ಬೆಂಗಳೂರಿನಲ್ಲಿ ಕುಡಿಯಲು ಹಣ ಕೊಡದಿದ್ದಕ್ಕೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಗಂಡ

Bangalore Crime: ಹಣ ಕೊಡಲಿಲ್ಲವೆಂದು ಕೋಪಗೊಂಡ ಮಲ್ಲಣ್ಣ ಕೋಪದ ಕೈಗೆ ಬುದ್ಧಿ ಕೊಟ್ಟಿದ್ಧಾನೆ. ಕುಡಿದ ಮತ್ತಿನಲ್ಲೇ ಇದ್ದ ಆತ ತನ್ನ ಹೆಂಡತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ಧಾನೆ.

news18-kannada
Updated:December 3, 2019, 3:58 PM IST
ಬೆಂಗಳೂರಿನಲ್ಲಿ ಕುಡಿಯಲು ಹಣ ಕೊಡದಿದ್ದಕ್ಕೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಗಂಡ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಡಿ.03): ಕುಡಿಯಲು ಹಣ ಕೊಡದಿದ್ದಕ್ಕೆ ಕೋಪಗೊಂಡ ಗಂಡ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ  ಘಟನೆ ಸಿಲಿಕಾನ್​ ಸಿಟಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​​ ಬಳಿಯ ಕುರುಬರಹಳ್ಳಿಯಲ್ಲಿ ನಡೆದಿದೆ. 

ಸಿದ್ದಮ್ಮ ಕೊಲೆಯಾದ ಮಹಿಳೆ. ಮಲ್ಲಣ್ಣ ಕೊಲೆ ಮಾಡಿರುವ ಗಂಡ. ದಂಪತಿ ಮೂಲತಃ ಕಲಬುರಗಿಯ ಶಹಪುರದವರು. ಬಹಳ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕುಡುಕ ಗಂಡ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ; ನಿಮ್ಮ ಕಾರ್ಡ್​​ ಹ್ಯಾಕ್​ ಮಾಡಿ ಹಣ ಎಗರಿಸ್ತಾರೆ

ಇಂದು ಸಹ ಕುಡಿಯಲು ಆರೋಪಿ ಮಲ್ಲಣ್ಣ ತನ್ನ ಪತ್ನಿ ಬಳಿ ಹಣ ಕೇಳಿದ್ದ. ಆದರೆ ಸಿದ್ದಮ್ಮ ತನ್ನ ಬಳಿ ಹಣ ಇಲ್ಲವೆಂದು ಹೇಳಿದ್ದಳು. ಹಣ ಕೊಡಲಿಲ್ಲವೆಂದು ಕೋಪಗೊಂಡ ಮಲ್ಲಣ್ಣ ಕೋಪದ ಕೈಗೆ ಬುದ್ಧಿ ಕೊಟ್ಟಿದ್ಧಾನೆ. ಕುಡಿದ ಮತ್ತಿನಲ್ಲೇ ಇದ್ದ ಆತ ತನ್ನ ಹೆಂಡತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ಧಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಕೊಲೆಯಾದ ಸಿದ್ದಮ್ಮಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್​.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಮಕ್ಕಳನ್ನು ಕೊಂದು ಅಪಾರ್ಟ್​​ಮೆಂಟ್​​ನಿಂದ ಜಿಗಿದ ತಂದೆ-ತಾಯಿ
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ