Wife Murder: ರಾತ್ರಿ ಮಕ್ಕಳ ಮುಂದೆಯೇ ಪತ್ನಿಯ ಕತ್ತು ಹಿಸುಕಿ ಕೊಲೆ!? ಬೆಳಗಾಗುತ್ತಿದ್ದಂತೆ ಮನೆಯವರೆಲ್ಲಾ ಎಸ್ಕೇಪ್

28 ವರ್ಷದ ಯೋಗಿತಾ ಎಂಬ ಗೃಹಿಣಿಯ ಶವ ಆಕೆಯ ಮನೆಯಲ್ಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಇದಕ್ಕೆಲ್ಲಾ ಕಾರಣ ಆಕೆಯ ಪತಿ ರವಿ ಮತ್ತು ಆತನ ಕುಟುಂಬಸ್ಥರು ಎಂದು ಯೋಗಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. 

ಮೃತ ಯೋಗಿತಾ ಹಾಗೂ ಪತಿ

ಮೃತ ಯೋಗಿತಾ ಹಾಗೂ ಪತಿ

  • Share this:
ಮಂಡ್ಯ (ಜು.07):  ಕುತ್ತಿಗೆ ಬಿಗಿದು ಹತ್ಯೆ (Murder) ಮಾಡಿದ ರೀತಿ ಗೃಹಿಣಿಯ ಶವ (Dead Body) ಪತ್ತೆಯಾಗಿದ್ದು, ಆಕೆಯನ್ನ ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಗೃಹಿಣಿಯ ಕುಟುಂಬಸ್ಥರು (Family) ಆರೋಪ ಮಾಡಿರೋ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ಜರುಗಿದೆ. ಆದ್ರೆ ಅತ್ತ ಇದಕ್ಕೆಲ್ಲ ಉತ್ತರ ನೀಡಬೇಕಾದ ಪತಿ ಹಾಗೂ ಆತನ ಮನೆಯವರು ಮಾತ್ರ ನಾಪತ್ತೆಯಾಗಿದ್ದಾರೆ. ಇಂತಹ ಘಟನೆ ನಡೆದಿರೋದು ಸಕ್ಕರೆ ನಾಡು ಮಂಡ್ಯದ (Mandya) ಶ್ರೀರಂಗಪಟ್ಟಣದ  ಗೆಂಡೆಹೊಸಹಳ್ಳಿ ಗ್ರಾಮದಲ್ಲಿ.

ಗ್ರಾಮದ 28 ವರ್ಷದ ಯೋಗಿತಾ ಎಂಬ ಗೃಹಿಣಿಯ ಶವ ಆಕೆಯ ಮನೆಯಲ್ಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಇದಕ್ಕೆಲ್ಲಾ ಕಾರಣ ಆಕೆಯ ಪತಿ ರವಿ ಮತ್ತು ಆತನ ಕುಟುಂಬಸ್ಥರು, ಆಕೆಯ ಪತಿಯೇ ಈಕೆಯನ್ನ ಕೊಲೆ ಮಾಡಿದ್ದಾನೆ ಎಂದು ಯೋಗಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಗಂಡನಿಂದ ಮಾನಸಿಕ ಕಿರುಕುಳ

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಹೇಂದ್ರ ಮತ್ತು ಮಂಜುಳಾ ದಂಪತಿಯ ಪುತ್ರಿ ಯೋಗಿತಾಳನ್ನ ಕಳೆದ 9 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಗೆಂಡೆಹೊಸಹಳ್ಳಿ ಗ್ರಾಮದ ರವಿ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಒಂದಷ್ಟು ವರ್ಷ ಚೆನ್ನಾಗಿದ್ದ ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಕೆಲ ವರ್ಷಗಳಿಂದ ರವಿ ಯೋಗಿತಾಳ ಶೀಲ ಶಂಕಿಸಿ ಆಕೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಆಕೆಗೆ ಮಾನಸಿಕ ಕಿರುಕುಳ ನೀಡ್ತಿದ್ದನಂತೆ. ಇದಾದ ಬಳಿಕ ಎರಡು ಕುಟುಂಬಗಳು ಅನೇಕ ರಾಜಿ ಪಂಚಾಯ್ತಿಗಳನ್ನ ಮಾಡಿ ಸರಿಯಾದ ರೀತಿ ಸಂಸಾರ ನಡೆಸುವಂತೆ ತಿಳಿ ಹೇಳದ್ದರಂತೆ.

ಇದನ್ನೂ ಓದಿ: BBMP: ಬೀದಿ ಬದಿಯ ಆಹಾರಗಳೂ ಇನ್ಮುಂದೆ ಆನ್​​ಲೈನ್​ನಲ್ಲಿ ಲಭ್ಯ: ಪಾಲಿಕೆ ಸಾಲವನ್ನೂ ನೀಡುತ್ತೆ

ರಾಜಿ ಪಂಚಾಯ್ತಿ ನಡೆಸಿದ್ರು ಸರಿಯೋಗದ ಸಂಸಾರ

ಇನ್ನು 2 ಕುಟುಂಬಸ್ಥರ ರಾಜಿ ಪಂಚಾಯ್ತಿ ಬಳಿಕ ರವಿ ಮಾತ್ರ ತನ್ನ ಚಾಳಿ ಮುಂದುವರೆಸಿದ್ದಾನೆ. ಇತ್ತ ಪತ್ನಿಯ ವಿರುದ್ದ ಅನೈತಿಕ ಸಂಬಂಧದ ಆರೋಪ ಮಾಡುತ್ತಾ. ಅತ್ತ ತಾನೇ ಪರ ಸ್ತ್ರೀಯರ ಸಹವಾಸ ಮಾಡಿದ್ದನಂತೆ. ಈ ಬಗ್ಗೆ ಯೋಗಿತಾ ಪತಿಯ ಪರಸಂಗದಾಟವನ್ನ ತಮ್ಮ ಮನೆಯಲ್ಲಿ ರೆಡ್ಯಾಂಡ್ ಆಗಿ ಹಿಡಿದು ಸಂಬಂಧಿಕರ ಮುಂದೆ ಬಟಾ ಬಯಲು ಮಾಡಿದ್ದಾಳೆ. ಇದಾದ ಬಳಿಕ ರವಿ ಮಹಿಳೆಯರ ಜೊತೆ ಓಡಾಡೋದನ್ನ ಹೆಚ್ಚು ಮಾಡಿಕೊಂಡಿದ್ದನಂತೆ. ಮನೆಗೆ ಪರಸ್ತ್ರೀಯರನ್ನ ಕರೆದುಕೊಂಡು ಬಂದು ಯೋಗಿತಾಳಿಗೆ ಚಿತ್ರ ಹಿಂಸೆ ನೀಡ್ತಿದ್ದನಂತೆ.

ಮಕ್ಕಳ ಮುಂದೆಯೆ ಪತ್ನಿಯ ಹತ್ಯೆ ಮಾಡಿದ್ನಾ ಪಾಪಿ ಗಂಡ?

ಇನ್ನು ಇಷ್ಟೆಲ್ಲ ನಡೆದ ಬಳಿಕ ನಿನ್ನೆ ರಾತ್ರಿ ರವಿ ಮನೆಗೆ ಪಾನಿಪುರಿ ತಂದಿದ್ದಾನೆ. ಈ ವೇಳೆ ತನ್ನ ಮಕ್ಕಳಿಗೆ ಪಾನಿಪುರಿ ತಿನ್ನಿಸುತ್ತಿದ್ದಂತೆ ಯೋಗಿತಾ ಮಕ್ಕಳಿಗೆ ಅದನ್ನ ತಿನ್ನ ಬೇಡಿ ಅದರಲ್ಲಿ ವಿಷ ಹಾಕಲಾಗಿದೆ ಎಂದು ತಿಳಿಸಿದ್ದಾಳೆ. ಈ ವೇಳೆ ಯೋಗಿತಾಳ ಕುತ್ತಿಗೆ ಹಿಡಿದು ಕೊಠಡಿಯ ಒಳಗೆ ಕರೆದುಕೊಂಡು ಹೋದ ರವಿ ಯೋಗಿತಾಳ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:  Gadaga: ನಗರಸಭೆಯ ಸಾಮಾನ್ಯ ಸಭೆಯಲ್ಲೇ ಕಣ್ಣೀರು ಹಾಕಿದ ಅಧ್ಯಕ್ಷೆ!

ಇನ್ನು ಇದಾದ ಬಳಿಕ ಪತಿ ರವಿ ಮತ್ತು ಆತನ ಕುಟುಂಬಸ್ಥರು ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಇನ್ನು ವಿಚಾರ ತಿಳಿದ ಯೋಗಿತಾ ಕುಟುಂಬಸ್ಥರು ರವಿ ಮನೆ ಬಳಿ ಜಮಾಯಿಸಿದ್ದು, ನಮ್ಮ ಮಗಳ ಸಾವಿಗೆ ರವಿ ಮತ್ತು ಆತನ ಕುಟುಂಬದವರೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಕೊಲೆ ಮಾಡಿ ಪರಾರಿಯಾಗಿರುವ ರವಿಯನ್ನ ಬಂಧಿಸಬೇಕು ಅಲ್ಲಿಯವರೆಗೂ ಮೃತ ಯೋಗಿತಾ ಶವವನ್ನ ತೆಗೆಯಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದು, ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇನ್ನು ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published by:Pavana HS
First published: