್ಕೆ ಮನೆ ಮಾಲೀಕ ಸತೀಶ್ ಪಿತ್ತ ನೆತ್ತಿಗೇರಿತ್ತು. ಅಜ್ಜಿ ದೇವರಂತೆ ಇದ್ದಾಳೆ. ಇವಳ್ಯಾರು ಗಯ್ಯಾಳಿ ಎಂದು ಎಲ್ಲರನ್ನೂ ಮಮತಾ ಪತಿ ಸುರೇಶ್ ಜೊತೆ ಸೇರಿ ಎಲ್ಲರನ್ನ ಮನೆಯಿಂದಲೇ ಹೊರಹಾಕಿದ್ದಾನೆ. ಆ 13 ವರ್ಷದ ಹುಡುಗನನ್ನ ಬಿಟ್ಟು. ಮಮತಾ, ತಾಯಿ-ಮಕ್ಕಳೊಂದಿಗೆ ಉಟ್ಟ ಬಟ್ಟೆಯಲ್ಲಿ ಬಂದು ದಾರಿಹೋಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಹೀಗೆ ಮನೆ ಮಾಲೀಕ ಮಮತಾ ಹಾಗೂ ತಾಯಿ-ಮಕ್ಕಳನ್ನ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಹಾಕಿದ ಮೇಲೆ ಇವರೆಲ್ಲರೂ ಬಸ್ ಸ್ಟ್ಯಾಂಡ್, ಪಾರ್ಕ್ ನಲ್ಲಿ ಎರಡು ದಿನ ಕಾಲ ಕಳೆದಿದ್ದಾರೆ. ವಾಕ್ ಹೋದ ಪರಿಚಯಸ್ಥ ಮಹಿಳೆಯೊಬ್ಬರು ಇವರನ್ನ ಕಂಡು ವಿಚಾರಿಸಿ ಕೆಲ ದಿನಗಳಿಂದ ಮನೆಯಲ್ಲಿಟ್ಟುಕೊಂಡು ಸಾಕುತ್ತಿದ್ದಾರೆ. ಅಕ್ಕ-ಪಕ್ಕದವರ ಕೊಟ್ಟ ಬಟ್ಟೆ ಹಾಕಿಕೊಂಡು ದಿನ ದೂಡುತ್ತಿದ್ದಾರೆ.

ಕಾಂಗ್ರೆಸ್ಸಿಗರಿಂದಲೇ ಆಂತರಿಕವಾಗಿ ಪಕ್ಷ ದುರ್ಬಲಗೊಳ್ಳುತ್ತಿದೆ; ನಾಯಕರ ವಿರುದ್ಧ ಖರ್ಗೆ ಕಿಡಿ

ಇನ್ನು ವೃದ್ಧೆ ಯಲ್ಲಮ್ಮಗೆ ಎರಡೂ ಕಾಲುಗಳು ವೆರಿಕೋಸ್ ಖಾಯಿಲೆಗೆ ಒಳಗಾಗಿವೆ. ವೈದ್ಯರು ಎರಡೂ ಕಾಲನ್ನ ಮಂಡಿಯಿಂದ ಕೆಳಗೆ ಕತ್ತರಿಸಬೇಕು ಎಂದಿದ್ದಾರೆ. ಆದರೆ, ಉಟ್ಟ ಬಟ್ಟೆಯಲ್ಲೇ ಹೊರ ಬಂದ ಮಮತಾ ಭವಿಷ್ಯದ ದಾರಿ ಕಾಣದೆ ನ್ಯಾಯಕ್ಕಾಗಿ ಪೊಲೀಸರು ಹೇಳಿದಾಗೆಲ್ಲಾ ಸ್ಟೇಷನ್ ಬಾಗಿಲು ಕಾಯ್ತಿದ್ದಾರೆ. ಆದರೆ, ನ್ಯಾಯ ಮಾತ್ರ ಸಿಕ್ಕಿಲ್ಲ.

ವಾಸವಿದ್ದ ಬಾಡಿಗೆ ಮನೆ ಬಳಿ ಹೋಗುತ್ತಿದ್ದಂತೆ ಮದ್ಯದ ದಾಸನಾಗಿರೋ ಮಮತಾ ಪತಿ ಸುರೇಶ್​​ಗೆ ಮನೆ ಮಾಲೀಕ ಎಣ್ಣೆ ಹೊಡೆಸಿ ಗಲಾಟೆಗೆ ಬಿಡುತ್ತಾನಂತೆ. ಈಗ ಗಂಡ ಹಾಗೂ ಮನೆ ಮಾಲೀಕ ಸತೀಶ್ ಎಂಬುವರಿಂದ ಜೀವನವೇ ಬೇಜಾರಾಗಿದೆ ಅಂತಾರೆ ಮಮತಾ. ಇನ್ನು ಇಷ್ಟೆಲ್ಲಾ ಆದಮೇಲೆ ನಾನು ಬದುಕುಬೇಕಾ ಅಂತಾ ಮಮತ ಡೆತ್ ನೋಟ್ ಬರೆದಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂದುಕೊಂಡಿದ್ರು, ಆದ್ರೆ ಪರಿಚಯಸ್ಥ ಮಹಿಳೆಯೊಬ್ಬರ ಆಸರೆಯಿಂದ ಜೀವ ಉಳಿಸಿಕೊಂಡು ಬದುಕು ದೂಡುತ್ತಿದ್ದಾರೆ. ಅಷ್ಟೆ ಅಲ್ದೆ, ಆ ಹಿರಿ ಜೀವ ಕೂಡ ಇಳಿವಯಸ್ಸಲ್ಲಿ ಕಂಡವರ ಮನೆಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಕೊನೆ ಪಕ್ಷ ನೆಮ್ಮದಿಯಿಂದ ಹೊರಗಡೆಯಾದ್ರೂ ಬದುಕೋಣ ಅಂತಾ ಇದ್ರೆ ಮಮತಾಳ ಪತಿ ಬಿಡ್ತಿಲ್ಲವಂತೆ. ಕುಡಿದು ಬಂದು ಗಲಾಟೆ ಮಾಡೋದು, ಹೊಡೆಯೋದು ಮಾಡ್ತಿದ್ದಾನಂತೆ. ಇದರಿಂದ ಬೇಸತ್ತು ಹೋಗಿರೋ ಮಮತಾ ಪೊಲೀಸರಿಗೂ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಮಾತ್ರ ಸ್ಪಂದಿಸುತ್ತಿಲ್ಲ, ಹೀಗಾದ್ರೆ ಜೀವನ ಹೇಗೆ ಮಾಡೋದು ಅನ್ನೋದು ನೊಂದ ಮಹಿಳೆ ಅಳಲು. ಒಟ್ಟಿನಲ್ಲಿ ಪೊಲೀಸ್ರು ಇನ್ನಾದ್ರೂ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದು, ಬೀದಿಗೆ ಬಿದ್ದವರ ನೋವಿಗೆ ಸ್ಪಂದಿಸಬೇಕಿದೆ.
Published by:Latha CG
First published: