HOME » NEWS » State » HUSBAND KILLS MAN WHO HAD A ILLEGAL AFFAIR WITH HIS WIFE IN GUNDLUPETE NCHM SESR

ಪ್ರಿಯಕರನೊಂದಿಗೆ ಮಲಗಿದ್ದ ಹೆಂಡತಿ; ರೆಡ್​ಹ್ಯಾಂಡ್​ ಆಗಿ ಸಿಕ್ಕವನ ಭೀಕರ ಕೊಲೆ ಮಾಡಿದ ಗಂಡ

ಪತ್ನಿಯ ಪ್ರಿಯಕರನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ

news18-kannada
Updated:May 20, 2021, 6:02 PM IST
ಪ್ರಿಯಕರನೊಂದಿಗೆ ಮಲಗಿದ್ದ ಹೆಂಡತಿ; ರೆಡ್​ಹ್ಯಾಂಡ್​ ಆಗಿ ಸಿಕ್ಕವನ ಭೀಕರ ಕೊಲೆ ಮಾಡಿದ ಗಂಡ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜ‌ನಗರ (ಮೇ. 20) : ವಿವಾಹಿತ ಮಹಿಳೆಯೊಬ್ಬಳು  ತನ್ನ  ಪ್ರಿಯಕರನೊಂದಿಗೆ ಇರುವಾಗಲೇ  ಗಂಡನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದು, ರೊಚ್ಚಿ ಗೆದ್ದ ಗಂಡ ದೊಣ್ಣೆಯಿಂದ ಹೊಡೆದು ಪತ್ನಿಯ ಪ್ರಿಯಕರನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸವಶೆಟ್ಡಿ ಕೊಲೆಯಾದ ವ್ಯಕ್ತಿಯಾಗಿದ್ದು ಈತನನ್ನು ಕೊಲೈಗೈದ ಶಿವಣ್ಣ ಗುಂಡ್ಲುಪೇಟೆ ಪೊಲೀಸರಿಗೆ ಶರಣಾಗಿದ್ದಾನೆ.

ಘಟನೆಯ ವಿವರ:

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಸವಶೆಟ್ಟಿ  ಎಂಬಾತನಿಗೆ ಅದೇ ಗ್ರಾಮದ ವಿವಾಹಿತ ಮಹಿಳೆ ಸೌಭಾಗ್ಯಳ ಜೊತೆ ಕಳೆದ ಐದು ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಈ ವಿಚಾರ ಇಡೀ ಗ್ರಾಮದಲ್ಲಿ ಪ್ರಚಾರಗೊಂಡಿತ್ತು. ಈ ವಿಚಾರ ಗೊತ್ತಾಗಿ  ಬಸವ ಶೆಟ್ಟಿಗೆ  ಬುದ್ದಿವಾದ ಹೇಳಿದ ಆತನ ಪೋಷಕರು ಕಳೆದ ಎರಡು ವರ್ಷಗಳ ಹಿಂದೆ ಮದುವೆ  ಸಹ ಮಾಡಿದ್ದರು. ಆದರೆ , ಮದುವೆಯಾದ ಮೂರೇ ದಿನಕ್ಕೆ ಬಸವಶೆಟ್ಟಿಯ ಪತ್ನಿಗೆ ಗೆ ಕರೆ ಮಾಡಿದ ಸೌಭಾಗ್ಯ  ತನ್ನ ಅಕ್ರಮ ಸಂಬಂಧದ ಬಗ್ಗೆ ಹೇಳಿದ್ದಳು. ಹೀಗಾಗಿ ಮದುವೆಯಾದ  ಮೂರೇ ದಿನಕ್ಕೆ ಬಸವಶೆಟ್ಟಿ ವೈವಾಹಿಕ ಜೀವನ ಮುರಿದು ಬಿದ್ದಿತ್ತು.

ಇದನ್ನು ಓದಿ: ಲಾಕ್​ಡೌನ್​ ಎಫೆಕ್ಟ್​​: ಆದಾಯ ನಷ್ಟದಲ್ಲಿ ದೇವಾಲಯಗಳು; ಸಿ ಗುಂಪಿನ ದೇವಸ್ಥಾನಗಳ ಸಹಾಯಕ್ಕೆ ಬಂದ ಸರ್ಕಾರ

ಇದರಿಂದ  ಕುಪಿತಗೊಂಡ ಬಸವಶೆಟ್ಟಿ ತಾನು ಸೌಭಾಗ್ಯಳಿಗೆ ಮುತ್ತುಕೊಡುವ ಹಾಗೂ ಒಟ್ಟಿಗೆ ಇರುವ ಫೋಟೊಗಳನ್ನು ತನ್ನ ಮೊಬೈಲ್ ವಾಟ್ಸ್ ಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ. ಈ ಫೋಟೋಗಳು ಭೀಮನ ಬೀಡು ಗ್ರಾಮದಲ್ಲಿ ಸಾಕಷ್ಟು ವೈರಲ್ ಸಹ ಆಗಿದ್ದವು. ಕೊನೆಗೆ ಈ ವಿಚಾರ ಸೌಭಾಗ್ಯಳ ಗಂಡ ಶಿವಣ್ಣನಿಗೆ ತಿಳಿದು ಪತ್ನಿಯ ಜೊತೆ ಆಗಾಗ್ಗೆ ಜಗಳ ನಡೆಯುತ್ತಲೇ ಇರುತ್ತದೆ.  ಇಷ್ಟಾದರೂ ಸುಮ್ಮನಿರದ ಬಸವಶೆಟ್ಟಿ ಸೌಭಾಗ್ಯಳ ಜೊತೆ ತನ್ನ ಅಕ್ರಮ ಸಂಬಂಧ ಮುಂದುವರಿಸಿದ್ದ.

ಇದನ್ನು ಓದಿ: ಪ್ರೆಗ್ನೆಸಿ ಪರೀಕ್ಷೆಯಂತೆ ಇನ್ಮುಂದೆ ಮನೆಯಲ್ಲಿಯೇ ನಡೆಸಬಹುದು ಕೊರೋನಾ ಟೆಸ್ಟ್​; ಮಾರುಕಟ್ಟೆಗೆ ಬರಲಿದೆ ಕೋವಿಸೆಲ್ಫ್​ ಕಿಟ್

ನಿನ್ನೆ ರಾತ್ರಿ ಸಹ  ಸೌಭಾಗ್ಯಳ ಗಂಡ ಶಿವಣ್ಣ ಊರಿನಲ್ಲಿ ಇಲ್ಲವೆಂದು ತಿಳಿದ ಬಸವ ಶೆಟ್ಟಿ ಸೌಭಾಗ್ಯಳ  ಮನೆಗೆ  ಬಸವಶೆಟ್ಟಿ ಬಂದಿದ್ದ.  ಆದರೆ  ಹೊರಹೋಗಿದ್ದ ಸೌಭಾಗ್ಯಳ ಪತಿ ಶಿವಣ್ಣ ರಾತ್ರಿ ವಾಪಸ್ ಮನೆಗೆ ಬಂದಾಗ  ತನ್ನ ಪತ್ನಿ ಯ ಜೊತೆ ಬಸವ ಶೆಟ್ಟಿ ಮಲಗಿರುವುದನ್ನು ಕಣ್ಣಾರೆ ನೋಡಿದ್ದಾನೆ.  ಇದರಿಂದ ರೊಚ್ಚಿಗೆದ್ದ  ಶಿವಣ್ಣ, ಬಸವಶೆಟ್ಟಿಗೆ ದೊಣ್ಣೆಯಿಂದ ಮನಬಂದಂತೆ ಹೊಡೆದಿದ್ದಾನೆತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಬಸವಶೆಟ್ಟಿಯನ್ನ ಗ್ರಾಮಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಬಸವಶೆಟ್ಟಿ  ಹಾಗೂ ಸೌಭಾಗ್ಯಳ ಅಕ್ರಮ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ನಿನ್ನೆ ರಾತ್ರಿ ಅವಳೇ  ಮನೆಯಲ್ಲಿದ್ದ ನನ್ನ ತಮ್ಮ ಬಸವ ಶೆಟ್ಟಿ ಗೆ  ಫೋನ್ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ ಎಂದು ಕೊಲೆಗೀಡಾದ ಬಸವ ಶೆಟ್ಟಿಯ ಸಹೋದರಿ ಮಂಗಳ ತಿಳಿಸಿದ್ದಾರೆ.  ಸೌಭಾಗ್ಯಳ  ಗಂಡ ಶಿವಣ್ಣ ಒಬ್ಬನೇ ಕೊಲೆ  ಮಾಡಲು ಸಾಧ್ಯವಿಲ್ಲ, ಶಿವಣ್ಣನ ತಂದೆಯೇ ಈ ಕೊಲೆಯನ್ನು ಮಾಡಿದ್ದಾನೆ  ಎಂದು ಅವರು ಆರೋಪಿಸಿದ್ದಾರೆ

(ವರದಿ: ಎಸ್.ಎಂ.ನಂದೀಶ್)
Published by: Seema R
First published: May 20, 2021, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories