• Home
  • »
  • News
  • »
  • state
  • »
  • Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ

Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ

ಪತ್ನಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ

ನನ್ನ ಹೆಂಡತಿಗೆ ಅತಿಯಾದ ದುಡ್ಡಿನಾಸೆ ಇದೆ. ಬರೀ ದುಡ್ಡು ದುಡ್ಡು ಅಂತಾಳೆ ನಾನು ಎಷ್ಟು ದುಡಿದ್ರು ಸಾಕಾಗುವುದಿಲ್ಲ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ ಎಂದು ಡೆತ್​ ನೋಟ್​ನಲ್ಲಿ ಬರೆದಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.16):  ಹೆಂಡತಿ ದುಡ್ಡಿನಾಸೆಗೆ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಬೆಂಗಳೂರಿನ ಶ್ರೀನಗರ (Srinagar) ಬಳಿಯ ಅವಲಹಳ್ಳಿಯಲ್ಲಿ ವಾಸವಾಗಿದ್ದ ಅಣ್ಣಯ್ಯ (Annayya), ಬಾರ್​ನಲ್ಲಿ (Bar) ಕ್ಯಾಶಿಯರ್​ ಆಗಿ ಕೆಲಸ ಮಾಡ್ತಿದ್ರು. ಎಷ್ಟು ಗಂಟೆ ಕೆಲಸ (Work) ಮಾಡಿ ಮನೆಗೆ ಬಂದ್ರೂ ಹೆಂಡತಿ ನೀವು ಕೊಡುವ ದುಡ್ಡು ಸಾಲುತ್ತಿಲ್ಲ ಎಂದು ಜಗಳ ತೆಗೆಯುತ್ತಿದ್ದಳಂತೆ ಇದ್ರಿಂದ ಅಣ್ಣಯ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.


Husband commits suicide in Bengaluru after his wife is tired of fighting pvn
ಪತ್ನಿ ಕಾಟಕ್ಕೆ ಗಂಡ ಆತ್ಮಹತ್ಯೆ


ದುಡ್ಡು ದುಡ್ಡು ಎನ್ನುತ್ತಾಳೆ ನನ್ನ ಹೆಂಡತಿ!


ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಅವರು 5 ವರ್ಷಗಳ ಹಿಂದೆ ಉಮಾ ಎಂಬಾಕೆಯನ್ನು ಮದುವೆ ಅಗಿದ್ದರು. ದಂಪತಿ ಶ್ರೀನಗರದಲ್ಲಿ ವಾಸವಾಗಿದ್ದರು. ಅಣ್ಣಯ್ಯ  ಬಾರ್ ಒಂದರಲ್ಲಿ ಕ್ಯಾಶಿಯರ್ ಅಗಿದ್ರು. ಎಷ್ಟು ದುಡಿದ್ರು ಹೆಂಡತಿ ದುಡ್ಡು ದುಡ್ಡು ಎನ್ನುತ್ತಿದ್ದಳಂತೆ ಇದೆ ವಿಚಾರಕ್ಕೆ ನಿತ್ಯ ಜಗಳವಾಡುತ್ತಿದ್ದಳು ಎಂದು ಅಣ್ಣಯ ಬೇಸತ್ತಿದ್ದರಂತೆ.




ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ


ನನ್ನ ಹೆಂಡತಿಗೆ ಅತಿಯಾದ ದುಡ್ಡಿನಾಸೆ ಇದೆ. ಬರೀ ದುಡ್ಡು ದುಡ್ಡು ಅಂತಾಳೆ ನಾನು ಎಷ್ಟು ದುಡಿದ್ರು ಸಾಕಾಗುವುದಿಲ್ಲ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟು ಬರೆದಿಟ್ಟು ಅಣ್ಣಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ


ದೊಡ್ಡಬಳ್ಳಾಪುರ: ಮತ್ತೊಂದೆಡೆ ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ  ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ರೂಂನ ಫ್ಯಾನ್​ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರದ ಕೆಂಪೇಗೌಡ ನಗರದಲ್ಲಿ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಮಹಿಳೆ  ನಂದಿನಿ (28) ನೇಣಿಗೆ ಶರಣಾದ ನತದೃಷ್ಟೆಯಾಗಿದ್ದಾರೆ. ಮಗುವನ್ನು ಬೆಳಗ್ಗೆ ಶಾಲೆಗೆ ಬಿಟ್ಟು ಬಂದು ನಂತರ ನಂದಿನಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ನದಿಗೆ ಹಾರಿ ಮಹಿಳೆ ಆತ್ಮಹತ್ಯೆ



ವಿಜಯಪುರ, ಕೃಷ್ಣಾ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲ್ಹಾರ ಪಟ್ಟಣದ ಕೃಷ್ಣಾ ನದಿ ಸೇತುವೆ ಬಳಿ ಈ ಘಟನೆ ನಡೆದಿದೆ. ಕೊಲ್ಹಾರ ತಾಲ್ಲೂಕಿನ ಮಟ್ಟಿಹಾಳ ಗ್ರಾಮದ ಶಾಂತವ್ವ ಬಸಪ್ಪ ಜಂಬಗಿ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನನೊಂದು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ


ಕೆಲ ದಿನಗಳ ಹಿಂದೆ ವಿದ್ಯಾರ್ಥಿ ಆತ್ಮಹತ್ಯೆ 




 ಬೆಂಗಳೂರು (ನ.14): ಪರೀಕ್ಷೆಯಲ್ಲಿ (Exam) ಕಾಪಿ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕಿ ನಿಂದಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ (Student Suicide) ಶರಣಾಗಿರುವ ಘಟನೆ ಬಾಣಸವಾಡಿಯ (Banasavadi) ಪಿಳ್ಳಾರೆಡ್ಡಿ ನಗರದಲ್ಲಿ ನಡೆದಿದೆ. 15 ವರ್ಷದ ಅಮೃತಾ ಡೆತ್​ ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಬಾಣಸವಾಡಿಯ ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ (SSLC) ಓದುತ್ತಿದ್ದ ಅಮೃತಾ ಪರೀಕ್ಷೆಯಲ್ಲಿ  ಕಾಪಿ ಮಾಡ್ತಿದ್ರು ಎಂದು ಶಿಕ್ಷಕಿ ಶಾಲಿನಿ (Teacher) ನಿಂದಿಸಿದ್ದರಂತೆ. ಎಲ್ಲಾ ವಿದ್ಯಾರ್ಥಿಗಳ ಮುಂದೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

Published by:ಪಾವನ ಎಚ್ ಎಸ್
First published: