ಬೆಂಗಳೂರು: ಪ್ರಿಯಕರನ ಮೇಲಿನ ಮೋಹಕ್ಕೆ (Love) ಸಿಲುಕಿದ್ದ ವಿವಾಹಿತ ಮಹಿಳೆಯೊಬ್ಬರು (Married Woman) ಪತಿಯನ್ನೇ ಕೊಲೆಗೈದಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ (Nandini Layout Bangalore Police Station) ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ವಿಶೇಷ ಎಂದರೇ, ತನ್ನ ಪತಿ ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದ ಮಹಿಳೆ, ಅಂತ್ಯಕ್ರಿಯೆಯನ್ನು ನಡೆಸಿದ್ದಾಳೆ. ಆ ಬಳಿಕ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಸುಖ ಜೀವನ ನಡೆಸಲು ಮನೆಯಿಂದ ಓಡಿಹೋಗಿದ್ದು, ಕೊಲೆ ನಡೆದ ಆರು ತಿಂಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.
ಏನಿದು ಪ್ರಕರಣ?
ಕಳೆದ ಆರು ತಿಂಗಳ ಹಿಂದೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜಯ್ ಗಾಂಧಿ ನಗರದ ಸ್ಲಂ ನಲ್ಲಿ 35 ವರ್ಷದ ಆಂಜನೇಯ ಏಕಾಏಕಿ ಮನೆಯಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಆತನ ಪತ್ನಿ ಅನಿತಾ (31) ತನ್ನ ಪತಿಗೆ ಹೃದಯಾಘಾತವಾಗಿದ್ದು, ಮನೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು. ಇದನ್ನೇ ನಿಜ ಎಂದು ನಂಬಿದ್ದ ಕುಟುಂಸ್ಥರು ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಿದ್ದರು.
ಕೃತ್ಯ ಎಸಗಿದ್ದು ಹೇಗೆ?
ಅಂದಹಾಗೇ, ಆರೋಪಿ ಅನಿತಾ, ರಾಕೇಶ್ ಎಂಬತನೊಂದಿಗೆ ಮದುವೆಯ ಬಳಿಕ ಅಕ್ರಮ ಸಂಬಂಧವನ್ನು ಹೊಂದಿದ್ದಳಂತೆ. ಆದರೆ ಇಬ್ಬರ ಸಂಬಂಧಕ್ಕೂ ಪತಿ ಆಂಜನೇಯ ಅಡ್ಡವಾಗಿದ್ದ. ಆತ ಬದುಕಿದ್ದರೆ ತಾನೇ ನಮ್ಮ ಸಂಬಂಧಕ್ಕೆ ಅಡ್ಡಿ ಬರ್ತಾನೆ ಎಂದು ಇಬ್ಬರು ಸೇರಿ ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ. ರಾತ್ರಿ ಮನೆಗೆ ಕುಡಿದು ಬಂದಿದ್ದ ಪತಿಯ ಮುಖದ ಮೇಲೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆ ಬಳಿಕ ಪ್ರಿಯಕರ ಮನೆಯಿಂದ ಎಸ್ಕೇಪ್ ಆಗಿದ್ದು, ಇತ್ತ ತನ್ನ ಗಂಡ ಮನೆಗೆ ಬಂದು ಮಲಗಿಕೊಂಡವ ಮತ್ತೆ ಎಚ್ಚರಗೊಳ್ಳಲಿಲ್ಲ. ನೋಡಿದರೆ ಆತ ಹಾಸಿಗೆ ಮೇಲೆಯೇ ಸಾವನ್ನಪ್ಪಿದ್ದ ಎಂದು ಆರೋಪಿ ಅನಿತಾ ನಾಟಕ ಮಾಡಿದ್ದಳಂತೆ.
ಇದನ್ನೂ ಓದಿ: Wedding Vibe: ಹೆಂಡತಿಯನ್ನು ಎತ್ತಲಾಗದೇ ಗಂಡನ ಫಜೀತಿ! ಮದ್ವೆ ಮಂಟಪದ ಮುಗ್ಗರಿಸಿ ಬಿದ್ದ ನವ ದಂಪತಿ!
ಪಾಪಿಗಳ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ಇನ್ನು, ಪತಿಯನ್ನು ಕೊಲೆ ಮಾಡಿ ಕುಟುಂಬಸ್ಥರು ಕಣ್ಣೀರು ಸುರಿಸಿ ಯಾರಿಗೂ ಅನುಮಾನಬಾರದಂತೆ ಅಂತ್ಯಕ್ರಿಯೆ ನಡೆಸಿದ್ದ ಅನಿತಾ, ತನಗಿದ್ದ ಅಡ್ಡಿ ದೂರ ಆಯ್ತು ಅಂತ ಮನಸ್ಸಿನಲ್ಲೇ ಖುಷಿಗೊಂಡಿದ್ದಳು. ಪತಿಯ ಸಾವಿನ ಬಳಿಕ ಪ್ರೇಮಿಗಳಿಬ್ಬರು ಭೇಟಿ ಆಗೋದು, ಒಟ್ಟಿಗೆ ಸಮಯ ಕಳೆಯವುದು ಜೋರಾಗಿತ್ತಂತೆ. ಅಲ್ಲದೇ ಇತ್ತೀಚೆಗೆ ಮಕ್ಕಳನ್ನು ಅವರ ಅಜ್ಜಿಯ ಬಳಿ ಬಿಟ್ಟಿದ್ದ ಅನಿತಾ, ಪ್ರಿಯಕರನೊಂದಿಗೆ ತಾನು ಅಂದುಕೊಂಡಿದ್ದ ಸುಖ ಜೀವನ ನಡೆಸಲು ಹೋಗಿದ್ದಳಂತೆ. ಈ ವೇಳೆ ಮಕ್ಕಳು ತಮ್ಮ ತಂದೆಯ ಸಾವಿನ ರಹಸ್ಯವನ್ನು ಅಜ್ಜಿಯ ಎದುರು ಬಿಚ್ಚಿಟ್ಟಿದ್ದು, ತಂದೆಯನ್ನು ಹೇಗೆ ಕೊಲೆ ಮಾಡಿದರು ಎಂದು ತಿಳಿಸಿದ್ದರಂತೆ.
ಅನಿತಾ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದನ್ನು ಅಂದು ಮಕ್ಕಳು ಕಣ್ಣರೇ ಕಂಡಿದ್ದರಂತೆ. ಮಕ್ಕಳು ಮನೆಯಲ್ಲಿದ್ದಾಗಲೇ ಅನಿತಾ ಕೃತ್ಯ ಎಸಗಿದ್ದಳಂತೆ. ಅಂದು ಮಕ್ಕಳಿಗೆ ನಿಮ್ಮ ತಂದೆ ಸರಿ ಇಲ್ಲ. ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಹೇಳಿದ್ದಳಂತೆ. ಆ ಬಳಿಕ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳಂತೆ.
ಇದನ್ನೂ ಓದಿ: Bengaluru Roads: ದೇಶದ ಮೊಟ್ಟ ಮೊದಲ ರ್ಯಾಪಿಡ್ ರಸ್ತೆಯಲ್ಲಿ ಬಿರುಕು, ಕಿತ್ತು ಬರ್ತಿದೆ ಕಾಂಕ್ರಿಟ್!
ಇನ್ನು, ಮಕ್ಕಳು ತಮ್ಮ ತಂದೆಯ ಸಾವಿನ ವಿಚಾರವನ್ನು ಬಹಿರಂಗ ಪಡಿಸುತ್ತಿದಂತೆ ಶಾಕ್ಗೆ ಒಳಗಾಗಿದ್ದ ಮೃತ ಆಂಜನೇಯ ಅವರ ತಾಯಿ ಕೂಡಲೇ ಸೊಸೆ ವಿರುದ್ಧ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರಂತೆ. ದೂರು ದಾಖಲಾಗುತ್ತಿದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಆರೋಪಿಗಳಾದ ಅನಿತಾ ಹಾಗೂ ರಾಕೇಶ್ನನ್ನು ಹುಡುಕಿ ಕರೆ ತಂದಿದ್ದಾರೆ. ಆ ಬಳಿಕ ಕೃತ್ಯದ ಬಗ್ಗೆ ವಿಚಾರಣೆ ನಡೆಸಿದ ವೇಳೆ ಇಬ್ಬರು ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ