Fake Baba: ರೋಗ ವಾಸಿ ಮಾಡೋ ಅಂದ್ರೆ ಆಕೆಯನ್ನೇ ಬುಟ್ಟಿಗೆ ಹಾಕೊಂಡ ನಕಲಿ ಬಾಬಾ! ನೊಂದ ಪತಿ ಮಾಡಿದ್ದೇನು ಗೊತ್ತಾ?

ಚಾಮರಾಜನಗರದಲ್ಲಿ ನಕಲಿ ಬಾಬಾನ ನಂಬಿ ಒಂದು ಸಂಸಾರವೇ (Family) ಹಾಳಾಗಿ ಹೋಗಿದೆ. ಹೆಂಡತಿಗೆ (Wife) ರೋಗ ಇದೆ ಅಂತ ನಕಲಿ ಬಾಬಾನ ಬಳಿ ಹೋದ ಗಂಡ (Husband), ಇದೀಗ ಹೆಣವಾಗಿದ್ದಾನೆ. ಈ ಬಗ್ಗೆ ಕುತೂಹಲಕಾರಿ ಹಾಗೂ ಆಘಾತಕಾರಿ ಮಾಹಿತಿ ಇಲ್ಲಿದೆ ಓದಿ…

ನಕಲಿ ಬಾಬಾ ಬಾಬಾ ಖುರ್ರಾಂ ಪಾಷಾ ಹಾಗೂ ಮಹಮದ್ ಅಫ್ಘಾನ್

ನಕಲಿ ಬಾಬಾ ಬಾಬಾ ಖುರ್ರಾಂ ಪಾಷಾ ಹಾಗೂ ಮಹಮದ್ ಅಫ್ಘಾನ್

  • Share this:
ಚಾಮರಾಜನಗರ: ಈಗೆಲ್ಲ ನಕಲಿ ಬಾಬಾಗಳದ್ದೇ (Fake Baba) ಹಾವಳಿ. ಮುಗ್ಧ ಜನರ (innocent people) ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ನಕಲಿ ಬಾಬಾಗಳು, ಅವರ ಭಾವನೆಯೊಂದಿಗೆ (Feelings) ಆಟವಾಡುತ್ತಾರೆ. ಹಲವರು ಮುಗ್ಧ ಜನರ ಹಣ (Money), ಒಡವೆನೆಲ್ಲ ದೋಚಿದರೆ, ಇನ್ನೂ ಕೆಲವರು ಅವರ ಪ್ರಾಣದೊಂದಿಗೆ ಆಟವಾಡಿದ ನಿದರ್ಶನಗಳೂ ಇಲ್ಲದಿಲ್ಲ. ಚಾಮರಾಜನಗರದಲ್ಲೂ (Chamarajanagar) ಇಂಥದ್ದೇ ಘಟನೆಯೊಂದು ನಡೆದಿದೆ. ನಕಲಿ ಬಾಬಾನ ನಂಬಿ ಒಂದು ಸಂಸಾರವೇ (Family) ಹಾಳಾಗಿ ಹೋಗಿದೆ. ಹೆಂಡತಿಗೆ (Wife) ರೋಗ ಇದೆ ಅಂತ ನಕಲಿ ಬಾಬಾನ ಬಳಿ ಹೋದ ಗಂಡ (Husband), ಇದೀಗ ಹೆಣವಾಗಿದ್ದಾನೆ. ಈ ಬಗ್ಗೆ ಕುತೂಹಲಕಾರಿ ಹಾಗೂ ಆಘಾತಕಾರಿ ಮಾಹಿತಿ ಇಲ್ಲಿದೆ ಓದಿ…

 ಚಾಮರಾಜನಗರದಲ್ಲಿ ಆಘಾತಕಾರಿ ಘಟನೆ

ಚಿಕಿತ್ಸೆಗೆಂದು ಬಂದಿದ್ದ ವಿವಾಹಿತೆಯನ್ನು ನಕಲಿ ಬಾಬಾ ಒಬ್ಬ ತಲೆಕೆಡಿಸಿ ತನ್ನತ್ತ ಸೆಳೆದುಕೊಂಡಿದ್ದಾನೆ ಎಂದು ತಿಳಿದ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಹಮದ್ ಅಫ್ಘಾನ್ ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಮೈಸೂರಿನ ಬಾಬಾ ಖುರ್ರಾಂ ಪಾಷಾ  ಎಂಬಾತನ ವಿರುದ್ಧ ಈಗ ಗಂಭೀರ ಆರೋಪ ಕೇಳಿ ಬಂದಿದೆ.

ಪತ್ನಿ ಚಿಕಿತ್ಸೆಗೆಂದು ಬಾಬಾ ಬಳಿ ಹೋಗಿದ್ದ ವ್ಯಕ್ತಿ

ಮಹಮ್ಮದ್ ಅಫ್ಘನ್ ಹಾಗೂ ಆತನ ಪತ್ನಿ ತಿನ್ಜೀಯಾ ಕೌಸರ್ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸದಲ್ಲಿ ವಾಸಿಸುತ್ತಿದ್ದರು. ಪತ್ನಿ ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿ ದಂಪತಿ ತೆರಳಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Uttara Kannada: ಗಡಿಭಾಗದಲ್ಲಿ ಗಾಂಜಾ ಘಾಟು! ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸ್

ಪರರ ಹೆಂಡತಿ ಜೊತೆ ಕ್ಲೋಸ್ ಆದ ಡೋಂಗಿ ಬಾಬಾ

ಈ ವೇಳೆ ನಾನು ದೇವರ ರೂಪ, ನಿಮ್ಮ ಎಲ್ಲ ಸಮಸ್ಯೆ ಬಗೆಹರಿಸ್ತೀನಿ ಅಂತ ಡೋಂಗಿ ಬಾಬಾ ರೀಲು ಬಿಟ್ಟಿದ್ದ. ಇದನ್ನು ನಂಬಿದ ದಂಪತಿ, ಆತನ ಬಳಿ ಆಗಾಗ ಹೋಗುತ್ತಿದ್ದರು. ಈ ವೇಳೆ ಬಾಬಾ ಖುರ್ರಂ ಪಾಷಾ, ಮಹಮ್ಮದ್ ಅಫ್ಘನ್‌ನ ಪತ್ನಿ  ತನ್ಜೀಯಾ ಕೌಸರ್ ಜೊತೆ ಸಲುಗೆ ಬೆಳೆಸಿಕೊಂಡ ಎನ್ನಲಾಗಿದೆ.

ಬಾಬಾ ಪ್ರವೇಶದಿಂದ ದಂಪತಿ ಮಧ್ಯೆ ವಿರಸ

ಬಾಬಾ ಜೊತೆ ಪತ್ನಿ ತನ್ಮಿಯಾ ಸಲುಗೆಯಿಂದ ಇರುವುದು ಪತಿ ಮಹಮ್ಮದ್ ಅಫ್ಘನ್‌ನ ಗಮನಕ್ಕೂ ಬಂದಿತ್ತು. ಇದರಿಂದ ಪತಿ, ಪತ್ನಿ ನಡುವೆ ವಿರಸ ಪ್ರಾರಂಭವಾಗಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು.

ತವರು ಮನೆ ಸೇರಿದ್ದ ಪತ್ನಿ

ತನ್ಜೀಯಾಗೆ ಡೋಂಗಿ ಬಾಬಾ ಖುರ್ರಂ ಪಾಷಾ ಸಂಪೂರ್ಣವಾಗಿ ಮೈಂಡ್ ವಾಶ್ ಮಾಡಿದ್ದ ಎನ್ನಲಾಗಿದೆ. . ಬಾಬಾನ ಮಾತು ಕೇಳಿಕೊಂಡು ತನ್ಜೀಯಾ, ತನ್ನ ಗಂಡನನ್ನು ತೊರೆದು, ಮೈಸೂರಿನ ತನ್ನ ತವರು ಮನೆ ಸೇರಿಕೊಂಡಿದ್ದಳಂತೆ.

ನೊಂದು ಆತ್ಮಹತ್ಯೆಗೆ ಶರಣಾದ ಪತಿ

ಬಾಬಾ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದು, ಪತ್ನಿ ತನ್ಮಿಯಾ ತವರು ಸೇರಿದ್ದಳು. ಇದರಿಂದ ಪತಿ ಮಹಮ್ಮದ್ ಅಫ್ಘನ್‌ ನೊಂದಿದ್ದ. ಮತ್ತೆ ಇದೇ ವಿಚಾರಕ್ಕೆ ಪತಿ, ಪತ್ನಿ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೆ ಏರಿ, ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮಹಮ್ಮದ್ ಅಫ್ಘನ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: Kodagu: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಸಾವು! ಅತ್ತೆ-ನಾದಿನಿಯರ ಮೇಲೆ ಗಂಭೀರ ಆರೋಪ

ಡೆತ್‌ ನೋಟ್‌ನಲ್ಲಿ ನಕಲಿ ಬಾಬಾನ ಬಗ್ಗೆ ಆರೋಪ

ಸಾಯುವ ಮುನ್ನ ಮಹಮ್ಮದ್ ಅಫ್ಘನ್‌  ಡೆತ್ ನೋಟ್ ಬರೆದಿಟ್ಟಿದ್ದಾನೆ. ಅದರಲ್ಲಿ ನನ್ನ ಸಾವಿಗೆ ಖುರ್ರಂ ಪಾಷಾ, ಅಬ್ದುಲ್ ರೆಹಮಾನ್, ಮಹಮದ್ ಅಜೀಂ, ಆಯೂಬ್ ಷರೀಪ್ ಎಂಬುವರು ಕಾರಣ ಎಂದು ಬರೆದಿದ್ದಾನೆ. ಇನ್ನು ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published by:Annappa Achari
First published: