ತವರು ಸೇರಿದ್ದ ಹೆಂಡತಿನ ಪುಸಲಾಯಿಸಿ ಜೊತೆ ಸೇರಿದ್ದ.. ಮಧ್ಯರಾತ್ರಿ ಹರಿಯಿತು ರಕ್ತದ ಕೋಡಿ..!

ಪತ್ನಿಯ ಶೀಲ ಶಂಕಿಸಿ ಪತಿ ಹಣಮಂತ ಕಾಟ ಕೊಡುತ್ತಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಾರದಾ ಗಂಡನ ಮನೆ ತೊರೆದು 15 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು.  

ಆರೋಪಿ ಹಣಮಂತ

ಆರೋಪಿ ಹಣಮಂತ

 • Share this:
  ವಿಜಯಪುರ : ಸಂಸಾರಕ್ಕೆ ನಂಬಿಕೆಯೇ ಆಧಾರ, ಅನುಮಾನವೇ ದೊಡ್ಡ ಶತ್ರು ಎಂಬ ಈ ಸಂಸಾರದಲ್ಲೂ ಸಾಬೀತಾಗಿದೆ. ಗಂಡ-ಹೆಂಡತಿ, ಮೂವರು ಮಕ್ಕಳಿರುವ ಸುಂದರ ಕುಟುಂಬ ಅನುಮಾನವೆಂಬ ಭೂತಕ್ಕೆ ಬಲಿಯಾಗಿದೆ. ಹೆಂಡತಿಯ ಶೀಲ ಶಂಕಿಸಿ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ನೆತ್ತರು ಹರಿದಿದೆ. ಬಸವನ ಬಾಗೇವಾಡಿ ತಾಲೂಕಿನ ಸಿಂದಗೇರಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ನಿ ಶಾರದಾರನ್ನು ಪತಿ ಹಣಮಂತ ಕೊಲೆ ಮಾಡಿದ್ದಾನೆ.

  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಾರದಾ ಗಂಡನ ಮನೆ ತೊರೆದು 15 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು.  ನಿನ್ನೆ ಸಂಜೆ ಹೆಂಡತಿ ಮನೆಗೆ ಬಂದ ಪತಿ ಹಣಮಂತ ಊಟ ಮಾಡಿ ಮಲಗಿದ್ದಾನೆ. ಮನೆಗೆ ಅಳಿಯ ಬಂದ ಕಾರಣ ಶಾರದಾ ಕುಟುಂಬಸ್ಥರು ಮನೆಯ ಹೊರಭಾಗದಲ್ಲಿ‌ ಮಲಗಿದ್ದಾರೆ. ಶಾರದಾ, ಹಣಮಂತ ಹಾಗೂ ಮೂವರು ಮಕ್ಕಳು ಮನೆಯ ಒಳಗೆ ಮಲಗಿದ್ದಾರೆ.

  ಶಾರದಾಳನ್ನ ಕೊಲೆ‌ ಮಾಡುವ ಉದ್ದೇಶದಿಂದಲೇ ಬಂದಿದ್ದ ಹಣಮಂತ ಹೆಂಡತಿಯ ಮನೆಗೆ ಬರುವಾಗ ಕಬ್ಬು ಕಟಾವ್ ಮಾಡುವ ಕೊಯಿತಾ ಜೊತೆಗೆ ತಂದು ಯಾರಿಗೂ ಗೊತ್ತಾಗದ ಹಾಗೆ ಬಚ್ಚಿಟ್ಟಿದ್ದ. ತಡರಾತ್ರಿ ಎದ್ದು ಕಬ್ಬು ಕಟಾವ್ ಮಾಡೋ ಕೊಯಿತಾದಿಂದ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಯಿತಾದಿಂದ ಕುತ್ತಿಗೆ ಸೀಳಿದ ಕಾರಣ ಶಾರದಾಳಿಗೆ ಕೂಗಾಡಲೂ ಆಗಿಲ್ಲ. ಆದರೆ ಪಕ್ಕದಲ್ಲೇ ಮಲಗಿದ್ದ ಮಕ್ಕಳು ರಕ್ತ ಚಿಮ್ಮಿದ ಬಳಿಕ ಎಚ್ಚರಗೊಂಡು ನೋಡಿದಾಗ, ತಾಯಿ ‌ರಕ್ತದ ಮಡುವಿನಲ್ಲಿ‌ ಬಿದ್ದಿದ್ದಳು. ಅಪ್ಪನ ಕ್ರೌರ್ಯ ನೋಡಿದ ಮಕ್ಕಳು ಕೂಗಾಡಿದ್ದಾರೆ. ಕೂಡಲೇ ಸುತ್ತಮುತ್ತಲಿನ ಜನ ಆಗಮಿಸಿ ಕೊಲೆ ಮಾಡಿದ‌ ಹಣಮಂತನಿಗೆ ಹಿಗ್ಗಾಮುಗ್ಗಾ ಥಳಿಸಿ‌ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಣ್ಣುದುರೇ ತಾಯಿಯ ಸಾವನ್ನು ಕಂಡು ಮಕ್ಕಳು ಕಣ್ಣಿರಾಕಿದ್ದಾರೆ.

  ಮೃತ ಶಾರದಾ


  ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದವನಾದ ಹಣಮಂತ 10 ವರ್ಷಗಳ ಹಿಂದೆ ಅದೇ ತಾಲೂಕಿನ ಸಿಂದಗೇರಿ ಗ್ರಾಮದ ಶಾರದಾಳನ್ನು‌ ಮದುವೆಯಾಗಿದ್ದ. ಎರಡು ಹೆಣ್ಣ, ಒಂದು ಗಂಡು ಸೇರಿ ಮೂವರು ಮಕ್ಕಳಿದ್ದಾರೆ. ಇಬ್ಬರೂ‌ ಕೂಲಿ‌‌ ಕೆಲಸ ಮಾಡುತ್ತಿದ್ದರು. ಮದುವೆಯಾದ ಆರಂಭದಲ್ಲಿ ‌ಕೆಲಕಾಲ ಚೆನ್ನಾಗಿದ್ದರು. ಆದರೆ ದಿನ‌‌ ಕಳೆದಂತೆ ಇಬ್ಬರು ‌ನಡುವೆ ಕೌಟುಂಬಿಕ ಕಲಹ ಹೆಚ್ಚಾಗ ತೊಡಗಿತು. ಗ್ರಾಮದ ಹಿರಿಯರು ಎರಡು‌ ಕುಟುಂಬದ ಸದಸ್ಯರು ಮಾತುಕತೆ ಮೂಲಕ ಸಮಸ್ಯೆ ಪರಿಹಾರ ಮಾಡುತ್ತಿದ್ದರು.

  ಇದನ್ನೂ ಓದಿ: ಡಾಕ್ಟರ್ಸ್ ಡೇಯಂದೇ ವೈದ್ಯ ದಂಪತಿ ಸಾವು: ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ!

  ಆದರೆ ಕಳೆದ 15 ದಿನಗಳ‌ ಹಿಂದೆ ಶಾರದಾ ಶೀಲದ ಮೇಲೆ ಸಂಶಯಗೊಂಡ ಆಕೆಯೊಂದಿಗೆ ಹಣಮಂತ ಗಲಾಟೆ ಮಾಡಿದ್ದು, ಇದರಿಂದಾಗಿ ಗಂಡನ ಮನೆ ಬಿಟ್ಟು ತವರು ಬಂದಿದ್ದಳು. ನಿನ್ನೆ ತವರು ಮನೆಯಲ್ಲಿದ್ದ ಶಾರದಾಳ ಬಳಿ‌ ಬಂದು ಮಾತನಾಡಿ ಅಲ್ಲೇ ಮಲಗಿದ್ದು, ರಾತ್ರಿ ವೇಳೆಯಲ್ಲಿ ಆಕೆಯನ್ನ ಕೊಲೆ ಮಾಡಿದ್ದಾನೆ. ಏನು ಅರಿಯದ ಮೂರು ಮಕ್ಕಳು ಅನಾಥವಾಗಿವೆ.

  ವರದಿ: ಗುರುರಾಜ್ ಗದ್ದನಕೇರಿ
  Published by:Kavya V
  First published: