News18 India World Cup 2019

ಅಕ್ರಮ ಸಂಬಂಧಕ್ಕೆ ಬಲಿಯಾದ ಗಂಡ ಪ್ರಿಯಕರ, ಹೆಂಡತಿ ಮಾಡಿದ್ದೇನು ಗೊತ್ತಾ?

news18
Updated:September 12, 2018, 12:43 PM IST
ಅಕ್ರಮ ಸಂಬಂಧಕ್ಕೆ ಬಲಿಯಾದ ಗಂಡ ಪ್ರಿಯಕರ, ಹೆಂಡತಿ ಮಾಡಿದ್ದೇನು ಗೊತ್ತಾ?
news18
Updated: September 12, 2018, 12:43 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.12) :  ಅಕ್ರಮ ಸಂಬಂಧ ಹಿನ್ನೆಲೆ ಗಂಡನನ್ನೇ ಪ್ರಿಯಕರನೊಂದಿಗೆ ಹೆಂಡತಿ ಕೊಲೆ ಮಾಡಿಸಿದ ಘಟನೆ ಜರುಗಿದೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ನಾಲ್ಕು ದಿನಗಳ ಹಿಂದೆ ಎಂ ಬಿ ಅಯ್ಯನಹಳ್ಳಿ ಗ್ರಾಮದ ರಸ್ತೆ ತಗ್ಗಿನ ಬಳಿ ಟ್ಯಾಕ್ಸ್ ಕಾರು ನಿಂತಿತ್ತು. ಇದರಲ್ಲಿ ಫಯಾಜ್ ಅನುಮಾನಸ್ಪದವಾಗಿ ಮೃತನಾಗಿದ್ದ. ಖಾನಾ ಹೊಸಹಳ್ಳಿ ಪೊಲೀಸರು ಕೊಲೆ ಶಂಕೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದಾಗ ಆರೋಪಿತರು ಕೊಲೆಯಾದ ನಾಲ್ಕು ದಿನಗಳಿಗೇ ಸೆರೆಯಾಗಿದ್ದಾರೆ.

ಗಂಡ ಫಯಾಜ್ ಸಾವಿಗೆ ಪತ್ನಿ ಫಾಮಿದಾಬಾನು ಹಾಗೂ ಪ್ರಿಯಕರ ಲೈನ್ ಮ್ಯಾನ್ ನೂರುಲ್ಲಾ ಕಾರಣವಾಗಿದೆ. ಇವರಿಬ್ಬರ ಅಕ್ರಮ ಸಂಬಂಧ ರೆಡ್ ಹ್ಯಾಂಡ್ ಗೆ ಸಿಕ್ಕಬಿದ್ದಾಗ ಮನೆಯಲ್ಲಿ ಸಾಕಷ್ಟು ಜಗಳವಾಗಿದೆ. ಗಲಾಟೆಯಾದ ನಂತರ ಪ್ರಿಯಕರ ನೂರುಲ್ಲಾ ಹಾಗೂ ಪತ್ನಿ ಫಾಮಿದಾಬಾನು ಗಂಡ ಫಯಾಜ್ ನನ್ನು ಒಡೆದು ಸಾಯಿಸಿದ್ದಾರೆ.

ಆನಂತರ ಗಂಡನ ಟ್ಯಾಕ್ಸಿ ಕಾರಿನಲ್ಲಿ ಮೃತದೇಹ ಇರಿಸಿ ತುಸು ದೂರದ ರಸ್ತೆ ಬದಿ ತಗ್ಗಿನ ಪ್ರದೇಶದಲ್ಲಿ ಕಾರು ಬಿಟ್ಟು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಎನ್ನುವ ರೀತಿ ಸೀನ್ ಕ್ರಿಯೇಟ್ ಮಾಡಲು ಪ್ರಯತ್ನಿಸಿದ್ದಾರೆ.

ಆದರೆ ಖಾನಾ ಹೊಸಹಳ್ಳಿ ಪೊಲೀಸರು ಆರೋಪಿಗಳಿಬ್ಬರ ಚಲನವಲನ ಹಾಗೂ ಫೋನ್ ಕರೆ ಆಧಾರದ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
Loading...

 
First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...