• Home
 • »
 • News
 • »
 • state
 • »
 • Bengaluru: ಅಯ್ಯೋ ನನ್ ಹೆಂಡತಿ ಹೊಡೀತಾಳೆ; ನನ್ನನ್ನು ಕಾಪಾಡಿ, ಮೋದಿಗೆ ನೊಂದ ಪತಿರಾಯನ ದೂರು!

Bengaluru: ಅಯ್ಯೋ ನನ್ ಹೆಂಡತಿ ಹೊಡೀತಾಳೆ; ನನ್ನನ್ನು ಕಾಪಾಡಿ, ಮೋದಿಗೆ ನೊಂದ ಪತಿರಾಯನ ದೂರು!

ಮೋದಿಗೆ ದೂರು ಕೊಟ್ಟ ಪತಿರಾಯ

ಮೋದಿಗೆ ದೂರು ಕೊಟ್ಟ ಪತಿರಾಯ

ಹೆಂಡತಿ ಕಿರುಕುಳದಿಂದ ಮುಕ್ತಿ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಟ್ವಿಟ್ಟರ್​ ಮೂಲಕ ಪತಿಯೊಬ್ಬ ದೂರು ನೀಡಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಗಂಡ-ಹೆಂಡತಿ (Husband-Wife) ಜಗಳ ಉಂಡು ಮಲಗೋತನಕ ಎನ್ನುವ ಗಾದೆ ಮಾತಿದೆ. ಆದ್ರೆ ಇಲ್ಲೊಬ್ಬರ ಸಂಸಾರ ಜಗಳ ಬೀದಿಗೆ ಬಂದಿದೆ.  ಹೆಂಡತಿಯಿಂದ ನೊಂದ ಪತಿಯೊಬ್ಬ ಟ್ವೀಟ್ (Tweet) ತಮ್ಮ ಅಳಲು  ತೋಡಿಕೊಂಡಿದ್ದು, ಪತ್ನಿಯಿಂದ ರಕ್ಷಣೆ ಕೋರಿ ಪ್ರಧಾನಿಗೆ ದೂರು ನೀಡಿದ್ದಾರೆ. ನನ್ನ ಹೆಂಡತಿ ನನ್ನ ಮೇಲೆ ಹಲ್ಲೆ (Attack) ಮಾಡುತ್ತಾಳೆ. ನಿತ್ಯ ಜಗಳವಾಡಿ ಟಾರ್ಚರ್ (Torture)​ ನೀಡುತ್ತಿದ್ದಾಳೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಕಷ್ಟ ಹೇಳಿಕೊಂಡಿದ್ದಾನೆ. 


  ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ನನ್ನ ಪತ್ನಿ


  ಹೆಂಡತಿ ಕಿರುಕುಳದಿಂದ ಮುಕ್ತಿ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಟ್ವಿಟರ್​ ಮೂಲಕ ಪತಿಯೊಬ್ಬ ದೂರು ನೀಡಿದ್ದಾನೆ. ಇನ್ನು ತನ್ನ ಪತ್ನಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆಂದು ಎಂದು ಟ್ವಿಟರ್ ನಲ್ಲಿ ದೂರಲಾಗಿದೆ.


  ಯದುನಂದನ್ ಆಚಾರ್ಯ ಎಂಬಾತನಿಂದ ಟ್ವೀಟ್


  ಯದುನಂದನ್ ಆಚಾರ್ಯ ಎಂಬಾತ ಟ್ವೀಟ್​ ಮೂಲಕ ಹೆಂಡತಿಯಿಂದದ ಕಿರುಕುಳ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾನೆ. ನನಗೆ ಯಾರೂ ಸಹಾಯ ಮಾಡಲ್ಲ ಯಾಕೆಂದ್ರೆ ನಾನೊಬ್ಬ ಪುರುಷ ಎಂದು ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಇದು ನಾರಿ ಶಕ್ತಿಯ ಪ್ರಭಾವ ಎಂದು ದೂರು ನೀಡಿದ್ದಾರೆ.


  ಯದುನಂದನ್
  ಇದನ್ನೂ ಓದಿ:  MLA Tippareddy: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ; ಬೆತ್ತಲಾದ ಯುವತಿಯಿಂದ ವಿಡಿಯೋ ಕಾಲ್?


  ದೂರು ದಾಖಲಿಸಿ ಎಂದು ಪೊಲೀಸ್​ ಕಾಮೆಂಟ್​


  ಕೌಟುಂಬಿಕ ಕಲಹದ ದೂರು ದಾಖಲಿಸಬಹುದೇ ಎಂದು ಯದುನಂದನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಟ್ವಿಟರ್​ನಲ್ಲೇ ಉತ್ತರ ಕೊಟ್ಟಿರುವ ಪೊಲೀಸರು, ಪೊಲೀಸ್​ ಠಾಣೆಗೆ ಬಂದು ದೂರು ಕೊಡುವಂತೆ ರಿಪ್ಲೇ ಮಾಡಿದ್ದಾರೆ.  ಕಾಮೆಂಟ್ ಬಾಕ್ಸ್ ನಲ್ಲಿ ಮತ್ತೊಬ್ಬ ಪತ್ನಿಯಿಂದ ತನಗಾದ ಹಿಂಸೆ ಬಗ್ಗೆ ಅಳಲುತೊಡಿಕೊಂಡಿದ್ದಾನೆ.  My wife Dasara Gift ಎಂದು ತನ್ನ ಗಾಯದ ಫೋಟೋ ಹಾಕಿ ಕಾಮೆಂಟ್ ಮಾಡಿದ್ದಾನೆ.


  ಪತಿಯನ್ನೇ ಕೊಂದ ಪತ್ನಿ


  ತುಮಕೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ನಡೆದಿದೆ. ಪತಿ ನಾರಾಯಣ(52) ಹತ್ಯೆಗೈದ ಪತ್ನಿ ಅನ್ನಪೂರ್ಣ, ಶವವನ್ನು ಚರಂಡಿಗೆ ಎಸೆದಿದ್ದಾಳೆ. ಸದ್ಯ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೆಲಮಂಗಲ ಬಳಿಯ ಟೋಲ್​ನಲ್ಲಿ ಪತಿ ನಾರಾಯಣ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಜಗಳವಾಗುತ್ತಿತ್ತು. ಅಲ್ಲದೆ ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು, ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.


  ಇದನ್ನೂ ಓದಿ: DK Shivakumar: ಡಿಕೆಶಿಗೆ ಕೊಂಚ ನಿರಾಳ; ದೆಹಲಿ ಹೈಕೋರ್ಟ್​​ನಿಂದ EDಗೆ ನೋಟಿಸ್


  ಅಳಿಯನ ಮೇಲೆ ಮಚ್ಚಿನಿಂದ ಹಲ್ಲೆ


  ಮಾವ-ಬಾಮೈದ ಸೇರಿ ಅಳಿಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿತ್ತು. ಇಸ್ಲಾಂಪುರದ ಇದಾಯತ್ ಉಲ್ಲಾ ಖಾನ್ (30) ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಇಸ್ಲಾಂಪುರದ ಇದಾಯತ್ ಉಲ್ಲಾ ಖಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


  ಒಂದೇ ಗ್ರಾಮದ ದಂಪತಿಗಳು ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಸರಿಯಾಗಿ ಕುಟುಂಬ ನಿರ್ವಹಣೆ ಮಾಡಿರಲಿಲ್ಲ. ಆಗಾಗ್ಗೆ ಕುಟುಂಬದಲ್ಲಿ ಪತಿ-ಪತ್ನಿಯರ ನಡುವೆ ಗಲಾಟೆ, ಬಡಿದಾಟ ನಡೆದಿತ್ತು. ಹೀಗಾಗಿ ಪತ್ನಿ ಉನ್ನಿಸ ಪೋಷಕರಿಗೆ ಪತಿ ವಿರುದ್ಧ ದೂರಿದ್ದಾಳೆ. ಮಗಳ ದೂರಿನ್ವಯ ಪೋಷಕರ ನಡುವೆ ವಾಗ್ವಾದ ನಡೆದಿದ್ದು, ಮಾವ ಅನ್ಸರ್, ಬಾಮೈದ ಆಸ್ಕರ್ ಪಾಶ, ಹಲ್ಲೆ ನಡೆಸಿರುವ ಅರೋಪ ಕೇಳಿ ಬಂದಿದೆ. ಸದ್ಯ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  Published by:ಪಾವನ ಎಚ್ ಎಸ್
  First published: