ತನ್ನ ಗೆಳೆಯರೊಂದಿಗೆ (Friends) ಮಲಗಲು ಹೇಳಿ ವಿಡಿಯೋ ಮಾಡಿದ್ದ ವಿಕೃತ ಪತಿ (Husband) ವಿರುದ್ಧ ಮಹಿಳೆಯೊಬ್ಬರು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ (Sampigehalli Police Station) ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಎಫ್ಐಆರ್ (FIR Filed) ದಾಖಲಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ (Private Company) ಸಾಫ್ಟ್ವೇರ್ ಇಂಜಿನೀಯರ್ (Software Engineer) ಆಗಿ ಕೆಲಸ ಮಾಡಿಕೊಂಡಿದ್ದ ಜಾನ್ಪಾಲ್ ಎಂಬಾತ 2011ರಲ್ಲಿ ಸ್ವಾತಿ (ಹೆಸರು ಬದಲಾಯಿಸಲಾಗಿದೆ) ಮದುವೆಯಾಗಿದ್ದನು. ದಂಪತಿಗೆ (Couple) ಓರ್ವ ಮಗನೂ ಸಹ ಇದ್ದಾನೆ. ಮದುವೆಯಾದಾಗಿನಿಂದ ಗಂಡ ಮದ್ಯಪಾನ ಮಾಡಿ (Drunkard) ನನಗೆ ಹೊಡೆಯುತ್ತಿದ್ದನು. 2015ರಲ್ಲಿ ತನ್ನ ಗೆಳೆಯರ ಜೊತೆಯಲ್ಲಿ ಮಲಗುವಂತೆ ನನ್ನ ಮೇಲೆ ಒತ್ತಡ ಹಾಕಲಾರಂಭಿಸಿದನು. ಇದೇ ವಿಷಯಕ್ಕಾಗಿ ನನಗೆ ಹೊಡೆದು ಕಿರುಕುಳ ನೀಡಲು ಆರಂಭಿಸಿದನು. ತದನಂತರ ಗಂಡನ ಒಪ್ಪಿಗೆ ಪಡೆದು ಆತನ ಸ್ನೇಹಿತರಾದ ಸಜೀಶ್ ಜೋಶಿ ಮತ್ತು ನಾಜಿ ಎಂಬವರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದೆ. ಹೀಗೆ ಹಲವು ಬಾರಿ ಇವರ ಜೊತೆಯಲ್ಲಿ ದೈಹಿಕ ಸಂಪರ್ಕ ಹೊಂದಲಾಗಿದೆ.
ನಾನು ಇವರಿಬ್ಬರ ಜೊತೆಯಲ್ಲಿದ್ದಾಗ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾನೆ. ಇತ್ತೀಚೆಗೆ ನಾನು ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿ ಇದರಿಂದ ದೂರವಾಗಿದ್ದೆ. ಇನ್ನು ನನ್ನ ತಂಗಿ ಪ್ರೇಮ (ಹೆಸರು ಬದಲಾಯಿಸಲಾಗಿದೆ) ಸಹ ನಮ್ಮ ಜೊತೆಯಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ.
ಖಾಸಗಿ ಫೋಟೋ ಕಳುಹಿಸಿ ಬೆದರಿಕೆ
ಪ್ರೇಮಾಳಿಗೆ ತನ್ನ ಜೊತೆ ಮಲಗುವಂತೆ ಹೇಳು ಎಂದು ನನಗೆ ಕಿರಕುಳ ನೀಡಲು ಆರಂಭಿಸಿದನು. ಈ ಎಲ್ಲಾ ಘಟನೆಗಳಿಂದ ಬೇಸತ್ತ ನಾನು ಡಿವೋರ್ಸ್ ಬೇಕೆಂದು ಕೇಳಿದಾಗ ನನ್ನ ಮೊಬೈಲ್ಗೆ ಖಾಸಗಿ ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದನು.
ಮಹಿಳೆ ಸೋದರಿಗೂ ಲೈಂಗಿಕ ಕಿರುಕುಳ
ಈ ಫೋಟೋಗಳನ್ನು ನಿನ್ನ ಪೋಷಕರು ಮತ್ತು ಸಂಬಂಧಿಕರಿಗೆ ಕಳುಹಿಸುವೆ. ಇದರ ಜೊತೆಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದಾಗಿ ಹೇಳಿ ಬೆದರಿಕೆ ಹಾಕಿ, ತನ್ನ ಜೊತೆ ಮಲಗಲು ಪ್ರೇಮಾಳನ್ನು ಕಳುಹಿಸುವಂತೆ ನನ್ನ ಮೇಲೆ ಒತ್ತಡ ಹಾಕಿದನು. ನಾನು ಒಪ್ಪದಿದ್ದಾಗ ಅವನೇ ಪ್ರೇಮಾ ಬಳಿ ತನ್ನೊಂದಿಗೆ ಮಲಗುವಂತೆ ಹೇಳಿದ್ದಾನೆ.
ಇದನ್ನೂ ಓದಿ: Dharwad: ಆತ್ಮಹತ್ಯೆಗೆ ಶರಣಾದ ಲಾಡ್ಜ್ನಲ್ಲಿದ್ದ ಜೋಡಿ; ಮೂರು ದಿನದಿಂದ ವಾಸ್ತವ್ಯ
ಮದ್ಯವ್ಯಸನಿಯಾಗಿದ್ದ ಪತಿ
ಮದ್ಯವ್ಯಸನಿಯಾಗಿದ್ದ ಪತಿ ನನ್ನ ಹಾಗೂ ತಂಗಿ ಮೇಲೆ ಹಲ್ಲೆ ಮಾಡಿದ್ದಾನೆ. ಲ್ಯಾಪ್ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಒಡೆದು ಹಾಕಿದ್ದಾನೆ. ಈ ಹಿಂದೆ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಿಸಿದ್ದೆ. ಪೊಲೀಸರು ಸಹ ಪತಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಪೊಲೀಸರು ಎಚ್ಚರಿಕೆ ನೀಡಿದ ಬಳಿಕವೂ ತನ್ನ ವಿಕೃತಕಾಟ ಕಡಿಮೆ ಮಾಡಿರಲಿಲ್ಲ ಎಂದು ಸ್ವಾತಿ ಹೇಳಿದ್ದಾರೆ.
ಹಲ್ಲೆ ನಡೆಸಿ ಕೊಲೆ ಬೆದರಿಕೆ
ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಕೆ ಹಾಕುತ್ತಿದ್ದಾನೆ. ಮಗನ ಮುಂದೆಯೇ ಹಲ್ಲೆ ನಡೆಸಿದ್ದಾನೆ. ಹಲ್ಲೆ ದೃಶ್ಯ ಸೆರೆ ಹಿಡಿಯುತ್ತಿದ್ದ ಸೋದರಿ ಪ್ರೇಮಾ ಮೇಲೆಯೂ ಹಲ್ಲೆ ನಡೆಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸ್ವಾತಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾಡಹಗಲೇ ಮನೆಗೆ ನುಗ್ಗಿ 100 ಮಂದಿಯಿಂದ ಯುವತಿಯ ಕಿಡ್ನ್ಯಾಪ್, ಶಾಕಿಂಗ್ ವಿಡಿಯೋ ವೈರಲ್
ಗಾಂಜಾ ವ್ಯಸನಿಯಾಗಿದ್ದ ವಿಕೃತಕಾಮಿ
ಈ ಎಲ್ಲಾ ಆರೋಪಗಳ ಜೊತೆಯಲ್ಲಿ ಮನೆಯಲ್ಲಿಯೇ ಗಾಂಜಾ ಗಿಡ ಬೆಳೆಯುತ್ತಿದ್ದನು. ಪತಿ ಗಾಂಜಾ ಸೇವನೆ ಮಾಡುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಲೈಂಗಿಕ ಕಿರುಕುಳ, ಎನ್ಡಿಪಿಎಸ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ವಿಕೃತ ಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ