Wife Murder: ಜೊತೆಗೆ ಬದುಕಲಿಲ್ಲ, ಬದುಕಲೂ ಬಿಡಲಿಲ್ಲ! ಕೋರ್ಟ್ ಎದುರೇ ಚಾಕು ಚುಚ್ಚಿ ಹೆಂಡತಿ ಕೊಂದ ಗಂಡ

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲಿ ಉಂಡು, ಮಲಗಿ, ಎದ್ದ ಮೇಲೂ ಗಂಡ ಮತ್ತು ಹೆಂಡತಿ ನಡುವೆ ಜಗಳ ಮುಂದುವರೆಯುತ್ತಿತ್ತು. ಹೀಗೆ ಗಂಡನಿಂದ ನಿತ್ಯ ಕಿರುಕುಳಕ್ಕೆ ಒಳಗಾದ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದರ ವಿಚಾರಣೆಗೆ ಅಂತ ಬಂದ ಗಂಡ, ಹೆಂಡತಿ ಪಾಲಿಗೆ ರಾಕ್ಷಸನಾಗಿಬಿಟ್ಟಿದ್ದ.

ಪತ್ನಿಯನ್ನೇ ಕೊಂದ ಪತಿ

ಪತ್ನಿಯನ್ನೇ ಕೊಂದ ಪತಿ

  • Share this:
ಹೊಳೆನರಸೀಪುರ, ಹಾಸನ: ಗಂಡ ಹೆಂಡತಿ (Husband and Wife) ಅಂದ ಮೇಲೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗಬೇಕು. ಸಂಸಾರದಲ್ಲಿ (family) ಸರಸ ಮತ್ತು ವಿರಸ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕು. ಪತಿ, ಪತ್ನಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲಿ ಉಂಡು, ಮಲಗಿ, ಎದ್ದ ಮೇಲೂ ಪತಿ ಮತ್ತು ಪತ್ನಿ ನಡುವೆ ಜಗಳ (Clash) ಮುಂದುವರೆಯುತ್ತಿತ್ತು. ಹೀಗೆ ಗಂಡನಿಂದ ನಿತ್ಯ ಕಿರುಕುಳಕ್ಕೆ ಒಳಗಾದ ಹೆಂಡತಿ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಳು. ಇದರ ವಿಚಾರಣೆಗೆ ಅಂತ ಬಂದ ಗಂಡ, ಹೆಂಡತಿ ಪಾಲಿಗೆ ರಾಕ್ಷಸನಾಗಿಬಿಟ್ಟಿದ್ದ. ಕೋರ್ಟ್ (Court) ಆವರಣದಲ್ಲಿಯೇ ಹೆಂಡತಿಗೆ ಚಾಕು ಚುಚ್ಚಿ ಕೊಲೆ (Murder) ಮಾಡಿಬಿಟ್ಟಿದ್ದಾನೆ. ಹಾಸನ (Hassan) ಜಿಲ್ಲೆಯ ಹೊಳೆನರಸೀಪುರದ ಕೋರ್ಟ್ (Holenarasipur Court) ಆವರಣದಲ್ಲಿಯೇ ಇಂಥದ್ದೊಂದು ಘಟನೆ ನಡೆದಿದೆ.

 ಕೆೊಲೆಯಾದವರು ಯಾರು? ಕೊಲೆಗಾರ ಯಾರು?

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ, 24 ವರ್ಷದ ಮಹಿಳೆ ಚೈತ್ರಾ ಎಂಬಾಕೆಯೇ ಗಂಡನಿಂದ ಕೊಲೆಯಾದ ದುರ್ದೈವಿ. ಈಕೆಯ ಗಂಡ ಹೊಳೆನರಸೀಪುರ ತಾಲೂಕಿನ ಶಿವಕುಮಾರ್ ಎಂಬಾತನೇ ಕೋರ್ಟ್ ಆವರಣದಲ್ಲಿ ಚಾಕು ಚುಚ್ಚಿ ಹೆಂಡತಿಯನ್ನು ಕೊಂದಿದ್ದಾನೆ.

7 ವರ್ಷಗಳ ಹಿಂದೆ ಚೈತ್ರಾ-ಶಿವಕುಮಾರ್ ವಿವಾಹ

ಚೈತ್ರಾ ಹಾಗೂ ಶಿವಕುಮಾರ್‌ಗೆ 7 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಪತಿ ಮತ್ತು ಪತ್ನಿ ನಡುವೆ ವೈಮನಸ್ಸು ಬಂದು, ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು. ಸಂಬಂಧಿಕರು ಹಲವು ಬಾರಿ ಕೌಟುಂಬಿಕ ಕಲಹವನ್ನು ಬಗೆಹರಿಸಲು ಯತ್ನಿಸಿದರಾದರೂ ಅದು ಪ್ರಯೋಜನವಾಗಿರಲಿಲ್ಲ. ಹೀಗಾಗಿ 2 ವರ್ಷಗಳ ಹಿಂದೆ ಚೈತ್ರಾ ಪತಿಯಿಂದ ದೂರವಾಗಿದ್ದರು. ಪತಿಯಿಂದ ಜೀವನಾಂಶ ಕೇಳಿದ್ದು ಅದರ ವಿಚಾರಣೆಗಾಗಿ ನಿನ್ನೆ ಪತಿ ಹಾಗೂ ಪತ್ನಿ ಇಬ್ಬರೂ ಕೋರ್ಟ್‌ಗೆ ಬಂದಿದ್ದರು.

ಇದನ್ನೂ ಓದಿ: Swamiji Missing: ಸನ್ಯಾಸತ್ವ ತ್ಯಜಿಸಿ ಯುವತಿ ಜೊತೆ ನಾಪತ್ತೆಯಾದ್ರಾ ಸ್ವಾಮೀಜಿ? ಮಠದಲ್ಲಿ ಸಿಕ್ಕಿದ ಪತ್ರದಲ್ಲಿದೆ ರಹಸ್ಯ!

ಕೋರ್ಟ್ ಆವರಣದಲ್ಲೇ ಚಾಕು ಚುಚ್ಚಿದ ಪಾಪಿ

ನಿನ್ನೆ ಹೊಳೆನರಸೀಪುರ ಹಿರಿಯ ಸಿವಿಲ್‌ನ್ಯಾಯಲಯದಲ್ಲಿ ರಾಜಿ ಸಂಧಾನ ಮಾತುಕತೆಗಾಗಿ ಬಂದು ಲೋಕ್ ಅದಾಲತ್ ನಲ್ಲಿ ಪತ್ನಿ ಚೈತ್ರಾ ಜೊತೆ ಚೆನ್ನಾಗಿ ಇರುತ್ತೇನೆಂದು ಪತಿ ಶಿವಕುಮಾರ್ ಹೇಳಿಕೆ ಕೊಟ್ಟಿದ್ದ. ಮಕ್ಕಳಿಬ್ಬರ ಸಲುವಾಗಿ ಹೊಂದಾಣಿಕೆ ಜೀವನ ನಡೆಸುವಂತೆ ವಕೀಲರು ಹಾಗೂ ನ್ಯಾಯಾಧೀಶರು ಸಲಹೆ ಕೊಟ್ಟಿದ್ದರು. ಸಂಧಾನಕ್ಕೆ‌ ಒಪ್ಪಿ ಹೊರ ಬಂದು ಬಳಿಕ ಶೌಚಾಲಯದಲ್ಲಿ ಪತ್ನಿ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

ಮಗುವನ್ನೂ ಕೊಲ್ಲಲು ಯತ್ನಿಸಿದ ಶಿವಕುಮಾರ್

ಇನ್ನು ಪತ್ನಿ ಕೊಂದು ಮಗುವನ್ನು ಹತ್ಯೆ ಮಾಡಲು ಮುಂದಾದಾಗ ಸ್ಥಳದಲ್ಲಿದ್ದವರು ಪುಟ್ಟ ಮಗು ರಕ್ಷಣೆ ಮಾಡಿದ್ದಾರೆ. ಈ ವೇಳೆ ಆತನನ್ನು ಹಿಡಿಯಲು ಅಲ್ಲಿದ್ದವರು ಮುಂದಾದಾಗ ತಕ್ಷಣ ಚಾಕು ತೋರಿಸಿ ಎಲ್ಲರನ್ನು ಹೆದರಿಸಿ ಆರೋಪಿ ಶಿವಕುಮಾರ್ ಅಲ್ಲಿಂದ‌ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಶಿವಕುಮಾರ್ ಬೆನ್ನಟ್ಟಿ ಹಿಡಿದು ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: Veerappan: ಸ್ವಾತಂತ್ರ್ಯೋತ್ಸವದ ಮುನ್ನಾ ದಿನವೇ ನಡೆದುಹೋಗಿತ್ತು ಘನಘೋರ ಕೃತ್ಯ, ವೀರಪ್ಪನ್ ಅಟ್ಟಹಾಸಕ್ಕೆ ಇಂದು 30 ವರ್ಷ!

ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚೈತ್ರಾ 

ಅತ್ತ ಚೈತ್ರಾ ತೀವ್ರವಾಗಿ ಗಾಯಗೊಂಡು, ನೆಲಕ್ಕೆ ಬಿದ್ದು ಒದ್ದಾಡತೊಡಗಿದ್ದಾಳೆ. ಆಗ ಆಕೆಯನ್ನು ಹೊಳೆನರಸೀಪುರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚೈತ್ರಾ ಕೊನೆಯುಸಿರೆಳೆದಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಹೊಳೆನರಸೀಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಅಮ್ಮನೂ ಇಲ್ಲದೇ, ಅಪ್ಪನೂ ಇಲ್ಲದೇ ಇಬ್ಬರು ಮಕ್ಕಳು ಅನಾಥವಾಗಿವೆ.
Published by:Annappa Achari
First published: