• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಥೂ.. ಇವನೆಂಥಾ ಗಂಡ! ಪತ್ನಿಯನ್ನೇ  ಅತ್ಯಾಚಾರ ಮಾಡುವಂತೆ ಸ್ನೇಹಿತನಿಗೆ ಸಹಕರಿಸಿದ ಕಿರಾತಕ

Crime News: ಥೂ.. ಇವನೆಂಥಾ ಗಂಡ! ಪತ್ನಿಯನ್ನೇ  ಅತ್ಯಾಚಾರ ಮಾಡುವಂತೆ ಸ್ನೇಹಿತನಿಗೆ ಸಹಕರಿಸಿದ ಕಿರಾತಕ

ಅತ್ಯಾಚಾರ

ಅತ್ಯಾಚಾರ

ಅಮಾನವೀಯರಂತೆ ವರ್ತಿಸಿದ ಕಿರಾತಕರಾದ ವೆಂಕಟೇಶ್ ಮತ್ತು ಮುನಿರಾಜು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯ ಕಾಲಿಗೆ ಕಲ್ಲು ಎತ್ತಿ ಹಾಕಿ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಮಹಿಳೆ ನೋವು ಅನುಭವಿಸುತ್ತಲೇ ರಕ್ಷಣೆಗಾಗಿ ಕೂಗಿದರೂ ನಿರ್ಜನ ಪ್ರದೇಶ ಆಗಿದ್ದರಿಂದ ಯಾರೂ ಅತ್ತ ಸುಳಿದಿರಲಿಲ್ಲ. ಕೊನೆಗೆ ಯಾರೋ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮುಂದೆ ಓದಿ ...
  • Share this:

ಕೋಲಾರ: ತನ್ನ ಪತ್ನಿಯ ಮೇಲೆ ಅತ್ಯಾಚಾರ (Crime News) ಎಸಗಲು ಸ್ನೇಹಿತನಿಗೆ ಸಹಕರಿಸಿದ ಕಿರಾತಕ ಪತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಕೋಲಾರ (Kolar) ಜಿಲ್ಲೆಯ ಮಾಲೂರು ತಾಲೂಕಿನ ತೊರಲಕ್ಕಿ ಗ್ರಾಮದಲ್ಲಿ ನಡೆದ ಈ ಕುಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಪಾನಮತ್ತ ಗಂಡನೇ ತನ್ನ ಹೆಂಡತಿಯ ಅತ್ಯಾಚಾರಕ್ಕೆ (Harassment) ಸ್ನೇಹಿತನಿಗೆ ಸಹಕರಿಸಿದ್ದಾನೆ ಎಂದು ತಿಳಿದು ಬಂದಿದೆ.


ವೆಂಕಟೇಶ್ ಎಂಬಾತನೇ ಸಂತ್ರಸ್ತ ಮಹಿಳೆಯ ಗಂಡನಾಗಿದ್ದು, ಈತ ತನ್ನ ಸ್ನೇಹಿತ ಮುನಿರಾಜುಗೆ ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಸಹಕರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಜನವರಿ 25ರಂದು ಈ ಅಮಾನವೀಯ ಘಟನೆ ನಡೆದಿದ್ದು, ತನ್ನ ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ವೆಂಕಟೇಶ್ ತನ್ನ ಸ್ನೇಹಿತ ಮುನಿರಾಜುಗೆ ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಸಹಕರಿಸಿದ್ದಾನೆ.


ಇದನ್ನೂ ಓದಿ: Crime News: ಖಾಸಗಿ ಫೋಟೋ ವೈರಲ್ ಮಾಡುವ ಬೆದರಿಕೆ, ಲಾಡ್ಜ್​ಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ!


ಮಹಿಳೆಯ ಕಾಲಿಗೆ ಕಲ್ಲು ಹಾಕಿದ ಕಿರಾತಕರು


ಅಮಾನವೀಯರಂತೆ ವರ್ತಿಸಿದ ಕಿರಾತಕರಾದ ವೆಂಕಟೇಶ್ ಮತ್ತು ಮುನಿರಾಜು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯ ಕಾಲಿಗೆ ಕಲ್ಲು ಎತ್ತಿ ಹಾಕಿ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಮಹಿಳೆ ನೋವು ಅನುಭವಿಸುತ್ತಲೇ ರಕ್ಷಣೆಗಾಗಿ ಕೂಗಿದರೂ ನಿರ್ಜನ ಪ್ರದೇಶ ಆಗಿದ್ದರಿಂದ ಯಾರೂ ಅತ್ತ ಸುಳಿದಿರಲಿಲ್ಲ. ಕೊನೆಗೆ ಯಾರೊ ಮಹಿಳೆಯನ್ನು ಗಮನಿಸಿದ್ದು, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.


ಸದ್ಯ ಸಂತ್ರಸ್ತ ಮಹಿಳೆಗೆ ಮಾಲೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪಾಪದ ಕೃತ್ಯ ಎಸಗಿದ ಕಿರಾತಕ ಪತಿ ವೆಂಕಟೇಶ್‌ನನ್ನು ಮಾಸ್ತಿ ಠಾಣೆಯ ಪೊಲೀಸರು ಬಂಧಿಸಿದ್ದು, ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿರುವ ಆತನ ಸ್ನೇಹಿತ ಮುನಿರಾಜು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಮಾಲೂರು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Inspiring Story: 12ನೇ ವಯಸ್ಸಿನಲ್ಲಿ ಅತ್ಯಾಚಾರ, ಮನೆಯಲ್ಲೂ ಛೀಮಾರಿ! ಇಂದು ಏಷ್ಯಾದ ನಂಬರ್​ 1 ಶ್ರೀಮಂತ ಟ್ರಾನ್ಸ್​​ಜೆಂಡರ್​!


ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಶಿಕ್ಷೆ


ವಿಜಯನಗರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತು ಆದ ಹಿನ್ನೆಲೆ ಕಾಮುಕನೊಬ್ಬನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.


ಹಗರಿಮ್ಮನ ಹಳ್ಳಿ ತಾಲೂಕಿನ ಅಂಬಳಿಯ  ವಸಂತ್ ಕುಮಾರ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದು, ಈತನಿಗೆ 7 ವರ್ಷ ವರ್ಷ ಜೈಲು ಶಿಕ್ಷೆ ಹಾಗೂ 15 ಲಕ್ಷ ರೂಪಾಯಿ ದಂಡ ವಿಧಿಸಿ ಬಳ್ಳಾರಿಯ ವಿಶೇಷ ತ್ವರಿತ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. 2012 ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಅಪರಾಧಿಯು ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಬಾಲಕಿ ಗರ್ಭವೂ ಸಹ ಧರಿಸಿ, ಹೆಣ್ಣು ಮಗಳಿಗೆ ಜನ್ಮ ನೀಡಿದ್ದಳು.


ಈ ಸಂಬಂಧ ವಾದ ವಿವಾದ ಆಲಿಸಿದ ಬಳ್ಳಾರಿಯ ವಿಶೇಷ ತ್ವರಿತ ನ್ಯಾಯಾಲಯ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 15 ಲಕ್ಷ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಸಂತ್ರಸ್ತ ಬಾಲಕಿ ಪರ ಸರ್ಕಾರಿ ಅಭಿಯೋಜಕರಾದ ಶರಣ ಬಸವನ ಗೌಡ ಮತ್ತು ಎಂ ಪ್ರಭಾವತಿ ವಾದ ಮಂಡಿಸಿದ್ದರು.




ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ


ಗದಗ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಹೇಯ ಕೃತ್ಯ ಗದಗ ನಗರದ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.


16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯಮನೂರಪ್ಪ (30) ಎಂಬ ಕಾಮುಕ ದುಷ್ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಅತ್ಯಾಚಾರ ಎಸಗಿದ ಆರೋಪಿ ಯಮನೂರಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Published by:Avinash K
First published: